ಭಾರತದ ಇತಿಹಾಸದಲ್ಲಿ ಅತೀದೀರ್ಘ ಅವಧಿಯ ಪ್ರಧಾನಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರಿಗೆ ಆರೋಗ್ಯ, ದೀರ್ಘಾಯುಷ್ಯ, ವಿಕಸಿತ ಭಾರತದ ಸಂಕಲ್ಪ ಸಿದ್ದಿಗಾಗಿ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕೊಡವೂರು ವಾರ್ಡ್ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಮಲ್ಪೆ: ಭಾರತದ ಇತಿಹಾಸದಲ್ಲಿ ಅತೀದೀರ್ಘ ಅವಧಿಯ ಪ್ರಧಾನಮಂತ್ರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರಿಗೆ ಆರೋಗ್ಯ, ದೀರ್ಘಾಯುಷ್ಯ, ವಿಕಸಿತ ಭಾರತದ ಸಂಕಲ್ಪ ಸಿದ್ದಿಗಾಗಿ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಕೊಡವೂರು ವಾರ್ಡ್ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ 4399 ದಿನಗಳಿಂದ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಕನಸು ನನಸಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರಿಗೆ ದೇಶದ ಪ್ರತಿಯೋರ್ವ ನಾಗರಿಕರ ಸಹಕಾರದ ಜತೆಗೆ ದೈವದೇವರ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.ಉಡುಪಿ ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ವಿಜಯ ಕೊಡವೂರು, ರವಿರಾಜ್ ಹೆಗ್ಡೆ, ನಾರಾಯಣ ಬಲ್ಲಾಳ್, ಸುಧಾಕರ್ ಎ. ಕುಂದರ್, ಪ್ರಭಾತ್ ಕೊಡವೂರು, ಲಕ್ಷ್ಮೇಶ್ ಬಂಗೇರ, ವಿನಯ ಕುಮಾರ್ ಪಡುಕರೆ, ರಮೇಶ್ ಮಾಸ್ತರ್, ಪ್ರದೀಪ್ ಕುಂದರ್, ಚಂದ್ರಕಾಂತ್ ಶೆಟ್ಟಿಗಾರ್, ಸದಾನಂದ ಶೇರಿಗಾರ್, ಮಹಿಳಾ ಮೋರ್ಚಾದ ಪ್ರಮುಖರಾದ ಸುಲತಾ ಶೆಟ್ಟಿ, ಕೀರ್ತಿ ವಿಜಯ್, ಯಶೋದಾ ರಾಜೇಂದ್ರ, ದೀಪಾ ಪೈ, ಗುಣವತಿ, ಚಂದ್ರಾವತಿ, ಮಾಯಾ ಕಾಮತ್, ತ್ರಿವೇಣಿ, ಸುಜಾತ, ನೀತಾ, ಸುಭದ್ರ ಮತ್ತಿತರರಿದ್ದರು.