ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿರುವ ಸಾರ್ವಜನಿಕ ರಸ್ತೆಯನ್ನು ತಕ್ಷಣವೇ ತೆರುವುಗೊಳಿಸುವಂತೆ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚನ್ನರಾಯಪಟ್ಟಣ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದ ಒಳಗಿನಿಂದ ಪಾಲಿಟೆಕ್ನಿಕ್ ಹಿಂಭಾಗದ ಬಿಲ್ಲರಾಮನಹಳ್ಳಿ ಸಂಪರ್ಕಿಸುವ ಹಳೆಯ ರಸ್ತೆ ಮೂಲ ನಕಾಶೆಯಲ್ಲೂ ದಾಖಲಾಗಿದೆ ಎಂದರು.
ಪಾಲಿಟೆಕ್ನಿಕ್ ಹಿಂಭಾಗ ಪಟ್ಟಣದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ರೈತರು ಸೇರಿದಂತೆ ವಿವಿಧ ಜಾತಿ ವರ್ಗದ ನೂರಾರು ರೈತರ ಕೃಷಿ ಜಮೀನಿದ್ದು, ಈ ಹಿಂದೆ ಇಲ್ಲಿ ರಸ್ತೆ ಇತ್ತು. ರೈತರು ತಮ್ಮ ಜಮೀನುಗಳಿಗೆ ತಲುಪಲು ಸಹಕಾರಿಯಾಗಿತ್ತು. ಪಟ್ಟಣ ಬೆಳೆದಂತೆ ಪಾಲಿಟೆಕ್ನಿಕ್ ಆವರಣದಲ್ಲಿದ್ದ ಒಳರಸ್ತೆ ಮಾಯವಾಗಿದೆ ಎಂದು ದೂರಿದ್ದಾರೆ.ಈ ಬಗ್ಗೆ ಕ್ರಮ ವಹಿಸಬೇಕಾದ ತಾಲೂಕು ಆಡಳಿತವು ಇದುವರೆಗೂ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಡಿ.ಪ್ರೇಂಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಮೂಲ ನಕಾಶೆಯಂತೆ ಹಳೆಯ ರಸ್ತೆಯನ್ನು ತಾಲೂಕು ಆಡಳಿತ ಬಿಡಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆಗಾಗಿ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.ನ.25ರವರೆಗೆ ವಿಶೇಷ ಪೂಜೆ
ಮದ್ದೂರು:ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ವೈದ್ಯನಾಥಪುರದ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇಗುಲದಲ್ಲಿ ನವೆಂಬರ್ 25 ರವರೆಗೆ ಪ್ರತಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ದೇಗುಲದಲ್ಲಿ ನ.4ರಂದು ಪ್ರಥಮ ಕಾರ್ತಿಕ ಸೋಮವಾರ ಅಂಗವಾಗಿ ಮುಂಜಾನೆ ಕ್ಷೀರ ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ದೊಂದಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿತು.ಪ್ರತಿ ಸೋಮವಾರ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶ್ರೀ ಪ್ರಸನ್ನ ಪಾರ್ವತಂಬ ವೈದ್ಯನಾಥೇಶ್ವರ ಟ್ರಸ್ಟ್ವ ತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))