ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಎರಡು ಸೇವೆಗಳ ದರ ಪರಿಷ್ಕರಿಸಲಾಗಿದೆ. ಹೊಸದಾಗಿ ಆರಂಭವಾದ ಬೆಳ್ಳಿ ರಥ ಸೇವೆಗೆ ₹12 ಸಾವಿರ, ₹6 ಸಾವಿರ ರುಪಾಯಿ ಇದ್ದ ಪಂಚಾಮೃತ ಮಹಾಭಿಷೇಕ ಸೇವೆಗೆ ₹11 ಸಾವಿರ ದರ ನಿಗದಿ ಮಾಡಲಾಗಿದೆ.

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಎರಡು ಸೇವೆಗಳ ದರ ಪರಿಷ್ಕರಿಸಲಾಗಿದೆ. ಹೊಸದಾಗಿ ಆರಂಭವಾದ ಬೆಳ್ಳಿ ರಥ ಸೇವೆಗೆ ₹12 ಸಾವಿರ, ₹6 ಸಾವಿರ ರುಪಾಯಿ ಇದ್ದ ಪಂಚಾಮೃತ ಮಹಾಭಿಷೇಕ ಸೇವೆಗೆ ₹11 ಸಾವಿರ ದರ ನಿಗದಿ ಮಾಡಲಾಗಿದೆ.

ಬೆಳ್ಳಿ ರಥೋತ್ಸವ ಸೇವೆ ಹೊಸದಾಗಿ ಆರಂಭ

ಬೆಳ್ಳಿ ರಥೋತ್ಸವ ಸೇವೆ ಹೊಸದಾಗಿ ಆರಂಭಿಸಲಾಗಿದ್ದು, ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜ್ಯೇಷ್ಠ ಮಾಸದ ಶುದ್ಧ ಷಷ್ಠಿಯವರೆಗೆ. ಪ್ರತಿ ತಿಂಗಳ ಶುದ್ಧ ಬಿದಿಗೆ, ಬಹುಳ ಬಿದಿಗೆ, ಶುದ್ಧ ಚೌತಿ, ಬಹುಳ ಚೌತಿ, ಶುದ್ಧ ಷಷ್ಠಿ, ಬಹುಳ ಷಷ್ಠಿ, ಶುದ್ಧ ನವಮಿ, ಬಹುಳ ನವಮಿ, ಶುದ್ಧ ಚರ್ತುದಶಿ, ಬಹುಳ ಚರ್ತುದಶಿ, ಈ ಹತ್ತು ದಿನಗಳಲ್ಲಿ ಹರಕೆ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬೆಳ್ಳಿ ರಥೋತ್ಸವ ಸೇವೆ ದಿನ ಭಂಡಿ ರಥೋತ್ಸವ ನಡೆಯುವುದಿಲ್ಲ. ಬೀದಿ ಉತ್ಸವ ನಡೆಯುವ ದಿವಸ ಬೆಳ್ಳಿ ರಥೋತ್ಸವ ಸೇವೆ ಇರುವುದಿಲ್ಲ ದೇವಳದ ಪ್ರಕಟಣೆ ತಿಳಿಸಿದೆ.