ಮುನಿಯಾಲು ಕೆಪಿಎಸ್‌: ಪ್ರಾಂಶುಪಾಲರ ನವೀಕೃತ ಕಚೇರಿ ಉದ್ಘಾಟನೆ

| Published : Jun 26 2024, 12:42 AM IST

ಸಾರಾಂಶ

ಮುನಿಯಾಲು ಕೆಪಿಎಸ್ ಶಾಲೆಯಲ್ಲಿ ಸುಮಾರು 1.70 ಲಕ್ಷ ರುಪಾಯಿ ವೆಚ್ಚದಲ್ಲಿ ವಿನ್ಯಾಸಗೊಳಿಸಿದ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರ ಕಚೇರಿಯ ಒಳವಿನ್ಯಾಸ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮುನಿಯಾಲು ಕೆಪಿಎಸ್ ಶಾಲೆಯ 1994- 95ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಸ್ನೇಹ ಸಂಗಮದ ೮೦ ವಿದ್ಯಾರ್ಥಿಗಳು ಸುಮಾರು 1.70 ಲಕ್ಷ ರುಪಾಯಿ ವೆಚ್ಚದಲ್ಲಿ ವಿನ್ಯಾಸಗೊಳಿಸಿದ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರ ಕಚೇರಿಯ ಒಳವಿನ್ಯಾಸವನ್ನು ಸೋಮವಾರ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಉದ್ಘಾಟಿಸಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಹರೀಶ್ ಪೂಜಾರಿ, ಪ್ರಾಂಶುಪಾಲೆ ಬೇಬಿ ಶೆಟ್ಟಿ, 1994-95ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಂಘ ಸ್ನೇಹಸಂಗಮದ ಅಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಗೋಪಿನಾಥ ಭಟ್, ಶಾಲೆಯ ಉಪಪ್ರಾಂಶುಪಾಲ ರವೀಂದ್ರ ರಾವ್, ವಿದ್ಯಾರ್ಥಿಗಳ ಸಂಘ ಸ್ನೇಹಸಂಗಮದ ಉಪಾಧ್ಯಕ್ಷ ಸದಾನಂದ ಮೂಲ್ಯ, ಕಾರ್ಯದರ್ಶಿ ನಳಿನಾಕ್ಷಿ ಹೆಗ್ಡೆ, ಕೊಶಾಧಿಕಾರಿ ವಿಶ್ವಾಸ್‌ ಶೆಟ್ಟಿ, ಸದಸ್ಯರಾದ ವರಂಗ ಗ್ರಾಮ ಪಂಚಾಯಿತಿ ಸದಸ್ಯ ರತ್ನಾಕರ ಪೂಜಾರಿ, ಲಯನ್ಸ್ ಕ್ಲಬ್ ಜಿಲ್ಲಾ ಪದಾಧಿಕಾರಿ ಹೆಬ್ರಿ ಟಿ.ಜಿ. ಆಚಾರ್ಯ ಉಪಸ್ಥಿತರಿದ್ದರು.

1994- 95ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ 30 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸದಸ್ಯ ಪ್ರಕಾಶ್ ಪೂಜಾರಿ ನಿರೂಪಿಸಿದರು.