ಮುಂಗಾರು ಬಿರುಸು : ಕರಾವಳಿಯ 3 ಜಿಲ್ಲೆಗೆ ರೆಡ್ ಅಲರ್ಟ್

| Published : Jun 24 2024, 01:31 AM IST / Updated: Jun 27 2024, 08:04 AM IST

ಮುಂಗಾರು ಬಿರುಸು : ಕರಾವಳಿಯ 3 ಜಿಲ್ಲೆಗೆ ರೆಡ್ ಅಲರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು ಮೂರು ಜಿಲ್ಲೆಗಳಿಗೆ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ.

 ಮಂಗಳೂರು/ಉಡುಪಿ :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು  ಬಿರುಸುಗೊಂಡಿದ್ದು ಮೂರು ಜಿಲ್ಲೆಗಳಿಗೆ ರೆಟ್ ಅಲರ್ಟ್ ಘೋಷಣೆ ಮಾಡಲಾಗಿದೆ.    

ಜೂ.27 ರಂದು   ದ.ಕ. ಉಡುಪಿ, ಕೊಡಗು ಜಿಲ್ಲೆಗೆ ಭಾರೀ ಮಳೆಯ ರೆಡ್‌ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ.

 24 ಗಂಟೆಯಲ್ಲಿ 20 ಸೆ ಮೀ ಗಿಂತ ಅಧಿಕ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. 

ಇನ್ನು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್  ಘೋಷಿಸಿದ್ದು 15 - 20 ಸೆ,ಮೀ ಮಳೆಯಾಗುವ ಸಾಧ್ಯತೆ ಇದೆ, ಇನ್ನು ವಿಜಯಪುರ, ಬೆಳಗಾವಿ ಸೇರಿದಂತೆ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.