ಭಾರತೀಯರ ಸಂವಿಧಾನ ಬಹುತ್ವವನ್ನು ಎತ್ತಿ ಹಿಡಿದಿದೆ: ಮಹೇಶಾರಾಧ್ಯ

| Published : Feb 13 2024, 12:52 AM IST / Updated: Feb 13 2024, 04:31 PM IST

ಭಾರತೀಯರ ಸಂವಿಧಾನ ಬಹುತ್ವವನ್ನು ಎತ್ತಿ ಹಿಡಿದಿದೆ: ಮಹೇಶಾರಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಲವಾರು ದೇಶಗಳ ಸಂವಿಧಾನವನ್ನು ಸುಧೀರ್ಘವಾಗಿ ಸಮಗ್ರವಾಗಿ ಅಧ್ಯಯನ ಮಾಡಿ ಭಾರತ ದೇಶದ ಬಹುತ್ವವನ್ನು ಎತ್ತಿ ಹಿಡಿಯುವ ಒಂದು ಶ್ರೇಷ್ಠ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ್ದಾರೆ. 75 ವರ್ಷಗಳೇ ಕಳೆದರೂ ಸಂವಿಧಾನದ ಆಶಯ ಇಂದಿಗೂ ಈಡೇರದೇ ಇರುವುದು ಈ ದೇಶದ ವಿಪರ್ಯಾಸವಾಗಿದೆ

ಕನ್ನಡಪ್ರಭ ವಾರ್ತೆ ಹುಣಸೂರು

ಭಾರತೀಯರ ಸಂವಿಧಾನ ಬಹುತ್ವವನ್ನು ಎತ್ತಿಹಿಡಿದ ಸಂವಿಧಾನವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.

ಪಟ್ಟಮದ ಮುನೇಶ್ವರ ಕಾವಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವಾರು ದೇಶಗಳ ಸಂವಿಧಾನವನ್ನು ಸುಧೀರ್ಘವಾಗಿ ಸಮಗ್ರವಾಗಿ ಅಧ್ಯಯನ ಮಾಡಿ ಭಾರತ ದೇಶದ ಬಹುತ್ವವನ್ನು ಎತ್ತಿ ಹಿಡಿಯುವ ಒಂದು ಶ್ರೇಷ್ಠ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ್ದಾರೆ. 

75 ವರ್ಷಗಳೇ ಕಳೆದರೂ ಸಂವಿಧಾನದ ಆಶಯ ಇಂದಿಗೂ ಈಡೇರದೇ ಇರುವುದು ಈ ದೇಶದ ವಿಪರ್ಯಾಸವಾಗಿದೆ. 

ಭಾರತದ ಸಂವಿಧಾನದ ಆಶಯಗಳಾದ ಶಾಂತಿ, ಸಮಾನತೆ, ಸಹೋದರತ್ವ, ಸಹಬಾಳ್ವೆ, ನ್ಯಾಯ ಮುಂತಾದವುಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿರುವುದು ಭಾರತದ ಪ್ರಜೆಗಳಲ್ಲಿ ಆತ್ಮವಿಶ್ವಾಸವನ್ನ ಹಾಗೂ ಹಕ್ಕು ಕರ್ತವ್ಯಗಳ ಪರಸ್ಪರ ಗೌರವವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿ, ಸಂವಿಧಾನವು ಸರ್ವ ಜನಾಂಗಕ್ಕೂ ಆದರ್ಶವಾಗಿದೆ ಪ್ರಸ್ತುತ ಬದುಕಿಗೆ ನಾವೆಲ್ಲರೂ ಸಂವಿಧಾನಕ್ಕೆ ಕೃತಜ್ಞರಾಗಿರಬೇಕು ಎಂದು ಆಶಿಸಿದರು.

ನಗರಸಭೆಯ ಪ್ರಭಾರ ಪೌರಾಯುಕ್ತೆ ಶರ್ಮಿಳ ಅವರು ಸಂವಿಧಾನ ಜಾಗೃತಿ ಜಾಥ ರಥವನ್ನು ಬರಮಾಡಿಕೊಂಡರು. 

ಸಂವಿಧಾನ ಜಾಗೃತಿ ಜಾಥದಲ್ಲಿ ವಿವಿಧ ಶಾಲೆಯ ಮಕ್ಕಳು ವಾದ್ಯ ವೃಂದದ ಮೂಲಕ ಮುನೇಶ್ವರ ಕಾವಲು ಮೈದಾನಕ್ಕೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಆಗಮಿಸಿದರು.

ನಗರಸಭಾ ಸದಸ್ಯರಾಗಿ ಸತೀಶ್ ಕುಮಾರ್, ಕೃಷ್ಣರಾಜಗುಪ್ತ, ವಿವೇಕಾನಂದ, ರಮೇಶ್, ಮುಖಂಡರಾದ ನಿಂಗರಾಜ ಮಲ್ಲಾಡಿ, ಬಸವರಾಜು, ಕುಮಾರ್ ಕೃಷ್ಣ, ಕಾಂತರಾಜು, ಅಪ್ಪಣ್ಣ, ಜೆ. ಮಹದೇವ್, ಗಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುಜೇಂದ್ರ ಕುಮಾರ್.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ನೋಡಲ್ ಅಧಿಕಾರಿ ಗಣಪತಿ ಜಕಾತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ದೈಹಿಕ ಶಿಕ್ಷಣ ಸಮನ್ವಯ ಅಧಿಕಾರಿ ಲೋಕೇಶ್, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಗಜೇಂದ್ರ, ವಸಂತ, ಸಿಂಗೇಶ್, ಕಲಾವಿದರು ಅಂಬೇಡ್ಕರ್ ಕ್ರಾಂತಿ ಗೀತೆಗಳನ್ನು ಹಾಡಿದರು.