ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಸುತ್ತಿದ್ದ ಕಾಲದಲ್ಲಿ ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು.
ಲಕ್ಷ್ಮೇಶ್ವರ: ಮಾತೆ ಶಾರದಾ ದೇವಿ ಎಂದ ಕೂಡಲೆ ಕಣ್ಮುಂದೆ ಹಾಯುವುದು ಅವರ ಪರಮ ಪವಿತ್ರವಾದ ಜೀವನ. ತಮ್ಮ ಆಧ್ಯಾತ್ಮಿಕ ಶಕ್ತಿ, ಸರಳ ಬದುಕಿನ ಮೂಲಕ ಗುರುಮಾತೆಯ ಸ್ಥಾನ ಪಡೆದವರು ಎಂದು ಉಪನ್ಯಾಸಕಿ ರೇಶ್ಮಿ ಮೇಲಗಿರಿ ತಿಳಿಸಿದರು.
ಪಟ್ಟಣದ ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಮಾತೆ ಶಾರದಾದೇವಿ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೂಢನಂಬಿಕೆ, ಹೆಣ್ಣುಮಕ್ಕಳ ಅಸಹಾಯಕತೆ, ಸ್ತ್ರೀಶೋಷಣೆ ನಡೆಸುತ್ತಿದ್ದ ಕಾಲದಲ್ಲಿ ಶಾರದಾ ದೇವಿ ಮೌನವಾಗಿಯೇ ಈ ಎಲ್ಲ ನಿರ್ಬಂಧಗಳನ್ನು ಎದುರಿಸಿ ಬೆಳೆದರು. ಶಾರದಾ ದೇವಿ ಬಾಲ್ಯದಿಂದಲೂ ತಮ್ಮ ಸ್ತ್ರೀತನದೊಳಗಿನ ಶಕ್ತಿಯನ್ನು ಪ್ರದರ್ಶಿಸುತ್ತಲೇ ಬೆಳೆದವರು. ಅವರ ನಿತ್ಯ ಜೀವನದಲ್ಲಿ ಪೂಜೆ ಜಪಕ್ಕಿಂತಲೂ ಹೆಚ್ಚಿನ ಮನ್ನಣೆ ಸೇವಾ ಕಾರ್ಯಗಳಿಗೆ ಮೀಸಲಾಗಿರುತ್ತಿತ್ತು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕಿ ಸಾವಿತ್ರಿಬಾಯಿ ನೇಕಾರ ವಹಿಸಿದ್ದರು. ಸಭೆಯಲ್ಲಿ ಪಾರ್ವತಿ ಪಾಟೀಲ, ಅನ್ನಪೂರ್ಣ ಓದುನವರ, ಗಾಯತ್ರಿ ಓದುನವರ ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತೆ ನಿರ್ಮಲಾ ಅರಳಿ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯ ಅಧ್ಯಕ್ಷೆ ಸಾಹಿತಿ ಲಲಿತಾ ಸಿ. ಕೆರಿಮನಿ, ಪ್ರತಿಮಾ ಮಹಾಜನ ಶೆಟ್ಟರ, ಲತಾ ತಟ್ಟಿ, ಶಾಂತಾ ಅಬ್ಬಿಗೇರಿ, ಕಾಂಚನಮಾಲಾ ಹಸರೆಡ್ಡಿ, ನೀಲಕ್ಕ ಬೂದಿಹಾಳ, ಲಲಿತಾ ಲಮಾಣಿ, ಅರುಂಧತಿ ಬಿಂಕದಕಟ್ಟಿ, ಜಯಶ್ರೀ ಮತ್ತಿಕಟ್ಟಿ, ವೀಣಾ ಕುಂಬಿ, ಅಶ್ವಿನಿ ಅಂಕಲಕೋಟಿ, ದೇವಕ್ಕ ಕೊಡ್ಲಿವಾಡ, ರತ್ನಾ ಕರ್ಕಿ, ಶಾರದಾ ಮಹಾಂತಶೆಟ್ಟರ ಇದ್ದರು.ಶೈಲಾ ಬಿಂಕದಕಟ್ಟಿ ನಿರೂಪಿಸಿದರು. ಶೋಭಾ ಗಾಂಜಿ ಸ್ವಾಗತಿಸಿದರು. ಮಹಾನಂದಾ ಕೊಣ್ಣೂರ ವಂದಿಸಿದರು. ಮಹಿಳೆಯರಿಂದ ಗಣರಾಜ್ಯೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.