ಮಂಗಳೂರು: ಮುಂಬೈ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಷನ್ ನಲ್ಲಿ ಮೇ 3ರಂದು ಅಪರಾಹ್ನ 2 ಗಂಟೆಗೆ 10ನೇ ಸರಣಿ ಕಾರ್ಯಕ್ರಮ ಮುಂಬೈ ತುಳು ಕನ್ನಡಗರಿಗಾಗಿ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಥಾಬಿಂದು ಪ್ರಕಾಶನ ಮಂಗಳೂರಿನಿಂದ ಪುಸ್ತಕ ಪ್ರಕಾಶನ ಮಾಡುತ್ತಿರುವ ಕಾದಂಬರಿಗಾರ ಪಿವಿ ಪ್ರದೀಪ್ ಕುಮಾರ್ ಅವರ ಸಾರಥ್ಯದ ಸಂಸ್ಥೆಯಾಗಿದೆ. ಈಗಾಗಲೇ ಮುಂಬೈಯನ್ನೂ ಸೇರಿ ದೇಶ ವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಡಿರುವ ಕನ್ನಡಪರ ಸಂಸ್ಥೆ ಇದಾಗಿದೆ. ಈ ಕಾರ್ಯದ ಮುಂದುವರಿಕೆಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಬಂಟ್ಸ್ ಸಂಘ ಮುಂಬೈ ಅಧ್ಯಕ್ಷ ಪ್ರವೀಣ ಭೋಜ ಶೆಟ್ಟಿ ವಹಿಸುವರು. ಸಿಎ ಸುರೇಂದ್ರ ಕೆ ಶೆಟ್ಟಿ ಉದ್ಘಾಟನೆ ನೆರವೇರಿಸುವರು. ಕೃತಿಗಳ ಅನಾವರಣವನ್ನು ಶಂಭು ಸನಿಲ್ ನಡೆಸಿಕೊಡುತ್ತಾರೆ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಸ್ಥಾಪಕ ನಿರ್ದೇಶಕರಾದ ಶ್ರೀದೇವಿ ರಾವ್ ಮುಖ್ಯ ಅತಿಥಿಗಳಾಗಿರುವರು.
ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ ಟಿ ಆರ್, ಬಹುಮುಖ ಪ್ರತಿಭೆಯ ಡಾ ಸತೀಶ್ ಎನ್ ಬಂಗೇರ, ಕಥೆಗಾರ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಪ್ರಕಾಶನದ ಸ್ಥಾಪಕರಾದ ಪಿವಿ ಪ್ರದೀಪ್ ಕುಮಾರ್ ಅತಿಥಿಗಳಾಗಿ ಆಗಮಿಸುವರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯಿತ್ರಿ ವಾಣಿ ಶೆಟ್ಟಿ ನಿರ್ವಹಿಸುತ್ತಾರೆ. ಸಾಧಕರಾದ ಡಾ. ಜೋಸೆಫ್ ಲೋಬೋ, ರಕ್ತದಾನಿ ಮಂಜು ಸತೀಶ್ ಆಚಾರ್ಯ, ವಿಶಾಲ್ ಮೆಲ್ಬಾ ಕ್ರಾಸ್ತಾ ಸಂಗೀತ, ಬಾಲಕ ಪ್ರತಿಭೆಗಳಾದ ಅರ್ನಾ ಎಸ್ ಭಟ್, ಶ್ರೇಯ ಎಸ್ ಪೂಜಾರಿ ಮತ್ತು ಆಯುಷ್ ರೇಗನ್ ಮೆನೇಜಿಸ್ ಸಂಗೀತ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಈ ಸಂದರ್ಭ ಐದು ಪುಸ್ತಕಗಳು ಬಿಡುಗಡೆಯಾಗಲಿವೆ. ವ್ಯಕ್ತಿ ಚಿತ್ರ ಹೊತ್ತಗೆ ಸಾಟಿ ಇಲ್ಲದ ಸಾಧಕ -ಡಾ ಸತೀಶ್ ಎನ್ ಬಂಗೇರ (ಡಾ. ಕೊಳ್ಚಪ್ಪೆ ಗೋವಿಂದ ಭಟ್), ಭಾವವೀಚಿ(ಗೀತಾ ಕೊಂಕೋಡಿ), ಮಕರಂದ(ಕೆ ವಿ ಲಕ್ಷ್ಮಣಮೂರ್ತಿ), ಗೊಂಚಲು(ಗಾಯತ್ರಿ ನಾಗೇಶ್) ಮತ್ತು ಮನಸ್ಸೇ ಜೋಪಾನ(ನೀಮಾ ಲೋಬೋ ಶಂಕರಪುರ) ಈ ಕೃತಿಗಳು ಬಿಡುಗಡೆಯಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.