ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಹಳೇನಗರದ ಗಾಂಧಿನಗರದಲ್ಲಿರುವ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ತಾಯಂದಿರ ಹಾಗೂ ದಾರಿಯರ ದಿನ ವಿಶೇಷವಾಗಿ ಆಚರಿಸಲಾಯಿತು.ಬೆಳಗ್ಗೆ ಪೂಜೆ, ಪ್ರಾರ್ಥನಾ ವಿಧಿ-ವಿಧಾನಗಳೊಂದಿಗೆ ಪ್ರಾರಂಭವಾಯಿತು. ಧರ್ಮ ಕೇಂದ್ರದ ಗುರುಗಳಾದ ಫಾ. ಸ್ಟೀವನ್ ಡೇಸಾ ಅವರು ವಿಶೇಷವಾಗಿ ಧರ್ಮ ಕೇಂದ್ರದ ತಾಯಂದಿರಿಗೆ ಮತ್ತು ದಾದಿಯರಿಗೆ ಹಿತವಚನ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಧರ್ಮ ಕೇಂದ್ರದ ಎಲ್ಲಾ ತಾಯಂದಿರ ಪರವಾಗಿ ಧರ್ಮ ಕೇಂದ್ರದ ಹಿರಿಯ ತಾಯಂದಿರೆಂದು ಫಿಲೋಮಿನಾ ಮತ್ತು ಎಪ್ರೆಸಿನರವರಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು. ನಂತರ ಧರ್ಮ ಕೇಂದ್ರದ ಎಲ್ಲಾ ತಾಯಿಯರು ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಸಿಹಿ ಹಂಚಿದರು.ನಿರ್ಮಲ ಆಸ್ಪತ್ರೆಯ ಸುಪೀರಿಯರ್ ಸಿಸ್ಟರ್ ವಿಲ್ಮಾ, ಸಿಸ್ಟರ್ ಶೋಭನಾ, ಧರ್ಮ ಕೇಂದ್ರದ ಕಾರ್ಯದರ್ಶಿ ಎಲಿಜ ಲಾರೆನ್ಸ್, ವಿವಿಧ ಸಂಘಟನೆಗಳು, ಗಾಯನ ವೃಂದ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ನಿರ್ಮಲ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಭದ್ರಾವತಿ: ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ಭಾನುವಾರ ವಿಶ್ವ ದಾದಿಯರ ದಿನ ವಿಶೇಷವಾಗಿ ಆಚರಿಸಲಾಯಿತು. ದಾದಿಯರ ದಿನಾಚರಣೆ ಅಂಗವಾಗಿ ಸಿಹಿ ವಿತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು. ಅಲ್ಲದೆ ದಾದಿಯರ ಕೊಡುಗೆ ಸ್ಮರಿಸಲಾಯಿತು. ದಾದಿಯರ ಮೇಲ್ವಿಚಾರಕಿ ಸಿಸ್ಟರ್ ವಿನ್ಸಿ, ಹಿರಿಯ ದಾದಿ ಮರ್ಸಿ ಚೇಚಿ ಮತ್ತು ದಾದಿಯರು ಪಾಲ್ಗೊಂಡಿದ್ದರು. ನಿರ್ಮಲ ಆಸ್ಪತ್ರೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹಲವಾರು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.