ರೈಲಿಗೆ ಸಿಲುಕಿ 50ಕ್ಕೂ ಹೆಚ್ಚು ಕುರಿ ಸಾವು

| Published : May 15 2024, 01:31 AM IST

ರೈಲಿಗೆ ಸಿಲುಕಿ 50ಕ್ಕೂ ಹೆಚ್ಚು ಕುರಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಕೆರೆಯಲ್ಲಿ ನೀರು ಕುಡಿಸಲು ರೈಲ್ವೆ ಹಳಿ ದಾಟುವಾಗ ರೈಲು ಕುರಿಗಳ ಮೇಲೆ ಹರಿದ ಪರಿಣಾಮ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಿಡವಂದ ರೈಲ್ವೆ ನಿಲ್ದಾಣದ ಕೆರೆ ಸಮೀಪ ನಡೆದಿದೆ.

ದಾಬಸ್‌ಪೇಟೆ: ಕೆರೆಯಲ್ಲಿ ನೀರು ಕುಡಿಸಲು ರೈಲ್ವೆ ಹಳಿ ದಾಟುವಾಗ ರೈಲು ಕುರಿಗಳ ಮೇಲೆ ಹರಿದ ಪರಿಣಾಮ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಿಡವಂದ ರೈಲ್ವೆ ನಿಲ್ದಾಣದ ಕೆರೆ ಸಮೀಪ ನಡೆದಿದೆ.

ನಿಡವಂದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಸಂಜೆ 4 ಗಂಟೆ ಸುಮಾರಿನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ 50ಕ್ಕೂ ಹೆಚ್ಚು ಕುರಿಗಳು ಸಿಕ್ಕಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ತುಮಕೂರು ಜಿಲ್ಲೆ ದೊಡ್ಡಾಲದ ಮರದ ಬಳಿಯ ಹೊಸಮಾರನಹಳ್ಳಿ ರೈತ ದೇವರಾಜು ಮತ್ತಿತರ ರೈತರಿಗೆ ಸೇರಿರುವ 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಕುರಿಗಳು ಮೃತಪಟ್ಟಿವೆ.

ಬೇಸಿಗೆಯಲ್ಲಿ ತುಮಕೂರು ಜಿಲ್ಲೆಯ ಶಿರಾ ರೈತರು ಕುರಿಗಳನ್ನು ಮೇಯಿಸುತ್ತಾ ಈ ಭಾಗಕ್ಕೆ ಬರುವುದು ಸಾಮಾನ್ಯವಾಗಿದ್ದು, ಅದರಂತೆ ಮಳೆಗಾಲ ಶುರುವಾದಾಗ ರೈತರ ಜಮೀನಿನಲ್ಲಿ ಕುರಿಗಳನ್ನು ಕೂಡಿಸಿ ಗೊಬ್ಬರ ಮಾಡುವುದು ರೂಢಿ. ರೈತ ದೇವರಾಜು ಮಾತನಾಡಿ, ನಾವು ಕುರಿಗಳಿಂದಲೇ ಬದುಕು ಕಟ್ಟಿಕೊಂಡಿದ್ದು, ಕುರಿಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದು, ಸರ್ಕಾರ ನಮಗೆ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಸ್ಥಳೀಯ ನಿವಾಸಿ ಪುಟ್ಟರಾಜು ಮಾತನಾಡಿ, ದಾಬಸ್‌ಪೇಟೆಯಿಂದ ನಿಡವಂದ ಗ್ರಾಮದವರೆಗೂ ಜನ, ಜಾನುವಾರುಗಳು ರೈಲ್ವೇ ಅಳಿ ದಾಟಲು ಕೂಡಲೇ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ರೈಲ್ವೇ ಸಿಬ್ಬಂದಿಗೆ ತರಾಟೆ: ನಮಗೆ ಐದು ಕುರಿಗಳನ್ನು ನೀಡಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕೇಸು ಹಾಕುವುದಾಗಿ ರೈತರಿಗೆ ಹೆದರಿಸಿದ ರೈಲ್ವೇ ಅಧಿಕಾರಿಗಳಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರಾದರೂ ಅಧಿಕಾರಿಯೊಬ್ಬರು ಕುರಿಯನ್ನು ಹೊತ್ತೊಯ್ದರು. ಪೋಟೋ 11 :.

ಸಾವನ್ನಪ್ಪಿರುವ ಕುರಿಗಳನ್ನು ವೀಕ್ಷಿಸುತ್ತಿರುವ ಸ್ಥಳೀಯ ಜನರು.