ಮುಧೋಳದಲ್ಲಿ ಶೀಘ್ರ ತಾಯಿ-ಮಗು ಆಸ್ಪತ್ರೆ ಆರಂಭ: ದಿನೇಶ ಗುಂಡೂರಾವ್‌

| Published : Jun 29 2024, 12:31 AM IST

ಸಾರಾಂಶ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್‌ ಗುರುವಾರ ಮುಧೋಳ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿರುವಾಗ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಟಿ ಪರಿಶೀಲನೆ ನಡೆಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್‌ ಗುರುವಾರ ಮುಧೋಳ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿರುವಾಗ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಟಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳ ತಾಲೂಕಿಗೆ ತಾಯಿ-ಮಗು ಆಸ್ಪತ್ರೆ ಮಂಜೂರಾಗಿದ್ದು, ಆಸ್ಪತ್ರೆ ಕಾರ್ಯಾರಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಮುಂಬರುವ ದಿನಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ‌ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಸುಸಜ್ಜಿತ ಆಕ್ಸಿಜನ್ ಘಟಕವಿದ್ದು, ಅಗತ್ಯ ತಜ್ಞರ ತಂಡವಿರದ ಕಾರಣ ಹಾಳಾಗುತ್ತಿದೆ, ಮುಂದಿನ ದಿನಗಳಲ್ಲಿ ಅಗತ್ಯ ತಜ್ಞರ ತಂಡ ನೇಮಿಸಿ ಆಕ್ಸಿಜನ್ ಬಳಕೆಗೆ ಕ್ರಮವಹಿಸಲಾಗುವುದು ಎಂದರು. ಆಸ್ಪತ್ರೆಯಲ್ಲಿನ ಸ್ವಚ್ಛತೆ ಕಂಡು ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಒದಗಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ, ಡಾ. ಜಿ.ಎನ್. ಶ್ರೀನಿವಾಸ, ಡಾ. ಅನಂತ ದೇಸಾಯಿ, ಡಿಎಚ್ಒ ಜಯಶ್ರೀ ಎಮ್ಮಿ, ಡಾ. ರಾಜಕುಮಾರ ಯರಗಲ್ಲ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ಟಿಎಚ್ಒ ಗಳಾದ ವೆಂಕಟೇಶ ಮಲಘಾಣ, ಡಾ. ಜಿ. ಎಸ್. ಗಲಗಲಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಶೋಕ ಎ.ಸೂರ್ಯವಂಶಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಶೀಲ್ ಕುಮಾರ್ ಬೆಳಗಲಿ, ಹನಮಂತ ತಿಮ್ಮಾಪುರ, ಅಶೋಕ ಕಿವಡಿ, ರಾಘು ಮೊಕಾಶಿ ಸೇರಿದಂತೆ ಇತರರು ಇದ್ದರು.್