ಕನ್ನಡಪ್ರಭ ವಾರ್ತೆ ಭಟ್ಕಳ

ಮುರುಡೇಶ್ವರ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ಲಯನ್ ಜಿಲ್ಲೆಯಲ್ಲಿಯೇ ಅತ್ಯುತ್ತಮ ಲಯನ್ಸ್‌ ಕ್ಲಬ್ ಆಗಿ ಗುರುತಿಸಿಕೊಂಡಿದೆ ಎಂದು ಲಯನ್ ೩೧೮ಬಿ ಜಿಲ್ಲೆಯ ಗವರ್ನರ್ ಗೋವಾದ ಜೈ ಅಮೋಲ್ ನಾಯಕ್ ಹೇಳಿದರು.

ಶಿರಾಲಿಯ ಶ್ರೀದೇವಿ ಹೆರಿಟೇಜ್ ಸಭಾಂಗಣದಲ್ಲಿ ಮರುಡೇಶ್ವರ ಲಯನ್ಸ್ ಕ್ಲಬ್‌ಗೆ ನೀಡಿದ ಅಧಿಕೃತ ಭೇಟಿಯ ಸಂದರ್ಭ ದಾಖಲೆ ಪರಿಶೀಲಿಸಿ ಮಾತನಾಡಿದರು.

ಮುರುಡೇಶ್ವರ ಲಯನ್ಸ್‌ ಕ್ಲಬ್ ಪರಿಸರ ಜಾಗೃತಿ, ಯುವ ಸಬಲೀಕರಣ, ಬಡತನ ನಿರ್ಮೂಲನೆ, ಮಕ್ಕಳ ಕ್ಯಾನ್ಸರ್ ನೆರವು, ಮಧುಮೇಹ ಜಾಗೃತಿ, ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ೯೪ ಸೇವಾ ಚಟುವಟಿಕೆಗಳೇ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ ಎಂದರು.

ಶಿರಾಲಿಯ ಶಿಕ್ಷಕ ಶ್ರೀಧರ ಎಂ. ನಾಯ್ಕ ಅವರ ಶೈಕ್ಷಣಿಕ ಸಾಧನೆ ಪರಿಗಣಿಸಿ ಅವರಿಗೆ ವಾಜಂತ್ರಿ ಅವಾರ್ಡ್‌ ಪ್ರದಾನ ಮಾಡಲಾಯಿತು. ಸರಕಾರಿ ಪ್ರೌಢಶಾಲೆ ಬೆಳ್ಕೆಯ ಶಿಕ್ಷಕು ರಜನಿ ಶೆಟ್ಟಿಯವರ ಶ್ರೇಷ್ಠ ಸೇವೆಯನ್ನು ಗುರುತಿಸಿ ಉಡುಪ ಅವಾರ್ಡ್‌ ನೀಡಿ ಗೌರವಿಸಲಾಯಿತು. ಕರೂರು ಶಾಲೆಗೆ ಜಮಖಾನಾ, ಕೆಪಿಎಸ್ ಬೈಲೂರು ಶಾಲೆಗೆ ವಾಟರ್ ಫಿಲ್ಟರ್, ಕೆರೆಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ ೨೦೦ ಕ್ಯಾಪ್‌ ಹಾಗೂ ಸರ್ವೋದಯ ಶಾಲೆಗೆ ಸೌಂಡ್ ಸಿಸ್ಟಮ್‌ನ್ನು ದೇಣಿಗೆಯಾಗಿ ನೀಡಲಾಯಿತು.


ಮುಖ್ಯಮಂತ್ರಿ ಪದಕ ವಿಜೇತ ಅರಣ್ಯಾಧಿಕಾರಿ ಪ್ರದೀಪ ನಾಯ್ಕ, ನಿವೃತ್ತ ಸೈನಿಕ ಜನಾರ್ದನ ದೇವಾಡಿಗ ಹಾಗೂ ಸ್ನೇಹ ವಿಶೇಷ ಶಾಲೆಯ ಶಿಕ್ಷಕು ಮಾಲತಿ ಉದ್ಯಾವರ ಅವರನ್ನೂ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲಯನ್ಸ್‌ ಕ್ಲಬ ಅಧ್ಯಕ್ಷ ಕಿರಣ ಕಾಯ್ಕಿಣಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯಕಾರಿಣಿಗಳಾದ ಕೀರ್ತಿ ನಾಯ್ಕ, ರೀಜನಲ್ ಚೇರ್ ಪರ್ಸನ್ ರಾಜೇಶ ಸಾಲೆಹಿತ್ತಲ್, ಜೋನ್ ಚೇರ್ಮನ್ ಮಂಗಲಾ ಕುಚಿನಾಡ್ ಉಪಸ್ಥಿತರಿದ್ದರು. ಸದಸ್ಯ ಡಾ. ಸುನೀಲ ಜತ್ತನ್ನ ಸ್ವಾಗತಿಸಿದರು. ಸುಪ್ರೀತಾಶೆಟ್ಟಿ ಪ್ರಾರ್ಥಿಸಿದರು. ನಾಗೇಶ ಮಡಿವಾಳ ವರದಿ ವಾಚರಿಸಿದರು. ಎಂ.ವಿ. ಹೆಗಡೆ ವಂದಿಸಿದರು. ಕೃಷ್ಣ ಹೆಗಡೆ ಮತ್ತು ಶಿವಕುಮಾರ ಹಿಚ್ಕಡ ನಿರೂಪಿಸಿದರು.

---------

5ಬಿಕೆಲ್3: ಮುರುಡೇಶ್ವರ ಲಯನ್ಸ್‌ ಕ್ಲಬ್‌ನಿಂದ ವಿವಿಧ ಶಾಲೆಗಳಿಗೆ ಸಾಮಗ್ರಿ ವಿತರಿಸಲಾಯಿತು.