ಮೋದಿ ಪ್ರಮಾಣವಚನ: ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ

| Published : Jun 10 2024, 12:31 AM IST

ಸಾರಾಂಶ

ನರೇಂದ್ರ ಮೋದಿಯವರು ಸತತವಾಗಿ 3 ಬಾರಿ ಪ್ರಧಾನ ಮಂತ್ರಿಗಳಾಗುವುದರ ಮೂಲಕ ಇತಿಹಾಸ ಸೃಷ್ಟಿ

ಚಿತ್ರದುರ್ಗ: ದೇಶದ ಪ್ರಧಾನ ಮಂತ್ರಿಯಾಗಿ 3ನೇ ಬಾರಿಗೆ ನೇಮಕವಾಗಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆ ಭಾನುವಾರ ಸಂಜೆ ಬಿಜೆಪಿಯಿಂದ ಜೆಸಿಆರ್ ಬಡಾವಣೆ ಗಣಪತಿ ಮತ್ತು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಶಾಸಕ ಜಿ.ಎಚ್,ತಿಪ್ಪಾರೆಡ್ಡಿ ಮಾತನಾಡಿ, ನೆಹರೂವರು 3 ಬಾರಿ ದೇಶದ ಪ್ರಧಾನ ಮಂತ್ರಿಗಳಾಗಿದ್ದರು, ತದ ನಂತರ ಯಾರೂ ಸಹಾ ಮೂರು ಭಾರಿ ಪ್ರಧಾನ ಮಂತ್ರಿಗಳಾಗಿರಲಿಲ್ಲ. ಆದರೆ ಈಗ ನರೇಂದ್ರ ಮೋದಿಯವರು ಸತತವಾಗಿ 3 ಬಾರಿ ಪ್ರಧಾನ ಮಂತ್ರಿಗಳಾಗುವುದರ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದರು.

ಕಳೆದ 10 ವರ್ಷ ಮೋದಿಯವರು ಪ್ರಧಾನಮಂತ್ರಿಗಳಾಗುವುದರ ಮೂಲಕ ದೇಶ ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ದಿನಮಾನದಲ್ಲಿ ದೇಶ ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಮೋದಿಯವರ ಪ್ರಮಾಣ ವಚನ ಸಮಯದಲ್ಲಿ ಪ್ರಪಂಚದ ವಿವಿಧ ದೇಶದ ನಾಯಕರು ಭಾಗವಹಿಸುವುದರ ಮೂಲಕ ಮೋದಿಯವರಿಗೆ ಬಲ ನೀಡಿದ್ದಾರೆ ಎಂದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭಾ ಸದಸ್ಯರಾದ ಶ್ರೀಮತಿ ರೋಹಿಣಿ, ಹರೀಶ್, ಕೃಷ್ಣಮೂರ್ತಿ, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ನಾಗೇಂದ್ರಪ್ಪ, ಮುರುಗೇಶ್, ರಮೇಶ್, ಸೋಮಣ್ಣ, ಆದರ್ಶ, ಕಲಾ, ವಿರೂಪಾಕ್ಷ, ಗೋಪಿ, ವೆಂಕಟೇಶ್, ಪ್ರದೀಪ್, ವೆಂಕಟೇಶ್ ಸೇರಿ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಇದ್ದರು.

ಇದೇ ವೇಳೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.