ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ: ಜುಮ್ಮನಗೌಡ ಪಾಟೀಲ

| Published : Sep 29 2024, 01:54 AM IST

ಸಾರಾಂಶ

ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ.

ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಪುಣ್ಯಸ್ಮರಣೋತ್ಸವ ಸಂಗೀತ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹನುಮಸಾಗರ

ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ ಎಂದು ಸಂಗೀತ ಶಿಕ್ಷಕ ಜುಮ್ಮನಗೌಡ ಪಾಟೀಲ ಹೇಳಿದರು.

ಸಮೀಪದ ಸೇಬಿನಕಟ್ಟಿ ಶಾಲಾ ಆವರಣದಲ್ಲಿ ಸಿರಿಗನ್ನಡ ಸಂಗೀತ, ಶಿಕ್ಷಣ, ಕಲೆ, ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಹಾಗೂ ಸಿರಿಗನ್ನಡ ಸ್ವರ ಸಂಗೀತ ಪಾಠಶಾಲೆ ಸೇಬಿನಕಟ್ಟಿ ಸಂಯುಕ್ತಾಶ್ರಯದಲ್ಲಿ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಪುಣ್ಯಸ್ಮರಣೋತ್ಸವ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಗೀತ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಆರಿಸಿಕೊಳ್ಳುವುದು ಕೆಲವರನ್ನು ಮಾತ್ರ. ಸಂಗೀತ ವಿದ್ಯೆ ಗಾಂಧರ್ವ ವಿದ್ಯೆಯಾದ್ದರಿಂದ ಇದನ್ನು ಕೇಳುವುದರಿಂದ ಅನೇಕ ಕೆಟ್ಟ ಚಿಂತನೆ ಹೊಗುತ್ತವೆ. ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.

ಇದೇ ಸಂದರ್ಭ ಜುಮ್ಮನಗೌಡ ಪಾಟೀಲ ಅವರಿಂದ ಶಾಸ್ತ್ರೀಯ ಸಂಗೀತ, ಗ್ಯಾನಪ್ಪ ತಳವಾರ, ಯುವರಾಜ್ ಹಿರೇಮಠ, ಹಂಚಿನಾಳ ಅವರಿಂದ ವಚನ ಸಂಗೀತ, ಜಯರಾಮ ಭಟ್ಟರ್, ಸುಖಮುನಿ ಗಡಗಿ, ಉಮೇಶ ಅಂಗಡಿ, ಲಕ್ಷ್ಮಣ ತಳವಾರ, ಶರಣು ಅಂಗಡಿ ಮಾಸಪ್ಪ ಕಬ್ಬರಗಿ ಅವರಿಂದ ಭಕ್ತಿಗೀತೆ ಕಾರ್ಯಕ್ರಮಗಳು ಜರುಗಿದವು. ವಿನೋದ ಪಾಟೀಲ ಹಾರ್ಮೋನಿಯಂ ಹಾಗೂ ಮಣಿಕಂಠ ಬಡಿಗೇರ ತಬಲಾ ಸಾಥ್‌ ನೀಡಿದರು.

ಸಂಸ್ಥೆಯ ಅಧ್ಯಕ್ಷ ಈಶಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಜಯಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾಮಣ್ಣ ಬಾವಿಕಟ್ಟಿ, ಪ್ರಮುಖರಾದ ಮಹಾಂತೇಶ ಗವಾರಿ, ಬಸವರಾಜ ಕಮತರ, ಪವಾಡೆಪ್ಪ ಹುಣಶ್ಯಾಳ, ಮಾಂತಗೌಡ ಪಾಟೀಲ, ಶಿವನಗೌಡ ಗೌಡರ, ಲಕ್ಷ್ಮಣ ತಳವಾರ, ಶಂಕರ್ ಬಸೂದೆ, ವೆಂಕಟೇಶ ಹೊಸಮನಿ, ಗ್ಯಾನಪ್ಪ ತಳವಾರ, ದೇವರಾಜ ಕಾತ್ರಾಳ, ಗುರುರಾಜ ಅಂಗಡಿ, ಹನುಮಂತ ಕಾತ್ರಾಳ, ದ್ಯಾಮಣ್ಣ ಬಾವಿಕಟ್ಟಿ ಇತರರಿದ್ದರು.