ನಗರದ ಅಭಿವೃದ್ಧಿಯೇ ನನ್ನ ಮೊದಲ ಗುರಿ

| Published : Mar 08 2024, 01:55 AM IST

ಸಾರಾಂಶ

ಇಳಕಲ್ಲ: ನಗರದ ಅಭಿವೃದ್ಧಿ ಮಾಡುವುದೆ ನನ್ನ ಮೊದಲ ಗುರಿಯಾಗಿದೆ. ಅದಕ್ಕಾಗಿ ನಮ್ಮ ಸರ್ಕಾರದಿಂದ ₹೧೬೦.೮೨ ಲಕ್ಷ ವೆಚ್ಚದ ಕಾಮಗಾರಿಗಳನ್ನು ತಂದು ಭೂಮಿಪೂಜೆ ಮಾಡುತ್ತಿದ್ದೇನೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅದ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ನಗರಸಭೆಯ ಒಟ್ಟು ೧೯ ಕಾಮಗಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ, ನಂತರ ಇಳಕಲ್ಲ ನಗರಸಭೆಯಿಂದ ನೀಡಿದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ನಗರದ ಅಭವೃದ್ಧಿಯನ್ನು ಪಕ್ಷ ಭೇದ ಮರೆತು ಮಾಡುತ್ತಿದ್ದೇವೆ. ಈ ಹಿಂದಿನ ಆಡಳಿತ ಮಂಡಳಿ ಕಾಂಗ್ರೆಸ್‌ ಸದಸ್ಯರಿದ್ದ ವಾರ್ಡ್‌ಗಳಲ್ಲಿ ಎಷ್ಟು ಕಾರ್ಯ ಮಾಡಿದ್ದಾರೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸದಸ್ಯರಾದ ಸುರೇಶ ಜಂಗ್ಲಿ, ಲಕ್ಷ್ಮಣ ಗುರಂ, ಇ.ಎಚ್.ಗುಳೇದ, ಅಮೃತ ಬಿಜ್ಜಳ, ಮೌಲಪ್ಪ ಬಂಡಿವಡ್ಡರ, ರೇಶ್ಮಾ ಮಾರನಬಸರಿ, ನಜ್ಮಾ ಬನಗೋಳ, ಸುಧಾರಾಣಿ ಸಂಗಮ, ಶರಣಮ್ಮ ತಿಮ್ಮಾಪುರ, ಹನಮಂತ ತುಂಬದ, ನಾಮನಿರ್ದೆಶನ ಸದಸ್ಯರಾದ ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪೂರಸ, ರಾಧೇಶಾಮ ದರಕ, ಪಂಪಣ್ಣ ಮಾಗನೂರ, ಅಬ್ಬು ಹಳ್ಳಿ, ಶರಣಪ್ಪ ಆಮದಿಹಾಳ, ವಿಜಯ ಗದ್ದನಕೆರಿ, ಅಬ್ದುಲ್‌ರಜಾಕ ತಟಗಾರ, ಶಬ್ಬೀರ ಬಾಗವಾನ ಉಪಸ್ಥಿತರಿದ್ದರು.