ಇಂದು ಶಿಕ್ಷಕರ ದಿನ- ಡಾ.ರಾಧಾಕೃಷ್ಣನ್‌ ಅವರ ರೀತಿ ನಾವು ಆಗೋಣ...

| Published : Sep 05 2025, 01:00 AM IST

ಇಂದು ಶಿಕ್ಷಕರ ದಿನ- ಡಾ.ರಾಧಾಕೃಷ್ಣನ್‌ ಅವರ ರೀತಿ ನಾವು ಆಗೋಣ...
Share this Article
  • FB
  • TW
  • Linkdin
  • Email

ಸಾರಾಂಶ

ಈಗಿನ ಆಧುನಿಕ ಜಗತ್ತಿನಲ್ಲಿ ವೃತ್ತಿ ಧರ್ಮ ಪಾಲಿಸಲು ತಿಣುಕಾಡುತ್ತಿದ್ದಾರೆ.

ತತ್ವಜ್ಞಾನಿ, ಭಾರತದ ಹೆಮ್ಮೆಯ ಮಾಜಿ ರಾಷ್ಟ್ರಪತಿ, ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ರಾಧಾಕೃಷ್ಣನ್‌ ಅವರ ಜನ್ಮದಿನವಾದ ಸೆ. 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ಹೇಳಲಾಗುತ್ತದೆ.

ತಂದೆ-ತಾಯಿ ನಂತರದ ಸ್ಥಾನವನ್ನು ಗುರು ಪಡೆದಿದ್ದಾನೆ. ಇದರಿಂದ ಗುರುವಿನ ಮಹತ್ವ ಎಂತಹದ್ದು ಎಂಬುದು ಅರಿವಾಗುತ್ತದೆ. ತಾಯಿ ಮೊದಲ ಗುರು, ಶಿಕ್ಷಕ ಎರಡನೇ ತಾಯಿ ಎಂದು ಕರೆಯುವ ವಾಡಿಕೆಯಿದೆ. ಗುರುಕುಲ ಪದ್ಧತಿ ಆಚರಿಸುತ್ತಿದ್ದ ನಮ್ಮ ದೇಶದಲ್ಲಿ ಗುರುವಿಗೆ ಗುರುತರವಾದ ಸ್ಥಾನ, ಗೌರವ, ಮನ್ನಣೆ ಎಲ್ಲವೂ ಇದೆ ‘ಗು’ ಎಂದರೆ ಅಂಧಕಾರ (ಕತ್ತಲು) ‘ರು’ ಎಂದರೆ ಬೆಳಕು ಎಂದರ್ಥ.ಈಗಿನ ಆಧುನಿಕ ಜಗತ್ತಿನಲ್ಲಿ ವೃತ್ತಿ ಧರ್ಮ ಪಾಲಿಸಲು ತಿಣುಕಾಡುತ್ತಿದ್ದಾರೆ. ಎಲ್ಲಾ ವೃತ್ತಿಯವರು ತಮ್ಮ ಯೋಗ್ಯತೆ, ಅರ್ಹತೆ ಮೀರಿ ಮನ್ನಣೆ, ಗೌರವ ಹಾಗೂ ಸಂಪಾದನೆ ನಿರೀಕ್ಷಿಸುತ್ತಿರುವುದು ವಿಷಾದನೀಯ. ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಶಿಕ್ಷಣ ಸಂಸ್ಥೆಯನ್ನು ಹಾಗೂ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಗಮನ ಹರಿಸಿತೇ ವಿನಃ ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸುವ, ಶಿಕ್ಷಣದಲ್ಲಿ ಪರಿಣಾಮಕಾರಿ ಬೋಧನಾ ಮಾರ್ಗವನ್ನು ಅಳವಡಿಸಿ ಶಿಕ್ಷಕರನ್ನು ಹೆಚ್ಚೆಚ್ಚು ಬಳಸಿಕೊಳ್ಳುವ ಪ್ರಯತ್ನ ಮಾಡದೆ, ಚುನಾವಣಾ ಕಾರ್ಯ, ಜನಗಣತಿ, ಪಶುಗಳ ಗಣತಿ, ಜಾತಿ ಗಣತಿ ಮುಂತಾದ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಬುದ್ಧಿವಂತ ಶಿಕ್ಷಕರ ಸದ್ಬಳಕೆಯಾಗಬೇಕು. ಮಾನವ ಸಂಪನ್ಮೂಲದ ಕೊರತೆಯನ್ನು ಶಿಕ್ಷಣ ರಂಗ ಎದುರಿಸುತ್ತಿದೆ. ಎಂದೋ ಕಲಿತದ್ದನ್ನು ಇಂದಿಗೂ ಹೇಳುತ್ತಿರುವುದನ್ನು ಕಾಣಬಹುದಾಗಿದೆ.

