ಸಾರಾಂಶ
ಗಂಗಾವತಿ: ತಾಲೂಕಿನ ಸಾಣಾಪುರದ ಪ್ರವಾಸಿ ಮಂದಿರ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಸಂಚರಿಸುತ್ತ ಪ್ರವಾಸಿಗರ ಸುಲಿಗೆ ಮಾಡುತ್ತಿದ್ದ 10ಕ್ಕೂ ಹೆಚ್ಚು ತೆಪ್ಪಗಳನ್ನು ಸಾಣಾಪುರ ಗ್ರಾಮ ಪಂಚಾಯಿತಿ ಜಪ್ತಿ ಮಾಡಿದೆ.
ನ. 8ರಂದು ''''ಕನ್ನಡಪ್ರಭ''''ದಲ್ಲಿ ತುಂಗಭದ್ರಾ ನದಿಯಲ್ಲಿ ಅಕ್ರಮ ತೆಪ್ಪಗಳ ಸಂಚಾರ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಸಾಣಾಪುರ ಸಿಬ್ಬಂದಿ ದಾಳಿ ನಡೆಸಿ ಈ ಕ್ರಮ ಕೈಂಡಿದ್ದಾರೆ.ಈ ಹಿಂದೆ ಸಾಣಾಪುರ ಸಮತೋಲನಾ ಜಲಾಶಯ, ಋಷಿಮುಖ ಪರ್ವತ, ಹನುಮನಹಳ್ಳಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕಿ ಪ್ರವಾಸಿಗರಿಂದ ಅಧಿಕ ಹಣ ಪಡೆಯುತ್ತಿರುವುರಿಂದ ತೆಪ್ಪಗಳನ್ನು ಜಪ್ತಿ ಮಾಡಿದ್ದರು. ಆದರೆ, ಕೆಲವರ ಒತ್ತಡಕ್ಕೆ ಮಣಿದ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯವರು ರಾತ್ರೋ ರಾತ್ರಿ ತೆಪ್ಪಗಳನ್ನು ಬಿಡುಗಡೆ ಮಾಡಿದ್ದರು.
ಅಧಿಕಾರಿಗಳಿಗೆ ಒತ್ತಡಶನಿವಾರ ಮತ್ತು ಭಾನುವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿದೇಶಿ ಪ್ರವಾಸಿಗರಿಗೆ ತೆಪ್ಪದಲ್ಲಿ ಸಂಚರಿಸುವುದು ಇಷ್ಟವಾದ್ದರಿಂದ ಅಧಿಕ ಹಣ ನೀಡಿ ಸಂಚರಿಸುತ್ತಿದ್ದಾರೆ. ಈಗ ತೆಪ್ಪಗಳ ಸಂಚಾರಕ್ಕೆ ಕಡಿವಾಣ ಹಾಕಿದ್ದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಅನುಮತಿ ನೀಡಲ್ಲ
ಸಾಣಾಪುರ ಪ್ರವಾಸಿ ಮಂದಿರ ಹತ್ತಿರ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಸಂಚಾರ ರದ್ದುಪಡಿಸಲಾಗಿದೆ. ಟೆಂಡರ್ ಕರೆದು ಅನುಮತಿ ನೀಡಬೇಕಾಗಿತ್ತು. ಈಗ ಯಾವುದೇ ರೀತಿಯ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಸಾಣಾಪುರ ಪಿಡಿಒ ವತ್ಸಲಾ ತಿಳಿಸಿದ್ದಾರೆ.