ಸಾರಾಂಶ
ಶಾಲಾ ಸಂಚಾಲಕಿ ಭಗಿನಿ ಮೋರಿಸ್ ಬಿಎಸ್ ಮಾತನಾಡಿ, ಶಾಲಾ ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿ ಭೌತಿಕ ಮಟ್ಟ ಬೆಳೆಯಲಿದೆ. ಮುಂದಿನ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಕನ್ನಡಪ್ರಭವಾರ್ತೆ ಮೂಲ್ಕಿ
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಪಠ್ಯೆತೇರ ಚಟುವಟಿಕೆಗಳ ಭಾಗವಹಿಸುವಿಕೆ ಹಾಗೂ ಬಾಲ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿ ಮೇರಿಮೇಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದ. ಕ. ಜಿ.ಪಂ. ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಲಯದ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - ಸ್ಪರ್ಧೆ 2024 ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದಿಂದ ಪ್ರತಿಭಾ ಕಾರಂಜಿಗೆ ಪ್ರೋತ್ಸಾಹ ಹಾಗೂ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ವಿಧಾನ ಸಭೆಯ ಸಭೆಯಲ್ಲಿ ಪ್ರಸ್ತಾವಿಸಿದ್ದೆ ಆದರೆ ಉತ್ತರ ದೊರಕಲಿಲ್ಲ , ಶಾಲೆಗಳು ಒದ್ದಾಟದಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.ಶಾಲಾ ಸಂಚಾಲಕಿ ಭಗಿನಿ ಮೋರಿಸ್ ಬಿಎಸ್ ಮಾತನಾಡಿ, ಶಾಲಾ ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿ ಭೌತಿಕ ಮಟ್ಟ ಬೆಳೆಯಲಿದೆ. ಮುಂದಿನ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾದಿಕಾರಿ ಭರತ್ ಕೆ, ಕ್ಷೇತ್ರ ಸಮನ್ವಯಾಧಿಕಾರಿ ವೇದಾವತಿ ರಾವ್, ಪ್ರಾಂತ್ಯಾಧಿಕಾರಿ ಭಗಿನಿ ಫ್ಲಾವಿಯ ಬಿಎಸ್, ಭಗಿನಿ ಪ್ರೇಮಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಅಧಿಕಾರಿ ವಾಸುದೇವರಾವ್, ನಿತಿನ್ ಪುತ್ರನ್, ನೋಡಲ್ ಅಧಿಕಾರಿ ರಮೇಶ್ ಆಚಾರ್, ಶಾಲಾ ಶಿಕ್ಷಕ - ರಕ್ಷಕ ಸಂಘದ ಉಪಾಧ್ಯಕ್ಷೆ ವೀರಾ ವಾಸ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ನೋ ಪ್ರಸ್ತಾವನೆಗೈದರು. ಶಾಲಾ ಸಂಚಾಲಕಿ ಮೋರಿಸ್ ಬಿ. ಎಸ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷ ಕಿ ಭಗಿನಿ ಜೇಸಿಂತಾ ಡಿಸೋಜ, ಬಿ.ಎಸ್. ವಂದಿಸಿದರು. ಶಿಕ್ಷಕಿ ಚಿತ್ರಾ ಶ್ರೀ ಎಕ. ಎಸ್. ಕಾರ್ಯಕ್ರಮ ನಿರೂಪಿಸಿದರು.