ಬಿಸಿಲಿನ ಬೇಗೆಗೆ ರಸ್ತೆ ಎಲ್ಲಾ ಧೂಳುಮಯವಾಗಿತ್ತು. ಈ ಧೂಳುಮಯದಿಂದಾಗಿ ವಾಹನ ಸವಾರರು ಪಾದಚಾರಿಗಳು ಹೈರಾಣಗಿದ್ದರು. ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ಹಿಂಬದಿಯಿಂದ ಬರುವ ದ್ವಿಚಕ್ರ ವಾಹನದ ಸವಾರರಂತೂ ಒಂದು ಕೈ ಬೈಕ್ ಮೇಲೆ ಇದ್ದರೆ ಇನ್ನೊಂದು ಕೈ ಬೆರಳು ಕಣ್ಣಿಗೆ ಬಿದ್ದ ಧೂಳು ಒರಿಸಿಕೊಳ್ಳಲು ಇರುತ್ತಿತ್ತು. ಇದನ್ನರಿತ ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರು ಮೇಲ್ವಿಚಾರಕರು ಗುರುವಾರ ಬೆಳ್ಳಂಬೆಳಗ್ಗೆ ರಸ್ತೆಗಳಿದು ನಗರದ ಬಿಬಿ ರಸ್ತೆ ಎಂ.ಜಿ ರಸ್ತೆ,ಗಂಗಮ್ಮಗುಡಿ ರಸ್ತೆಗಳನ್ನೆಲ್ಲ ಧೂಳು ಮುಕ್ತ ರಸ್ತೆಗಳನ್ನಾಗಿ ಮಾರ್ಪಡಿಸಲು ಶ್ರಮಿಸಿದರು.
ಕನ್ನಡಪ್ರಭ ವಾರ್ತೆ,ಚಿಕ್ಕಬಳ್ಳಾಪುರ
ನಗರಸಭೆ ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ದಂಡು ಬೆಳ್ಳಂಬೆಳ್ಳಗ್ಗೆಯೇ ರಸ್ತೆಗಿಳಿದು ನಗರದ ರಸ್ತೆಗಳನ್ನು ಧೂಳು ಮುಕ್ತಗೊಳಿಸುವ ಮೂಲಕ ತಮ್ಮ ಕಾರ್ಯವನ್ಙು ನಿಷ್ಠೆಯಿಂದ ಮಾಡಿದರು.ಬಿಸಿಲಿನ ಬೇಗೆಗೆ ರಸ್ತೆ ಎಲ್ಲಾ ಧೂಳುಮಯವಾಗಿತ್ತು. ಈ ಧೂಳುಮಯದಿಂದಾಗಿ ವಾಹನ ಸವಾರರು ಪಾದಚಾರಿಗಳು ಹೈರಾಣಗಿದ್ದರು. ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ಹಿಂಬದಿಯಿಂದ ಬರುವ ದ್ವಿಚಕ್ರ ವಾಹನದ ಸವಾರರಂತೂ ಒಂದು ಕೈ ಬೈಕ್ ಮೇಲೆ ಇದ್ದರೆ ಇನ್ನೊಂದು ಕೈ ಬೆರಳು ಕಣ್ಣಿಗೆ ಬಿದ್ದ ಧೂಳು ಒರಿಸಿಕೊಳ್ಳಲು ಇರುತ್ತಿತ್ತು. ಇದನ್ನರಿತ ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರು ಮೇಲ್ವಿಚಾರಕರು ಗುರುವಾರ ಬೆಳ್ಳಂಬೆಳಗ್ಗೆ ರಸ್ತೆಗಳಿದು ನಗರದ ಬಿಬಿ ರಸ್ತೆ ಎಂ.ಜಿ ರಸ್ತೆ,ಗಂಗಮ್ಮಗುಡಿ ರಸ್ತೆಗಳನ್ನೆಲ್ಲ ಧೂಳು ಮುಕ್ತ ರಸ್ತೆಗಳನ್ನಾಗಿ ಮಾರ್ಪಡಿಸಲು ಶ್ರಮಿಸಿದರು.
ಕಳೆದ ಎರಡು ದಿನಗಳ ಹಿಂದೆ ಬಿದ್ದ ಅಲ್ಪ ಮಳೆಗೆ ಧೂಳು ಒದ್ದೆಯಾಗಿತ್ತು. ಈ ಸಂದರ್ಭದಲ್ಲಿ ಸ್ವಚ್ಛಗೊಳಿಸಿದರೆ ಯಾರ ಮೇಲೂ ಧೂಳು ಬೀಳದು ಎನ್ನುವ ಕಾರಣಕ್ಕೆ ನಗರಸಭೆ ಪೌರಾಯುಕ್ತ ಮನ್ಸೂರ್ ಆಲಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಉಮಾಶಂಕರ್, ಮೇಲ್ವಿಚಾರಕರಾದ ಮುರುಳಿ, ಸಂಜೀವಪ್ಪ, ಮಂಜುಕುಮಾರ್, ನಾರಾಯಣಸ್ವಾಮಿ, ಇನ್ನಿತರ ಮೇಲ್ವಿಚಾರಕರು ಪೌರಕಾರ್ಮಿಕರು ರಸ್ತೆಗಳಿದು ರಸ್ತೆ ಇಕ್ಕಲಗಳ ಡಿವೈಡ್‌ಗಳ ಅಕ್ಕ ಪಕ್ಕದಲ್ಲಿದ್ದ ಮಣ್ಣನ್ನು ಸ್ವಚ್ಛಗೊಳಿಸಿ ಧೂಳು ಮುಕ್ತ ನಗರವನ್ನಾಗಿ ಮಾರ್ಪಡಿಸಲು ಪಣತೊಟ್ಟರು.ನಗರಸಭೆ ಅಧಿಕಾರಿಗಳು ಮೇಲ್ವಿಚಾರಕರು ಹಾಗೂ ಪೌರ ಕಾರ್ಮಿಕರ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸಿಕೆಬಿ-3 ನಗರದ ಬಿಬಿ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ನಗರಸಭೆ ಅಧಿಕಾರಿ ವರ್ಗ,ಸಿಬ್ಬಂದಿ ಹಾಗೂ ಪೌರಕಾರ್ಮಿಕರ ದಂಡು ಧೂಳು ಮುಕ್ತ ಗೊಳಿಸಿದರು