ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಭಾನುವಾರ ಸಂಜೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ನಗರದ ಕಾಮಣ್ಣನಗುಡಿ ಸರ್ಕಲ್ ಹಾಗೂ ಐಜೂರು ವೃತ್ತದಲ್ಲಿ ಸೇರಿ ಉಭಯ ಪಕ್ಷಗಳ ಕಾರ್ಯಕರ್ತರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಹಾಗೂ ರಾಜ್ಯದ ಐವರಿಗೆ ಸಚಿವ ಸ್ಥಾನ ಒಲಿದಿರುವ ಪ್ರಯುಕ್ತ ಪಟಾಕಿ ಸಿಡಿಸಿ, ಸಿಹಿಹಂಚಿ ಜೈಕಾರ ಹಾಕಿ ಸಂಭ್ರಮಿಸಿದರು. ಕೈಯಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಬಾವುಟ ಹಿಡಿದು ನರೇಂದ್ರಮೋದಿ, ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಪರ ಜೈಕಾರ ಹಾಕುತ್ತಾ ಸಿಹಿಹಂಚಿ ಸಂತಸಪಟ್ಟರು. ನಗರ ಬಿಜೆಪಿ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ ಮಾತನಾಡಿ, 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ. ಇದು ಸಂತೋಷದ ವಿಷಯ. ಜೊತೆಗೆ ರಾಜ್ಯದಿಂದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಪ್ರಹ್ಲಾದ್ ಜೋಷಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಅವರಿಗೆ ಸ್ಥಾನ ಸಿಕ್ಕಿದೆ. ಎಲ್ಲರಿಗೂ ಜೆಡಿಎಸ್ ಬಿಜೆಪಿ ಪಕ್ಷದ ವತಿಯಿಂದ ಶುಭಾಶಯ ಕೋರುತ್ತಿದ್ದೇವೆ ಎಂದು ತಿಳಿಸಿದರು.ಮುಖಂಡರಾದ ಎಸ್.ಆರ್. ನಾಗರಾಜು, ಜಿ.ಟಿ. ಕೃಷ್ಣ, ಕಾಳಯ್ಯ, ಸಂಜಯ್, ಹುಚ್ಚಮ್ಮನದೊಡ್ಡಿ ಲೋಕೇಶ್, ಪ್ರಕಾಶ್, ಪ್ರವೀಣ್‌ಗೌಡ, ಜಯಕುಮಾರ್, ರಮೇಶ್, ರಾಘವೇಂದ್ರ, ಚಂದ್ರಶೇಖರರೆಡ್ಡಿ, ರುದ್ರದೇವರು, ರವಿ, ನಾಗೇಶ್, ಕೆಂಪರಾಜು, ಬಿಜೆಪಿ ಮಂಜು, ವಿನೋದ್, ಚನ್ನಪ್ಪ, ಹೇಮಾವತಿ, ದೇವಿಕಾ, ಧರ್ಮೆಂದ್ರ, ರಾಜು, ಲೋಕೇಶ್, ಬದ್ರಿನಾಥ್, ಬಸವರಾಜು, ವಾಸು ಮುಂತಾದವರು ಹಾಜರಿದ್ದರು.