ಕನ್ನಡಪ್ರಭ ವಾರ್ತೆ ಬೈಲಹೊಂಗಲ: ನಮಗೆ ಶಕ್ತಿ ಬಂದಾಗ ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ ಎಂದು ಹೇಳುವ ಮತಾಂಧರನ್ನು ಬಗ್ಗು ಬಡಿಯಲು ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಮಗೆ ಶಕ್ತಿ ಬಂದಾಗ ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ ಎಂದು ಹೇಳುವ ಮತಾಂಧರನ್ನು ಬಗ್ಗು ಬಡಿಯಲು ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ತಾಲೂಕಿನ ಹೊಸೂರಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತುಷ್ಟೀಕರಣದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದು ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ಕೊಲೆ ಮಾಡಿದವರು ಅಲ್ಪಸಂಖ್ಯಾತ ಗೂಂಡಾಗಳ ರಕ್ಷಣೆಯಲ್ಲಿ ತೊಡಗಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಜನತೆಯ ಸಾಮಾನ್ಯ ಸೇವೆಗಳಾದ ಜನನ, ಮರಣ ಹಾಗೂ ಜಮೀನು ಉತಾರಗಳ ಬೆಲೆ ಏರಿಸಿದೆ. ₹ 20 ಬಾಂಡ್ ಬಂದ್‌ ಮಾಡಿ ನೂರು, ಇನ್ನೂರು ₹ 500ಗೆ ಏರಿಸಿದೆ. ಕಾಂಗ್ರೆಸ್ ಜನತೆಯ ಪಿಕ್ ಪಾಕೆಟ್ ಮಾಡುವ ಕಲೆ ಕರಗತ ಮಾಡಿಕೊಂಡಿದೆ ಎಂದು ದೂರಿದರು.ಈ ವೇಳೆ ಮಾಜಿ ಶಾಸಕರಾದ ಜಗದೀಶ್ ಮೆಟಗುಡ್ಡ, ಡಾ.ವಿ.ಐ.ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಗುರು ಮೆಟಗುಡ್ಡ, ವಿಜಯ ಮೆಟಗುಡ್ಡ, ಮಡಿವಾಳಪ್ಪ ಚಳಕೊಪ್ಪ, ಗೌಡಪ್ಪ ಹೊಸಮನಿ, ಸುನೀಲ ಮೇಟಿ, ದಿಲೀಪ್ ವರ್ಣೇಕರ್, ಸುಭಾಷ ಬಾಗೇವಾಡಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಮುಶೆಪ್ಪ ಜಡಿ, ಮಲ್ಲಿಕಾರ್ಜುನ ವಕ್ಕುಂದ, ಜಯಶ್ರೀ ಇಂಗಳಗಿ, ಮಡಿವಾಳಪ್ಪ ಕಮತಗಿ, ಮಲ್ಲವ್ವ ಬಾರಿಗಿಡದ, ಸಂಜು ಪಾಟೀಲ, ಮಲ್ಲವ್ವ ಸುತಗಟ್ಟಿ, ದೀಪಾ ಪಾಟಿಲ ಹಾಗೂ ಬಿಜೆಪಿ ಮುಖಂಡರಾದ ಶ್ರೀಶೈಲ ಯಡಹಳ್ಳಿ, ಅಶೋಕ ಇಂಗಳಗಿ, ರಮೇಶ ವಕ್ಕುಂದ, ಅಜ್ಜಪ್ಪ ಸಂಗೊಳ್ಳಿ, ಕುಮಾರ ಸೊಗಲ, ಯಲ್ಲಪ್ಪ ಮುಗಬಸವ ಸೇರಿ ಇತರರು ಭಾಗವಹಿಸಿದ್ದರು.

--------------

ಕೋಟ್‌.....ಬೋರ್‌ವೆಲ್‌ ಕೊರೆಸಿದ ರೈತರಿಗೆ ₹ 20 ಸಾವಿರದಲ್ಲಿ ಟಿಸಿ, ಕಂಬ, ತಂತಿ ನೀಡಿದರೆ ಕಾಂಗ್ರೆಸ್ ಈ ಯೊಜನೆಯನ್ನು ಐದು ಲಕ್ಷಕ್ಕೆ ಹೆಚ್ಚಿಸಿ ಹಗಲು ದರೋಡೆ ನಡೆಸುತ್ತಿದೆ. ಇದು ಬ್ಲೇಡ್‌ ಇಲ್ಲದೆ ತಲೆಬೋಳಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಆದರೆ, ಮೋದಿಜಿಯವರ ಆಡಳಿತವನ್ನು ವಿಶ್ವವೇ ಮೆಚ್ಚಿದ್ದು, ಅವರ ಗೆಲುವಿಗಾಗಿ ಶ್ರಮಿಸೋಣ.-ಸಿ.ಟಿ.ರವಿ, ಮಾಜಿ ಸಚಿವ.

--------------

ನಮ್ಮ ಸರ್ಕಾರ ಬಂದು 3 ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಿಸುತ್ತೇನೆಂದರು ಸಚಿವೆ ಲಕ್ಷ್ಮಿ ಅಕ್ಕ. ಅಧಿಕಾರಕ್ಕೆ ಬಂದು ವರ್ಷ ಸಮೀಪಿಸಿದರೂ ಚಕಾರ ಎತ್ತದವರು ಆ ಸಮಾಜದ ಹೆಸರಿನ‌ ಮೇಲೆ ಮತ ಕೇಳುವ ನೈತಿಕತೆ ಏನಿದೆ?. ಸಚಿವ ಸ್ಥಾನಕ್ಕೆ ಮೊದಲು ರಾಜೀನಾಮೆ ನಿಡಲಿ. ಇಲ್ಲದಿದ್ದರೇ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಿಸಲಿ.

- ಮುರಗೇಶ ನಿರಾಣಿ, ಮಾಜಿ ಸಚಿವ.