ಮಕ್ಕಳಿಗೆ ಜನ್ಮ ಕೊಟ್ಟವರಿಗಿಂತ ಶಿಕ್ಷಣ ನೀಡುವವರನ್ನು ಗೌರವಿಸಬೇಕು, ಜನಕರು ಜನ್ಮ ಕೊಟ್ಟರೆ ಶಿಕ್ಷಕರು ಬದುಕುವ ಕಲೆಯನ್ನು ಕಲಿಸುತ್ತಾರೆ. - ಅರಿಸ್ಟಾಟಲ್‌.

ಇನ್ನು ಗುರು-ಶಿಷ್ಯರ ಸಂಬಂಧ ಬಗ್ಗೆ ಹೇಳುದಾದರೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ ಎಂಬ ಭಾವನೆಯಿಂದ ವಿದ್ಯಾರ್ಥಿಗಳು ಶಿಕ್ಷಕರನ್ನು ದೇವರಂತೆ ಭಾವಿಸಿ ಭಕ್ತಿಯಿಂದ ಗೌರವಿಸುತ್ತಿದ್ದರು. ಈಗ ಶಿಕ್ಷಕ ವಿದ್ಯಾರ್ಥಿಗಳ ನಡುವೆ ಕಂದಕ ಸೃಷ್ಟಿಯಾದಂತಿದೆ. ವಿದ್ಯಾರ್ಥಿಗಳ ಶೈಣಿಕಕ ಪ್ರಗತಿಯ ಜೊತೆಗೆ ಅವರ ಸರಿ-ತಪ್ಪುಗಳನ್ನು ತಿದ್ದಿತೀಡಿ ಉತ್ತಮ ವ್ಯಕ್ತಿತ್ವ- ನಾಯಕತ್ವದ ಗುಣ ರೂಪಿಸುತ್ತಿದ್ದರು. ಶಿಕ್ಷಕರು ಹೇಳಿದ್ದು ಕಡೆತನಕ ಎಂಬ ಭಾವನೆಯಿತ್ತು. ಈಗ ಶಿಕ್ಷಕರು ಹೇಳಿದ್ದು ಪರೀಕ್ಷೆ ತನಕ ಎಂಬಂತಾಗಿದೆ.ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ. ಉತ್ತಮ ಶಿಕ್ಷಕ ವಿವರಿಸುತ್ತಾನೆ. ಅತ್ಯುತ್ತಮ ಶಿಕ್ಷಕ ಪ್ರಾತ್ಯಕ್ಷಿಕೆ ನೀಡುತ್ತಾನೆ ಆದರೆ ಶ್ರೇಷ್ಠ ಶಿಕ್ಷಕ ಪ್ರೇರೇಪಿಸುತ್ತಾನೆ-

ವಿಲಿಯಂ ಆರ್ಥರ್‌ ವಾರ್ಡ್‌, ಅಮೆರಿಕಾದ ಖ್ಯಾತ ಲೇಖಕ.

