ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗಲಿದ್ದು ಈ ಸಂದರ್ಭ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆಯಿದ್ದ ಸ್ವಾಗತ ಗೋಪುರವನ್ನು ಕೆಡಹುವ ಬದಲಿಗೆ ನೇರವಾಗಿ ಸುಮಾರು 51 ಅಡಿ ಸ್ಥಳಾಂತರಿಸಿದ್ದು , ಸ್ವಾಗತ ದ್ವಾರವನ್ನು ಅಂತಿಮವಾಗಿ ಪ್ರತಿಷ್ಠಾಪನೆಗೊಳ್ಳಬೇಕಾದ ನಿಗದಿತ ಸ್ಥಳಕ್ಕೆ ತಲುಪಿಸಲಾಗಿದೆ.

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗಲಿದ್ದು ಈ ಸಂದರ್ಭ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆಯಿದ್ದ ಸ್ವಾಗತ ಗೋಪುರವನ್ನು ಕೆಡಹುವ ಬದಲಿಗೆ ನೇರವಾಗಿ ಸುಮಾರು 51 ಅಡಿ ಸ್ಥಳಾಂತರಿಸಿದ್ದು , ಸ್ವಾಗತ ದ್ವಾರವನ್ನು ಅಂತಿಮವಾಗಿ ಪ್ರತಿಷ್ಠಾಪನೆಗೊಳ್ಳಬೇಕಾದ ನಿಗದಿತ ಸ್ಥಳಕ್ಕೆ ತಲುಪಿಸಲಾಗಿದೆ. ಇದೀಗ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಮಾನ ರಥವು ಈ ದ್ವಾರದ ಮೂಲಕ ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಾಗಲು ಅಗತ್ಯವಿರುವಷ್ಟು ಎತ್ತರದ ಅಂತರ (ವರ್ಟಿಕಲ್‌ ಕ್ಲಿಯರೆನ್ಸ್‌ ) ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಹೆಚ್ಚುವರಿ ಎತ್ತರವನ್ನು ಸುರಕ್ಷತಾ ಕ್ರಮವಾಗಿ ಪರಿಗಣಿಸಲಾಗಿದೆ. ಮತ್ತೊಂದು ತಾಂತ್ರಿಕ ಸಲಹೆಯಂತೆ ಸಂಪೂರ್ಣ ದ್ವಾರವನ್ನು ಹೆಚ್ಚುವರಿಯಾಗಿ 1 ಅಡಿ (12 ಇಂಚು) ಎತ್ತರಕ್ಕೆ ಮೇಲಕ್ಕೆತ್ತಲು ಶಿಫಾರಸು ಮಾಡಲಾಗಿದೆ. ದ್ವಾರವನ್ನು ಹೊಸ ಸ್ಥಳಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಿದ್ದು, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಧಾರ್ಮಿಕ ಮೆರವಣಿಗೆ ಸುಗಮವಾಗಿ ನಡೆಯಲು ಅಗತ್ಯವಾದ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ 1 ಅಡಿ ಎತ್ತರಿಸಲಾಗುವುದು.

ಸುರಕ್ಷತೆ, ಸಂಪ್ರದಾಯ ಮತ್ತು ತಾಂತ್ರಿಕ ನಿಖರತೆ ನಮ್ಮ ಆದ್ಯತೆಗಳು. ಧ್ವಂಸವಲ್ಲ, ಸಂರಕ್ಷಣೆ ಮತ್ತು ಸ್ಥಳಾಂತರವೆಂದು ಇಂಜಿನಿಯರ್‌ ಜೀವನ್‌ ಕೆ ಶೆಟ್ಟಿ ತಿಳಿಸಿದ್ದಾರೆ.