ಸಾರಾಂಶ
ಗುಳೇದಗುಡ್ಡ: ಸಂಗೀತ ಕಲೆಯಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಶ್ರದ್ಧೆ, ಆಸಕ್ತಿ, ನಿರಂತರ ಪರಿಶ್ರಮದಿಂದ ಸಾಧನೆ ಮಾಡಿದರೆ ಮಾತ್ರ ಸಂಗೀತ ಒಲಿಯುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು. ಇಲ್ಲಿನ ವಿಶ್ವಾಸ ಸಂಗೀತ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ನಡೆದ ಸಂಗೀತ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಂಗೀತ ಕಲೆಯಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಶ್ರದ್ಧೆ, ಆಸಕ್ತಿ, ನಿರಂತರ ಪರಿಶ್ರಮದಿಂದ ಸಾಧನೆ ಮಾಡಿದರೆ ಮಾತ್ರ ಸಂಗೀತ ಒಲಿಯುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಹೇಳಿದರು.ಇಲ್ಲಿನ ವಿಶ್ವಾಸ ಸಂಗೀತ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರ ಸಹಕಾರದೊಂದಿಗೆ ನಡೆದ ಸಂಗೀತ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ಸಂಗೀತ ಅದರಲ್ಲೂ ನಮ್ಮ ಭಾರತೀಯ ಹಿಂದೂಸ್ತಾನಿ, ಕರ್ನಾಟಕ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ. ಸಂಗೀತ ಕಲೆಗೆ ತನ್ನದೇ ಆದ ಮಹತ್ವವಿದೆ ಎಂದರು.ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಾನಂದ ಮಳ್ಳಿಮಠ, ಶಂಕರರಾವ ಕುಲಕರ್ಣಿ, ಸಿದ್ದು ಅರಕಾಲಚಿಟ್ಟಿ, ರಾಚಣ್ಣ ಕೆರೂರ, ವಿರುಪಾಕ್ಷಪ್ಪ ಗೂಳಿ, ತಿಪ್ಪಣ್ಣ ಮಂಗಳೂರ, ಬಸವರಾಜ ಜಿಡಗಿ, ಭೀಮಸಿಂಗ ರಾಠೋಡ, ಹುಚ್ಚೇಶ ಯಂಡಿಗೇರಿ, ಸಂಸ್ಥೆಯ ಅಧ್ಯಕ್ಷ ಸದಾಶಿವಯ್ಯ ಸಿಂದಗಿಮಠ, ಮಲ್ಲಿಕಾರ್ಜುನ ರಾಜನಾಳ, ಈರಪ್ಪ ಸಮಗಂಡಿ, ಸಂವಾದ ಜಿರ್ಲಿ, ಸಂಗಯ್ಯ ಸಿಂದಗಿಮಠ, ಸಚಿನ ಅಲದಿ, ಶಿವಾನಂದ ಸಿಂದಗಿ, ಮೌನೇಶ ಬಡಿಗೇರ, ಪ್ರಕಾಶ ಪಾಡಾ, ಅನಿತಾ ಶೆಟ್ಟರ, ದ್ರಾಕ್ಷಾಯಿಣಿ ಸಿಂದಗಿಮಠ, ವಸಂತಾ ಹರ್ತಿ, ಲಕ್ಷ್ಮೀ ತೊರವಿ, ಮಂಜುಳಾ ಪಾಡಾ ಮತ್ತಿತರರು ಇದ್ದರು. ನಂತರ ಬಸವರಾಜ ಸಿಂದಗಿಮಠ ಹಾಗೂ ಇಲಕಲ್ಲದ ವೈಷ್ಣವಿ ಗೂಳಿ ಹಾಗೂ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.