ಅಖಂಡ ಮಂಡಲಾಕಾರಂ ವ್ಯಾಪ್ತಂಯೇನ ಚರಾಚರಮ್ ತತ್ಪದಂ ದರ್ಶಿತಂಯೇನ ತಸ್ಮೈ ಶ್ರೀ ಗುರುವೇ ನಮಃ

ಅಂದರೆ ಗುರುಮಹಿಮೆ ಅಪಾರ, ಅನಂತ, ಅಖಂಡ ಅದನ್ನು ಕೊಂಡಾಡದ ನಾಲಿಗೆಗಳಿಲ್ಲ, ಅದಕ್ಕೆ ಭಾಗದಿರುವ ಶಿರಗಳಿಲ್ಲ ಎಂಬರ್ಥ.ಆದರ್ಶ ಶಿಕ್ಷಕ ಡಾ. ರಾಧಾಕೃಷ್ಣನ್‌ ರವರ ಜೀವನದ ಕೆಲಸ ವಿಶೇಷ ಸಂಗತಿಗಳನ್ನು ಸ್ಮರಿಸುವುದಾಗರೆ ಒಮ್ಮೆ ಮೈಸೂರಿನಲ್ಲಿ ಅವರ ಶಿಷ್ಯರು ಹೆಚ್ಚಿನ ಶಿಕ್ಷಣಕ್ಕೆ ವಿದೇಶಕ್ಕೆ ಭೇಟಿ ನೀಡುತ್ತೀರಾ ಎಂದು ಕೇಳಿದರಂತೆ. ಆಗ ರಾಧಾಕೃಷ್ಣನ್‌ ಹೇಳಿದರಂತೆ. ಅಲ್ಲಿಗೆ ಹೋಗುತ್ತೇನೆ. ಆದರೆ ಕಲಿಯಲು ಅಲ್ಲ-ಕಲಿಸಲು ಎಂದರಂತೆ ಮುಂದೆ ಆಕ್ಸಫರ್ಡ್‌ವಿಶ್ವವಿದ್ಯಾನಿಲಯದಲ್ಲಿ "“indug viewd of life” ಬಗ್ಗೆ ಭಾಷಣ ಮಾಡಿದರು. ಇವರ “Indian Philosophy” ಒಂದು ಬೃಹತ್‌ ಗ್ರಂಥ. ಇವರ ಪ್ರಕಾರ ಸಮಾಜದ ಉಪಯುಕ್ತ ಭಾಗವಾಗಿ ಬಾಳುವುದು, ಒಮ್ಮೆ ಅಮೆರಿಕಾದಲ್ಲಿ ಭಾಷಣ ಮಾಡಿದಾಗ ಒಬ್ಬ ಅಮೆರಿಕನ್‌ ಪ್ರಜೆ ವ್ಯಂಗ್ಯವಾಗಿ ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಭಾರತ ಎಲ್ಲರನ್ನೂ ಕಾಪಾಡುವ ತತ್ವ ಹೊಂದಿದ್ದಲ್ಲಿ ತನ್ನನ್ನೇ ತಾನು ಏಕೆ ಕಾಪಾಡಿಕೊಂಡಿಲ್ಲ? ಎಂದರಂತೆ, ಅಲ್ಲಿದ್ದ ಜನ ನಕ್ಕರಂತೆ, ಆಗ ರಾಧಾಕೃಷ್ಣನ್‌ ತಟ್ಟನೆ ಈ ರೀತಿ ನುಡಿದು. "ಏಸುಕ್ರಿಸ್ತ ಜಗತ್ತನ್ನೇ ಕಾಪಾಡಲು ಹುಟ್ಟಿದರಲ್ಲದೆ, ತನ್ನನ್ನು ಬದುಕಿಸಿಕೊಳ್ಳಲು ಅಲ್ಲ” ಎಂದಾಗ ಜನ ಚಪ್ಪಾಳೆ ಹೊಡೆದರಂತೆ.

