ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಆರ್ಗನೈಸೇಷನ್ ಆಫ್ ಜೆನಿಟೋಯೂರ ಸ್ಕೆಡ್ಯೂಲ್‌ಸರ್ಜನ್ಸ್ (ಮೈಸೋಗಸ್), ಕರ್ನಾಟಕ ಯೂರಾಲಜಿ ಅಸೋಸಿಯೇಷನ್ (ಕೆಯುಎ) ಆಶ್ರಯದಲ್ಲಿ ಮೂತ್ರ ವಿಸರ್ಜನೆ ನಿಯಂತ್ರಣ ತಪ್ಪುವಿಕೆ ಕುರಿತು ಹಮ್ಮಿಕೊಂಡಿದ್ದ 7ನೇ ವಾರ್ಷಿಕ ಲೈವ್ ಆಪರೇಟಿವ್ ಕಾರ್ಯಾಗಾರ ಕೆಯುಎ-ಎಂವೈಎಸ್‌ಓಜಿಯುಎಸ್‌ಯುಆರ್‌ಓಸಿಎಒಎನ್ 2026 ಅನ್ನು ನಗರದಲ್ಲಿ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಆತಿಥ್ಯವನ್ನು ನಗರದ ಮಣಿಪಾಲ್ ಆಸ್ಪತ್ರೆಯ ಯೂರಾಲಜಿ ವಿಭಾಗ ವಹಿಸಿತ್ತು. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಖ್ಯಾತ ಮೂತ್ರರೋಗ ತಜ್ಞರು ಸಂಕಿರಣ ಪ್ರಕರಣಗಳ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ನೆರವೇರಿಸಿದರು.ಇದರ ನೇರ ಪ್ರಸಾರವನ್ನು ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ನೆರೆದಿದ್ದ 120 ಹೆಚ್ಚು ಪ್ರತಿನಿಧಿಗಳಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.ಬೆಂಗಳೂರಿನ ಇನ್ ಸ್ಟಿಟ್ಯೂಟ್ ಆಫ್ ನೆಫ್ರೋ ಯೂರಾಲಜಿಯ ಸಂಸ್ಥಾಪಕ ನಿರ್ದೇಶಕ ಪ್ರೊ.ಜಿ.ಕೆ. ವೆಂಕಟೇಶ್ ಮತ್ತು ಕರ್ನಾಟಕ ಯೂರಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ.ಎಚ್.ಎನ್. ನವೀನ್ ಕಾರ್ಯಾಗಾರ ಉದ್ಘಾಟಿಸಿದರು.ಪ್ರೊ. ಜಿ.ಕೆ. ವೆಂಕಟೇಶ್ ಮೈಸೋಗಸ್ ಸಂಸ್ಥೆಯ ಶೈಕ್ಷಣಿಕ ಉಪಕ್ರಮಗಳನ್ನು ಶ್ಲಾಘಿಸಿದರು. ಕರ್ನಾಟಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ, ಅತ್ಯಾಧುನಿಕ 500 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಯೂರಾಲಜಿ ಆಸ್ಪತ್ರೆಯನ್ನು ನಿರ್ಮಿಸಲು ಗುಂಜೂರಿನಲ್ಲಿ 5 ಎಕರೆ ಜಮೀನನ್ನು ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯೂರಾಲಜಿಗೆ ಮಂಜೂರು ಮಾಡಲಾಗಿದೆ ಎಂದು ಅವರು ಪ್ರಕಟಿಸಿದರು.ಮಣಿಪಾಲ್‌ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ಮಾತನಾಡಿ, ಮಣಿಪಾಲ್ ಫೌಂಡೇಶನ್ ವತಿಯಿಂದ ಬಿಪಿಎಲ್ ವರ್ಗದ ರೋಗಿಗಳಿಗೆ ಮುಂದುವರಿದ ಯೂರಾಲಜಿ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.ಯೂರಾಲಜಿಕಲ್‌ಸೊಸೈಟಿ ಆಫ್‌ಇಂಡಿಯಾ ಅಧ್ಯಕ್ಷ ಡಾ.ಆರ್. ಕೇಶವಮೂರ್ತಿ ಮಾತನಾಡಿ, ಪ್ರತಿ ವರ್ಷ ದೇಶದಲ್ಲಿ 631 ಹೊಸ ಯೂರಾಲಜಿಸ್ಟ್ ಗಳು ವೈದ್ಯಕೀಯ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.ತಜ್ಞ ವೈದ್ಯರು ಮೊದಲ ಹಂತದ ನಗರಗಳಿಂದ ಎರಡನೇ ಹಂತದ ನಗರಗಳತ್ತ ಮುಖ ಮಾಡುತ್ತಿರುವುದರಿಂದ, ಯುವ ಯೂರಾಲಜಿಸ್ಟ್ ಗಳಿಗೆ ಅವರ ದೈನಂದಿನ ವೃತ್ತಿಜೀವನದಲ್ಲಿ ಇಂತಹ ಶೈಕ್ಷಣಿಕ ಕಾರ್ಯಾಗಾರಗಳು ಹಾಗೂ ತರಬೇತಿಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಅವರು ಆಶಿಸಿದರು.ಡಾ.ಕೆ. ಉಮೇಶ್ ಅವರ ನೇತೃತ್ವದಲ್ಲಿ ಯೂರಾಲಜಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಮೈಸೋಗಸ್ ಸದಸ್ಯರು ಹಾಗೂ ಕೌನ್ಸಿಲ್ ಪದಾಧಿಕಾರಿಗಳು ಭಾಗವಹಿಸಿದ್ದರು.ಜೆಎಸ್‌ಎಸ್ ಆಸ್ಪತ್ರೆಯ ಉಪ ನಿರ್ದೇಶಕ ಡಾ.ಎಂ.ಎನ್. ಸುಮನ, ಮೈಸೋಗಸ್ ಅಧ್ಯಕ್ಷ ಡಾ.ಜೆ.ಬಿ. ನರೇಂದ್ರ, ಕಾರ್ಯದರ್ಶಿ ಡಾ.ಎಚ್.ಎಲ್. ಪ್ರಸಾದ್, ಕೆಯುಎ ಕಾರ್ಯದರ್ಶಿ ಡಾ. ಸಚಿನ್ ಧಾರವಾಡಕರ್ ಇದ್ದರು.ಸಂಘಟನಾ ಕಾರ್ಯದರ್ಶಿ ಡಾ.ಟಿ.ಪಿ. ದಿನೇಶ್ ಕುಮಾರ್ ವಂದಿಸಿದರು. ಸಂಘಟನಾ ಅಧ್ಯಕ್ಷ ಡಾ. ಪ್ರಕಾಶ್ ಕೆ. ಪ್ರಭು ಸ್ವಾಗತಿಸಿದರು.
----------------ಮೂತ್ರವಿಸರ್ಜನೆ ನಿಯಂತ್ರಣ ತಪ್ಪುವಿಕೆ ಕುರಿತು ಕಾರ್ಯಾಗಾರ
ಅತ್ಯಾಧುನಿಕ 500 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಯೂರಾಲಜಿ ಆಸ್ಪತ್ರೆಯನ್ನು ನಿರ್ಮಿಸಲು ಗುಂಜೂರಿನಲ್ಲಿ 5 ಎಕರೆ ಜಮೀನ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.