ಮುದಗಲ್ ನ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆಯಗಳನ್ನು ಪೂರೈಕೆ ಮಾಡಿರುವುದು.

ಮುದಗಲ್: ಇಲ್ಲಿನ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಕೇಂದ್ರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆ ಮಾಡಲಾಯಿತು.

ಅಜಿಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ವೃದ್ಧಿಸುವ ನಿಟ್ಟಿನಲ್ಲಿ ಮೊಟ್ಟೆಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಮುದಗಲ್ ನ ಸಿಆರ್‌ಪಿ ರಾಮಚಂದ್ರ ಢವಳೆ ತಿಳಿಸಿದರು.

ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೊಟ್ಟೆ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸದರು.

ಈ ವೇಳೆ ಮುಗು ಗಾಯತ್ರಿ, ಮಾರುತಿ ಮೆದಿಕಿನಾಳ, ಹನುಮಂತ, ನಸೀಮಾ ಶಿಕ್ಷಕರು ಸೇರಿದಂತೆ ಬಿಸಿಯೂಟದ ಸಿಬ್ಬಂದಿ ಇದ್ದರು.