1949 ರಲ್ಲಿ ಸೋವಿಯತ್‌ ರಷ್ಯಾದ ರಾಯಾಬಾರಿಯಾದರು. ಅಲ್ಲಿ ಸ್ಟಾಲಿನ್‌ ಆಡಳಿತ. ರಾಧಾಕೃಷ್ಣನ್‌ ವ್ಯಕ್ತಿತ್ವದ ಪ್ರಭಾವಕ್ಕೆ ಮಾರು ಹೋಗುತ್ತಾರೆ. 14-1-1950 ರಲ್ಲಿ ಮತ್ತೆ ಭೇಟಿಯಾದಾಗ ಸಾಮ್ರಾಟ ಅಶೋಕ ಯುದ್ಧದ ಹಿಂಸೆಯಿಂದ ಅಂಹಿಸೆಯಡೆಗೆ ಪರಿವರ್ತನೆಯಾದ ಕಥೆ ಹೇಳಿ ನೀವೂ ಬದಲಾಗಬಹುದೇ ಎನ್ನುತ್ತಾರೆ ಸ್ಟಾಲಿನ್‌ ಗೆ. 1952 ರಲ್ಲಿ ಭಾರತದ ಉಪರಾಷ್ಟ್ರಪತಿಗಳಾಗಿ 1953 ರಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿ 1962 ರಿಂದ 1967 ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಖಾಸಗಿ ಕೆಲಸಗಳಿಗೆ ಸ್ವಂತ ಕಾರಿನ ಬಳಕೆ, ಸ್ವ-ಇಚ್ಛೆಯಿಂದ ತಿಂಗಳ ಸಂಬಳ ಹತ್ತು ಸಾವಿರದಿಂದ ಎರಡು ಸಾವಿರಕ್ಕೆ ಇಳಿಸಿಕೊಂಡ ಸರಳ ವ್ಯಕ್ತಿ ರಾಧಾಕೃಷ್ಣನ್‌. ವಿಶ್ವಸಂಸ್ಥೆಯಲ್ಲಿ ಒಮ್ಮೆ ಇವರು ಮಾಡಿದ ಭಾಷಣಕ್ಕೆ ಅಲ್ಲಿದ್ದ ಜಾನ್‌ ಎಫ್‌. ಕೆನಡಿ ಪ್ರಧಾನ ಕಾರ್ಯದರ್ಶಿ ಯೂಥಾಂಟ್‌ ರಾಧಾಕೃಷ್ಣನ್‌ ರ ಮಾತಿಗೆ ಮರುಳಾದರು.ಶಿಕ್ಷಕರ ದಿನಾಚರಣೆಯಂದು ರಾಧಾಕೃಷ್ಣನ್‌ ಅವರನ್ನು ಸ್ಮರಿಸುತ್ತಾ ಆದರ್ಶ ಶಿಕ್ಷಕರಾಗಲು ಕಾಯಾ ವಾಚಾ ಮನಸಾ ಪ್ರಯತ್ನಿಸಬೇಕು. ಪಡೆಯುವ ಸಂಬಂಳಕ್ಕೆ ವಿದ್ಯಾದಾನದ ಪವಿತ್ರಕಾರ್ಯ ಮಾಡಬೇಕು. ಒಳ್ಳೆ ಶಿಷ್ಯರನ್ನು ತಯಾರು ಮಾಡಲು ಗುರುಗಳು ಸದಾ ಅಧ್ಯಯನ ಶೀಲರಾಗಿ, ಆದರ್ಶರಾಗಿರಬೇಕು.“ಶಿಕ್ಷಣವು ವಿದ್ಯಾರ್ಥಿಗಳಿಗೆ ಒಂದೊಳ್ಳೆ ಕೊಡುಗೆಯಾಗಬೇಕೆ ವಿನಹಃ ಕಠಿಣವಾದ ಕೆಲಸವಾಗಬಾರದು.”- ಆಲ್ಬರ್ಟ್‌ ಐನ್‌ಸ್ಟೈನ್‌- ಖ್ಯಾತ ವಿಜ್ಞಾನಿ, -- ಫೋಟೋ 4 ಎಂವೈಎಸ್‌ 30ಲೇಖನ- ಕೆ. ಕೃಷ್ಣೇಗೌಡ, ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕರು, ಮೊ. 94818 15889.