ಜಯಂಟ್ಸ್ ಗ್ರೂಪ್ ಆಫ್ ವತಿಯಿಂದ ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆ

| Published : Aug 25 2024, 02:04 AM IST

ಜಯಂಟ್ಸ್ ಗ್ರೂಪ್ ಆಫ್ ವತಿಯಿಂದ ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ಜಯಂಟ್ಸ್ ಕೇಂದ್ರ ಸಮಿತಿಯ ಸದಸ್ಯ ದಿನಕರ್ ಅಮೀನ್ ವಿತರಿಸಿದರು. ಮಕ್ಕಳಿಗೆ ಸಿಹಿತಿಂಡಿ, ಉಪಹಾರ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಬೈಲೂರಿನ ವಾಸುದೇವಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆ ನಡೆಯಿತು.

ಸಮಾರಂಭದ ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿದ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್, ಜಯಂಟ್ಸ್ ಗ್ರೂಪ್‌ನ ಮಾಜಿ ಅಧ್ಯಕ್ಷ ತೇಜಶ್ವರ ರಾವ್, ರಾಜೇಶ್ ಶೆಟ್ಟಿ, ಕಾರ್ಯದರ್ಶಿ ವಾದಿರಾಜ್ ಸಾಲಿಯಾನ್, ದಿವಾಕರ್ ಪೂಜಾರಿ, ಕಲ್ಯಾಣಿ ಪೈ, ಚಂದ್ರಕಲಾ ಕಾಮತ್ ಇತರು ಉಪಸ್ಥಿತರಿದ್ದರು.

ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆಯ ತೀರ್ಪುಗಾರರಾಗಿ ನಿಧಿ ಪೈ, ನಿಶಿತಾ, ವಾದಿರಾಜ್ ಭಟ್, ರೇಖಾ ಪೈ ಸಹಕರಿಸಿದರು.ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ಜಯಂಟ್ಸ್ ಕೇಂದ್ರ ಸಮಿತಿಯ ಸದಸ್ಯ ದಿನಕರ್ ಅಮೀನ್ ವಿತರಿಸಿದರು. ಮಕ್ಕಳಿಗೆ ಸಿಹಿತಿಂಡಿ, ಉಪಹಾರ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಮುಖ್ಯಶಿಕ್ಷಕಿ ನಿಶಾ ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜನೆ ದೇವದಾಸ್ ಕಾಮತ್, ಕಾರ್ಯಕ್ರಮವನ್ನು ಗಣೇಶ್ ಉರಾಳ್ ನಿರ್ವಹಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.