ಸಾರಾಂಶ
ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್, ವರದರಾಜಸ್ವಾಮಿ ದೇವಸ್ಥಾನ, ಸ್ವಿಪರ್ಸ್ ಕಾಲೋನಿ, ಹನುಮಂತ ನಗರ ಸೇರಿದಂತೆ ಇನ್ನಿತರೆ ವಾರ್ಡ್ ಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.
ಚನ್ನಪಟ್ಟಣ: ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್, ವರದರಾಜಸ್ವಾಮಿ ದೇವಸ್ಥಾನ, ಸ್ವಿಪರ್ಸ್ ಕಾಲೋನಿ, ಹನುಮಂತ ನಗರ ಸೇರಿದಂತೆ ಇನ್ನಿತರೆ ವಾರ್ಡ್ ಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.
ಚನ್ನಪಟ್ಟಣ ನಗರ ವ್ಯಾಪ್ತಿಯ ಚಿಕ್ಕಮಳೂರು ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಚಾರ ಆರಂಭಿಸಿದ ನಿಖಿಲ್ ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಬಳಿಕ ಮಾತನಾಡಿದ ಅವರು, ನಾನು ಎರಡು ಬಾರಿ ಸೋಲುಂಡರು, ನನ್ನಲ್ಲಿ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ. ದೇವೇಗೌಡರ, ಕುಮಾರಸ್ವಾಮಿ ಅವರ ದೀರ್ಘ ಕಾಲದ ರಾಜಕಾರಣದಲ್ಲಿ ಬಡವರ ಪರ ಇದ್ದವರು. ಅವರಂತೆಯೇ ನಾನು ಇದ್ದು ಕೆಲಸ ಮಾಡುವೆ, ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಒಬ್ಬ ಯುವಕ ಸಮಾಜಮುಖಿಯಾಗಿ ಕೆಲಸ ಮಾಡುತ್ತೇನೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೀರಾ, ನಾನು ಕೊನೆ ಹಂತದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನಾನು ಅಭ್ಯರ್ಥಿ ಆಗಿದ್ದೇನೆ. ಮೂರೂವರೆ ವರ್ಷ ಕಾಲಾವಧಿ ಬಾಕಿ ಇದೆ. ಇದು ಅನಿರೀಕ್ಷಿತ ಚುನಾವಣೆ, ನಿಮ್ಮನ್ನ ನಂಬಿ ಮುಂದೆ ಬಂದಿದ್ದೇನೆ ಎಂದರು.
ಕುಮಾರಣ್ಣ ಅವರು ಯುಜಿಡಿ ಕಾಮಗಾರಿಗೆ 97 ಕೋಟಿ ಅನುದಾನ ಕೊಟ್ಟಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯುಜಿಡಿ ಯೋಜನೆಯನ್ನ ತಡೆಹಿಡಿದರು. ಮಹಿಳೆಯರ ಡಿಗ್ರಿ ಕಾಲೇಜು, ಬಾಲಕರ ಕಾಲೇಜು, ರಸ್ತೆ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.