ಸ್ವಾಸ್ಥ್ಯ ಸಮಾಜಕ್ಕಾಗಿ ಸಂಗೀತ ಅತ್ಯವಶ್ಯ

| Published : Mar 26 2025, 01:34 AM IST

ಸಾರಾಂಶ

ಸಂಗೀತಗಾರನಿಗೆ ಕಾಲ, ದೇಶ, ಧರ್ಮಾತೀತವಾದ ಗೌರವ ಸಾಧ್ಯವಾಗಿದೆ. ಪಂಡಿತರು, ವಿದ್ವಾಂಸರು ಎಲ್ಲೇ ಇದ್ದರೂ ಪೂಜ್ಯನೀಯ ಭಾವವನ್ನು ಪಡೆಯುತ್ತಾರೆ. ಸಂಗೀತ ಪರಂಪರೆ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಸಹೃದಯರ ಮೇಲಿದೆ.

ಕೊಪ್ಪಳ:

ಮನುಷ್ಯನ ಮನಸ್ಸು ಅರಳಿಸುವ, ಮೃಗೀಯ ಭಾವನೆ ತೊಲಗಿಸುವ ಶಕ್ತಿ ಸಂಗೀತಕ್ಕಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಹೇಳಿದರು.

ತಾಲೂಕಿನ ಯತ್ನಟ್ಟಿ ಗ್ರಾಮದಲ್ಲಿ ನಾದಯೋಗಿ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ನಾದಯೋಗಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತಗಾರನಿಗೆ ಕಾಲ, ದೇಶ, ಧರ್ಮಾತೀತವಾದ ಗೌರವ ಸಾಧ್ಯವಾಗಿದೆ. ಪಂಡಿತರು, ವಿದ್ವಾಂಸರು ಎಲ್ಲೇ ಇದ್ದರೂ ಪೂಜ್ಯನೀಯ ಭಾವವನ್ನು ಪಡೆಯುತ್ತಾರೆ. ಸಂಗೀತ ಪರಂಪರೆ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಸಹೃದಯರ ಮೇಲಿದೆ ಎಂದರು. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಶಂಕರ ಬಿನ್ನಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮಣ ಪೂಜಾರ, ಹುಡಚಪ್ಪ ಭೋವಿ, ರೇಣುಕಮ್ಮ ಬಂಡ್ಯಾಳ, ಶಿವಕುಮಾರ ಪಲ್ಲೇದ, ಮಲ್ಲಿಕಾರ್ಜುನ ಪೂಜಾರ, ಮಾರುತಿ ಬಿನ್ನಾಳ್ ಉಪಸ್ಥಿತರಿದ್ದರು. ಪರಶುರಾಮ ಮಂಗಳಗುಡ್ಡರಿಂದ ಹಿಂದೂಸ್ತಾನಿ ಸಂಗೀತ, ಡಾ. ಜೀವನಸಾಬ್‌ ಬಿನ್ನಾಳರಿಂದ ಜನಪದ ಸಂಗೀತ, ಅನುರಾಗ ಗದ್ದಿ ಅವರಿಂದ ಕನ್ನಡ ಗಜಲ್, ಭೂಮಿಕಾ ಹಲಗೇರಿಯಿಂದ ಸುಗಮ ಸಂಗೀತ, ಮೆಹಬೂಬ್‌ ಕಿಲ್ಲೇದಾರ ಅವರಿಂದ ತತ್ವಪದ, ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಹಾಗೂ ರಂಜಿತಾ ನಂದ್ಯಾಳರಿಂದ ಭರತನಾಟ್ಯ ಕಾರ್ಯಕ್ರಮಗಳು ಮೂಡಿಬಂದವು.

ವಾದ್ಯವೃಂದದಲ್ಲಿ ಕೀಬೋರ್ಡ್‌ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಕುಮರೇಶ ಬಿನ್ನಾಳ, ರಿಧಮ್ ಪ್ಯಾಡ್‌ನಲ್ಲಿ ಸಂಜನ ಬೆಲ್ಲದ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಸಾಥ್‌ ನೀಡಿದರು.