ಫುಟ್ಬಾಲ್‌: ಮೊಗ್ರಲ್ ಎಫ್.ಸಿ. ಕುಂಬ್ಳೆ ತಂಡ ಮುನ್ನಡೆ

| Published : May 19 2025, 12:00 AM IST

ಸಾರಾಂಶ

ರಾಜ್ಯ ಮಟ್ಟದ ಗೋಲ್ಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 3ನೇ ದಿನದ ಪಂದ್ಯಾವಳಿಯಲ್ಲಿ ಮೊಗ್ರಲ್‌ ಎಫ್‌ ಸಿ ಕುಂಬ್ಲೆ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಡಿ. ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 3ನೇ ದಿನವಾದ ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಮೊಗ್ರಲ್ ಎಫ್.ಸಿ. ಕುಂಬ್ಳೆ ತಂಡ ಮುಂದಿನ ಸುತ್ತಿಗೆ ಪ್ರವೇಶಿಸಿತು.

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39 ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ಮೊಗ್ರಲ್ ಎಫ್.ಸಿ ಕುಂಬ್ಳೆ ಹಾಗೂ ಸ್ವರ್ಣ ಎಫ್.ಸಿ.ಮಂಡ್ಯ ತಂಡಗಳ ನಡುವೆ ನಡೆದ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡವು ಮೊದಲಾರ್ಧದಲ್ಲಿ 13ನೇ ನಿಮೀಷದಲ್ಲಿ ಅಬಿದ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ 2ನೇ ನಿಮೀಷದಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ಅಭೀದ್ ಮತ್ತೊಂದು ಗೋಲುಗಳಿಸುವ ಎದುರಾಳಿ ತಂಡಕ್ಕೆ ಒತ್ತಡವನ್ನು ಹೆಚ್ಚಿಸಿದರು. ಮತ್ತೆ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡದ ಆಟಗಾರ 13ನೇ ನಿಮೀಷದಲ್ಲಿ ನಿಶಾದ್ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ನೀಡಿದರು. 17ನೇ ನಿಮಿಷದಲ್ಲಿ ರಶೀದ್ 1 ಗೋಲುಗಳಿಸುವ ಮೂಲಕ ಎದುರಾಳಿ ತಂಡವನ್ನು 4-0 ಗೋಲುಗಳಿಂದ ಮಂಡ್ಯ ತಂಡವನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ದ್ವಿತೀಯ ಪಂದ್ಯಾವಳಿಯು ಇಂಡಿಪೆಂಡೆಂಟ್ ಎಫ್.ಸಿ ಬೆಂಗಳೂರು ಹಾಗೂ ಮಂಗಳೂರು ಎಫ್.ಸಿ.ಮಂಗಳೂರು 2 ತಂಡಗಳು ಬಾರದ ಹಿನ್ನಲೆಯಲ್ಲಿ ಪಂದ್ಯಾವಳಿಯನ್ನು ರದ್ದುಗೊಳಿಸಲಾಯಿತು.

ನಿವೃತ್ತ ಯೋಧ ಮಧುಸೂಧನ್ ಚೆಂಡು ಒದೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಶಾರ್ಜದ ಉದ್ಯಮಿ ಅಬ್ಬಾಸ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ್ ಇದ್ದರು.

ಇಂದಿನ ಪಂದ್ಯಾವಳಿಗಳು

ಮೊದಲ ಪಂದ್ಯ 3 ಗಂ. ಅತಿಥೇಯ ಬ್ಲೂಬಾಯ್ಸ್ ಯೂತ್ ಕ್ಲಬ್ - ನೇತಾಜಿ ಕೊಡಗರಹಳ್ಳಿ

ದ್ವಿತೀಯ ಪಂದ್ಯಾವಳಿ 4 ಗಂ.

ಶೀತಲ್ ಎಫ್.ಸಿ ಮೈಸೂರು - ಇಕೆಎನ್ ಎಫ್.ಸಿ.ಕೋಳಿಕಡಾವು, ಇರಿಟಿ ಕಣ್ಣೂರು