ನನ್ನ ಸ್ವಾಭಿಮಾನ ಹೋರಾಟ ನಿಲ್ಲದು

| Published : Apr 23 2024, 12:49 AM IST

ಸಾರಾಂಶ

ನನ್ನ ಜೊತೆ ಗುರುತಿಸಿಕೊಂಡವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುತ್ತಿದೆ. ನನ್ನ ಜೊತೆ ಫೋಟೋ ತೆಗೆಸಿಕೊಂಡವರನ್ನು ಬೇಟೆ ಆಡಲಾಗುತ್ತಿದೆ. ಇಂದು ನನ್ನ ಜೊತೆ ನಾಳೆ ಮತ್ತೊಬ್ಬರ ಜೊತೆ ಹೋಗುವವರಿಗೆ ಸ್ವಾಭಿಮಾನ ಇಲ್ಲ. ನನ್ನ ಸ್ವಾಭಿಮಾನದ ಹೋರಾಟ ಮುಂದುವರಿಯುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ನನ್ನ ಜೊತೆ ಗುರುತಿಸಿಕೊಂಡವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುತ್ತಿದೆ. ನನ್ನ ಜೊತೆ ಫೋಟೋ ತೆಗೆಸಿಕೊಂಡವರನ್ನು ಬೇಟೆ ಆಡಲಾಗುತ್ತಿದೆ. ಇಂದು ನನ್ನ ಜೊತೆ ನಾಳೆ ಮತ್ತೊಬ್ಬರ ಜೊತೆ ಹೋಗುವವರಿಗೆ ಸ್ವಾಭಿಮಾನ ಇಲ್ಲ. ನನ್ನ ಸ್ವಾಭಿಮಾನದ ಹೋರಾಟ ಮುಂದುವರಿಯುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಹೇಳಿದರು.

ಬಾಷಾ ನಗರದಲ್ಲಿ ಮುಸ್ಲಿಂ ಬಾಂಧವರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮವರೇ ನಮ್ಮನ್ನು ಬೆಳೆಯಲು ಬಿಡುತ್ತಿಲ್ಲ. ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಧೈರ್ಯವಾಗಿ ಮಾತನಾಡಲು ಆಗುತ್ತಿಲ್ಲ. ನನ್ನ ಜೊತೆ ಇದ್ದ ಮುಖಂಡರೆಲ್ಲರೂ ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಹೋಗುವವರಿಗೆ ಸ್ವಾಭಿಮಾನ ಇಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿದರು.

ಜನರು ನೀಡಿದ ಭರವಸೆ ಪಕ್ಷೇತರನಾಗಿ ನಿಲ್ಲಲು ಕಾರಣ. ನಾನು ಬಿಜೆಪಿ, ಸಂಸದ ಜಿ.ಎಂ. ಸಿದ್ದೇಶ್ವರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹರಡಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಹೋಗಿದ್ದಾಗ ಬಿಜೆಪಿ ಮುಖಂಡರು ಕುಳಿತಿದ್ದರು. ಅಲ್ಲಿ ಪೊಲೀಸರು ಇದ್ದರು. ಜಿಲ್ಲಾಧಿಕಾರಿ ಕಚೇರಿ ಬೋರ್ಡ್ ಇತ್ತು. ಅದನ್ನು ಎಡಿಟ್ ಮಾಡಿ ಅಪಪ್ರಚಾರ ಮಾಡಲಾಯಿತು. ಆದರೂ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಈ ವೇಳೆ ಆರೀಫ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು.

- - -

-22ಕೆಡಿವಿಜಿ51ಃ:

ದಾವಣಗೆರೆಯ ಬಾಷಾ ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್‌ ಚುನಾವಣಾ ಪ್ರಚಾರ ನಡೆಸಿದರು.