ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸಕ್ರಿಯವಾಗಿ ಹಗಲಿರುಳು ದುಡಿಯುವುದಾಗಿ ಅದಕ್ಕೆ ಸಹಕಾರವಾಗಿ ಕಾರ್ಯಕರ್ತರ ಮುಖಂಡರ ಗ್ರಾಮದ ಕಟ್ಟ ಕಡೆಯ ವ್ಯಕ್ತಿಯ ಸಹಕಾರಬೇಕೆಂದು ತಿಳಿಸಿದರು.

ಟೇಕಲ್‌ನಲ್ಲಿ ಮುಖಂಡರ ಸಭೆಯಲ್ಲಿ ಮುಖಂಡ ಹೂಡಿ ವಿಜಯ್‌ಕುಮಾರ್ ಹೇಳಿಕೆ

ಕನ್ನಡಪ್ರಭ ವಾರ್ತೆ ಟೇಕಲ್ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ಕಾರ್ಯಕರ್ತರು ಮುಖಂಡರು ಸನ್ನದ್ಧರಾಗ ಬೇಕೆಂದು ಪಕ್ಷ ಸಂಘಟನೆಗೆ ಜೆಡಿಎಸ್ ವೇದಿಕೆಯಲ್ಲಿ ಹೈಕಮಾಂಡ್‌ನಿಂದ ಪಕ್ಷದ ಟಿಕೆಟ್‌ನನ್ನು ನೀಡುವ ಹಸಿರು ನಿಶಾನೆ ಕೂಡ ನೀಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್ ಮಯವಾಗುವ ಬಹುತೇಕ ನಿರೀಕ್ಷೆ ಇದೆ ಎಂದು ಜೆಡಿಎಸ್ ಮುಖಂಡ ಹೂಡಿ ವಿಜಯ್‌ಕುಮಾರ್ ತಿಳಿಸಿದರು.ಟೇಕಲ್‌ನ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ, ಪಕ್ಷ ಸಂಘಟನೆಗೆ ದೇವಮೂಲೆಯಾದ ಟೇಕಲ್‌ನಲ್ಲಿ ಮುಖಂಡರ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸಕ್ರಿಯವಾಗಿ ಹಗಲಿರುಳು ದುಡಿಯುವುದಾಗಿ ಅದಕ್ಕೆ ಸಹಕಾರವಾಗಿ ಕಾರ್ಯಕರ್ತರ ಮುಖಂಡರ ಗ್ರಾಮದ ಕಟ್ಟ ಕಡೆಯ ವ್ಯಕ್ತಿಯ ಸಹಕಾರಬೇಕೆಂದು ತಿಳಿಸಿದರು.

ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಪ್ರತಿ ಹೋಬಳಿಯಲ್ಲಿ ಮುಖಂಡರ ಸಭೆಯಲ್ಲಿ ಕಾರ್ಯಕರ್ತರನ್ನು ಸಂಘಟನೆಗೊಳಿಸುವ ನಿಟ್ಟಿನಿಂದ ಪಕ್ಷವನ್ನು ಬೇರು ಮಟ್ಟದಿಂದ ಸದೃಢಗೊಳಿಸುವುದೇ ಈ ಸಭೆಗಳ ಉದ್ದೇಶವಾಗಿದೆ. ಟೇಕಲ್‌ನಲ್ಲಿ ನಡೆಯುತ್ತಿದ್ದು, ಪ್ರತಿವಾರ ಹೋಬಳಿಯದ್ದಂತ ಸಭೆಗಳನ್ನು ಗ್ರಾಮಗಳ ಮಟ್ಟದಲ್ಲಿ ಮತ್ತು ಪಂಚಾಯತಿ ಮಟ್ಟದಲ್ಲಿ ಜೆಡಿಎಸ್ ಸಭೆಗಳನ್ನು ಮಾಡಿ ಪಕ್ಷ ಸಂಘಟನೆ ಬಲಪಡಿಸುವುದಾಗಿ ತಿಳಿಸಿದರು.ಮುಂದಿನ ದಿನಗಳಲ್ಲಿ ಮಾಸ್ತಿ ಲಕ್ಕೂರು ಕಸಬಾ ಹೋಬಳಿ ನಂತರ ಮಾಲೂರಿನಲ್ಲಿ ಜೆಡಿಎಸ್ ಸಭೆ ನಡೆಸಲಾಗುತ್ತದೆ ಎಂದರು.ಮಾಲೂರು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಮುಂದಿನ ಚುನಾವಣೆಗಳಲ್ಲಿ ನಗರಸಭೆ, ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಹೈಕಮಾಂಡ್ ಆದೇಶದಂತೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಎನ್‌ಡಿಎ ಪಕ್ಷಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರತಿಯೊಂದು ಚುನಾವಣೆಗಳಲ್ಲೂ ನಮ್ಮ ಎನ್.ಡಿ.ಎ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಪಕ್ಷದ ಕೆ.ವಿ.ನಾರಾಯಣಸ್ವಾಮಿ, ಹರೀಶ್ ಗೌಡ, ನಿಡಘಟ್ಟ ಮುನಿರಾಜು, ನೂಟುವೆ ವೆಂಕಟೇಶ್‌ಗೌಡ, ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ವೆಂಕಟೇಶ್, ಮಹಿಳಾ ತಾಲೂಕು ಅಧ್ಯಕ್ಷ ಸುಮಾ ಮಂಜುನಾಥ್, ತಾಲೂಕು ಯುವ ಜನತಾದಳದ ಅಧ್ಯಕ್ಷ ಪ್ರಶಾಂತ್ ಗೌಡ, ಜೆಡಿಎಸ್ ಎ.ಸಿ.ಘಟಕದ ಜಿಲ್ಲಾ ಉಪಾಧ್ಯಕ್ಷ ಯಲುವಗುಳಿ ನಾಗರಾಜ್, ಟೇಕಲ್ ಆಂಜಿನಪ್ಪ ಸೋಮಸಂದ್ರ, ಮುನಿರಾಜು, ಪ್ರತಾಪ್, ಬೋರ್ ಮಂಜು, ಸತೀಶ್ ಬಾಬು ಕುಟ್ಟಿ, ಕೊಮ್ಮನಹಳ್ಳಿ ಗೋಪಾಲ್ ಗೌಡ, ವೆಂಕಟೇಶಪ್ಪ, ಲಕ್ಷ್ಮಣಗೌಡ, ಶ್ರೀನಾಥ್ ಬುಜ್ಜಿ, ವೆಂಕಸ್ವಾಮಿ, ಪ್ರಭಾಕರ್ ಇದ್ದರು.