ಸಾರಾಂಶ
- ಮಾಜಿ ಸಂಸದ ಪ್ರತಾಪಸಿಂಹ ಹೇಳಿಕೆ : ಸರ್ಕಾರದ ವಿರುದ್ಧ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಯಾದಗಿರಿ/ಶಹಾಪುರಶಾಸಕ ಮುನಿರತ್ನ ವಿಚಾರವಾಗಿ ಶಹಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪಸಿಂಹ, ಪೊಲೀಸರು ಒಂದು ಪ್ರಕರಣದಲ್ಲಿ ಕೇಸ್ ದಾಖಲಿಸಿದ್ದರು. ಅಲ್ಲಿ ಬೇಲ್ ಸಿಕ್ಕಾಗ, ಇನ್ನೊಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸರಕಾರ ಅವರ (ಕಾಂಗ್ರೆಸ್) ಕೈಯ್ಯಲ್ಲಿದೆ, ಆಡಳಿತ, ಪೊಲೀಸ್ ಎಲ್ಲವೂ ಅವರ ಕೈಯ್ಯಲ್ಲಿದೆ. ಹೀಗಿರುವಾಗ, ರಾಜ್ಯಪಾಲರ ಭೇಟಿ ಏಕೆ ಆಗ್ತೀರಿ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದ ಪ್ರತಾಪಸಿಂಹ, ರಾಜ್ಯಪಾಲರನ್ನು ನಾವು ಓಡಿಸ್ತೇವೆ, ಬಾಂಗ್ಲಾದೇಶದಲ್ಲಿ ಆದಂತೆ ಆಗ್ತದೆ ಎಂದೆಲ್ಲ ಹೇಳಿ, ಈಗ ರಾಜ್ಯಪಾಲರ ಭೇಟಿ ಆಗುವೆವು ಎಂದು ಹೇಳಿದರೆ ಹೇಗೆ ಎಂದು ಕುಟುಕಿದರು. ತನಿಖೆ ಮಾಡಿಸಿ, ತಪ್ಪು ಮಾಡಿದ್ದಕ್ಕೆ ತಕ್ಕ ಶಿಕ್ಷ ನೀಡಲಿ ಎಂದು ಹೇಳಿದರು.
- ಕೃಷ್ಣ ಬೈರೇಗೌಡರು ಕೊಟ್ಟ ಕೆಲಸ ಸರಿಯಾಗಿ ಮಾಡಲಿ : ಸಿಂಹಸಚಿವ ಕೃಷ್ಣ ಬೈರೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿ ಮಾಜಿ ಸಂಸದ ಪ್ರತಾಪಸಿಂಹ, ಅವರಿಗೊಂದು ಮಾತನ್ನ ಹೇಳ್ತೇನೆ, ಬಹಳ ವೀರಾವೇಶದಿಂದ ಮಾತಾಡ್ತಾರೆ, ಸಿದ್ಧರಾಮಯ್ಯ ಇಳಿದರೆ ಗೌಡರ ಕೋಟಾದಲ್ಲಿ ನಿಮ್ಮನ್ನ (ಕೃಷ್ಣ ಬೈರೇಗೌಡ) ಮುಖ್ಯಮಂತ್ರಿ ಮಾಡುತ್ತಾರೆ ಅಂತ ಕನಸು ಕಟ್ಟಿದ್ದೀರ. ಅದಾಗಲ್ಲ ಎಂದು ವ್ಯಂಗ್ಯವಾಡಿದರು.
ಕೃಷ್ಣ ಬೈರೇಗೌಡರಿಗೆ ಈ ಹಿಂದೆ ಕೃಷಿ ಖಾತೆ ಕೊಟ್ಟಾಗ ಏನೂ ಮಾಡಲಿಲ್ಲ. ಈಗ ಕಂದಾಯ ಖಾತೆ ಕೊಟ್ಟಿದ್ದಾರೆ, ಅಲ್ಲೂ ಜನರ ಸಮಸ್ಯೆಗಳ ಬಗೆಹರಿಸಲು ಅವರಿಂದ ಆಗುತ್ತಿಲ್ಲ. ಜನರು ಪಹಣಿ, ಪಟ್ಟಿ ದುರಸ್ತಿಗಾಗಿ ನರಳುತಿದ್ದಾರೆ. ಆ ಕೆಲಸ ಮಾಡಿ. ರಾಜಕೀಯ ಹೇಳಿಕೆಗಳಿಗೆ ಸಮಯ ಕೊಡುವ ಬದಲು, ಆ ಸಮಯ ಅಲ್ಲಿ ಕೊಟ್ಟು ಸರಿಯಾಗಿ ಮಾಡಿ ಎಂದರು.ಕೃಷಿ ಸಚಿವರಾಗಿದ್ದಾಗ ಕೃಷ್ಣ ಬೈರೇಗೌಡರು ಏನು ಮಾಡಿದ್ದರು ಎಂದು ಪ್ರಶ್ನಿಸಿದ ಪ್ರತಾಪಸಿಂಹ, ಜನರು ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. 136 ಜನ ಶಾಸಕರ ಬಹುಮತ ಇದೆ. ಕೆಲಸಾ ಮಾಡೋದು ಬಿಟ್ಟು ಕಾಗೆಗಳ ಥರಾ ಬೆಳಿಗ್ಗೆದ್ದು ಕಾ... ಕಾ.. ಎಂದು ಹೇಳ್ಬೇಡಿ ಎಂದು ಟಾಂಗ್ ನೀಡಿದರು. ಗುತ್ತಿಗೆದಾರರು ಸಾಯ್ತಿದ್ದಾರೆ, ಈ ಹಿಂದೆ ಕೆಂಪಣ್ಣ 40 ಪರ್ಸೆಂಟ್ ಆರೋಪ ಮಾಡಿದ್ದರು. ಬದುಕಿದ್ದಾಗ ಅವರೇ ಕಾಂಗ್ರೆಸ್ ಸರ್ಕಾರದಲ್ಲಿ 80 ಪರ್ಸೆಂಟ್ ಇದೆ ಅಂದಿದ್ದರು. ಸರ್ಕಾರ ನಿಮ್ಮದು, ಅಧಿಕಾರ-ಆಡಳಿತ-ಪೊಲೀಸ್ ನಿಮ್ಮದು ತನಿಖೆ ನಡೆಸಿ. ನಿಮ್ಮ ಸರ್ಕಾರವನ್ನು ಯಾರೂ ಬೀಳಿಸೋಲ್ಲ, ನೀವೇ ನೀವೇ ಹೊಡೆದಾಡಿಕೊಂಡು ಬೀಳಿಸಿಕೊಳ್ಭಬಹುದು ಎಂದು ಟಾಂಗ್ ನೀಡಿದರು.