ನನ್ನ ಗೆಲುವಿಗೆ ಇಡೀ ಕರ್ನಾಟಕದ ಜನತೆ ಆರ್ಶಿವಾದ ಕಾರಣ

| Published : Feb 05 2024, 01:51 AM IST

ಸಾರಾಂಶ

ತಾಯಿ ತವರಾದ, ತಮ್ಮ ಹುಟ್ಟೂರಾದ ಚಾಮರಾಜನಗರ ಜಿಲ್ಲೆಗೆ ಬಿಗ್ ಬಾಸ್ ಸ್ಪರ್ಧೆಯ ವಿಜೇತ ಕಾರ್ತೀಕ್ ಭೇಟಿ ಕೊಟ್ಟು ಮರಿಯಾಲ ಮಠ, ಚಾಮರಾಜನಗರದ ವಿರಕ್ತ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರತಾಯಿ ತವರಾದ, ತಮ್ಮ ಹುಟ್ಟೂರಾದ ಚಾಮರಾಜನಗರ ಜಿಲ್ಲೆಗೆ ಬಿಗ್ ಬಾಸ್ ಸ್ಪರ್ಧೆಯ ವಿಜೇತ ಕಾರ್ತೀಕ್ ಭೇಟಿ ಕೊಟ್ಟು ಮರಿಯಾಲ ಮಠ, ಚಾಮರಾಜನಗರದ ವಿರಕ್ತ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆಗೆ ಪೂಜೆ ಸಲ್ಲಿಸಿದರು.

ಬಳಿಕ, ಮಾತನಾಡಿಕ ಚಾಮರಾಜನಗರ ಜಿಲ್ಲೆ ನನ್ನ ಹುಟ್ಟೂರು, ತಾಯಿಯ ಊರು‌ ಹೆಗ್ಗೋಠಾರ, ನಾನು ಹುಟ್ಟಿದ್ದು ಹಾಗೂ ಒಂಬತ್ತು ತಿಂಗಳು ಬೆಳೆದದ್ದು ಇದೇ ಜಿಲ್ಲೆಯಲ್ಲಿ, ಬಾಲ್ಯದ ನೆನಪು ಈಗಲೂ ಹಾಗೇ ಇದೆ ಎಂದರು. ಅಣ್ಣಾವ್ರು ಹುಟ್ಟಿದ್ದು ಇದೇ ಜಿಲ್ಲೆ, ಅದೇ ನನಗೆ ಹೆಮ್ಮೆ, ಒಂದು ಕೊರತೆ ಇದೆ, ಗೆದ್ದ ತಕ್ಷಣ ಅಪ್ಪು ಸರ್ ಆರ್ಶಿವಾದ ಪಡೆಯಬೇಕಿತ್ತು, ಅದು ಸಾಧ್ಯವಾಗಲಿಲ್ಲ, ಈ ವಿಚಾರ ಬೇಸರ ತಂದಿದೆ ಎಂದು ಪುನೀತ್ ಅವರನ್ನು ನೆನೆದರು.ನನ್ನ ಗೆಲ್ಲುವಿಗೆ ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕದ ಜನತೆ ನನಗೆ ಆರ್ಶಿವಾದ ಮಾಡಿದ್ದಾರೆ, ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಎಲ್ಲರೂ ಗೆದ್ದಿದ್ದೇವೆ, ನಮ್ಮ ವ್ಯಕ್ತಿತ್ವವನ್ನ ಬಿಗ್ ಬಾಸ್ ವೇದಿಕೆ ಹಾಗೂ ಸುದೀಪ್ ಹೊರ ತಂದಿದ್ದಾರೆ ಎಂದು ಹೇಳಿದರು. ಬಿಗ್‌ಬಾಸ್‌ ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಫ್ರೆಂಡ್ ಶಿಪ್ ಬೆಳೆಸಿಕೊಳ್ಳುತ್ತೇನೆ, ನನಗೆ ಸಾಕಷ್ಟು ಆಫರ್ ಬಂದಿದೆ, ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ, ಜನರು ನನಗೆ ಹೆಚ್ಚು ಮತ‌ ನೀಡಿ‌ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ ಎಂದು ತಿಳಿಸಿದರು.ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ‌ ನನ್ನ ಕೆಲಸ ಮಾಡುತ್ತೇನೆ, ಬಿಗ್‌ಬಾಸ್‌ ಒಂದು ದೊಡ್ಡ ವೇದಿಕೆ, ಎಲ್ಲರ ವ್ಯಕ್ತಿತ್ವವನ್ನ ಹೊರತರುವ ರಿಯಾಲಿಟಿ ಶೋ ಅದಾಗಿದೆ, ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಎಂದು ತಿಳಿಸಿದರು.