ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

| Published : May 04 2025, 01:35 AM IST

ಸಾರಾಂಶ

2021 ಮಾರ್ಚ್ 12 ರಂದು ಕೂಲ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಎದುರು ಕುಳಿತಿದ್ದ ಇದೇ ಮಧುಗಿರಿಯ ಗುರುಕಿರಣ್, ಮಧುಗೌಡ, ಎಂ.ವಿ. ಧನಂಜಯ ಅವರು ಕೂಲ್ ಹೇರ್‌ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕೂತಿದ್ದ ವೀರಭದ್ರಸ್ವಾಮಿ ಎಂಬುವರ ಮೇಲೆ ಬಟನ್ ಚಾಕು, ಡ್ರ್ಯಾಗರ್ ಹಾಗೂ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರು

ಮಧುಗಿರಿ ಪಟ್ಟಣವನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣದ 4 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ದಂಡವನ್ನು ವಿಧಿಸಿ ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ತೀರ್ಪು ನೀಡಿದ್ದಾರೆ.

2021 ಮಾರ್ಚ್ 12 ರಂದು ಕೂಲ್ ಹೇರ್ ಸ್ಟೈಲ್ ಕಟಿಂಗ್ ಶಾಪ್ ಎದುರು ಕುಳಿತಿದ್ದ ಇದೇ ಮಧುಗಿರಿಯ ಗುರುಕಿರಣ್, ಮಧುಗೌಡ, ಎಂ.ವಿ. ಧನಂಜಯ ಅವರು ಕೂಲ್ ಹೇರ್‌ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕೂತಿದ್ದ ವೀರಭದ್ರಸ್ವಾಮಿ ಎಂಬುವರ ಮೇಲೆ ಬಟನ್ ಚಾಕು, ಡ್ರ್ಯಾಗರ್ ಹಾಗೂ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು.

ಕೂಡಲೇ ಅವರನ್ನು ತುಮಕೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ಮೂರು ಅಪರಾಧಿಗಳಿಗೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಚಂದನ್‌ ಕುಮಾರ್ ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿ ಎಂ.ಎಸ್. ಸರ್ದಾರ್ ರವರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ವಾದ ಪ್ರತಿವಾದ ನಡೆದು ಆರೋಪ‌ ಸಾಬೀತಾದ ಹಿನ್ನೆಲೆಯಲ್ಲಿ 4 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

ದಂಡದ ಹಣದಲ್ಲಿ ಪರಿಹಾರವಾಗಿ ಮೃತನ ತಂದೆ ರುದ್ರಪ್ಪ ಮತ್ತು ತಾಯಿ ಚನ್ನಬಸಮ್ಮ ಅವರಿಗೆ ತಲಾ 50 ಸಾವಿರ ರು. ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.