ಸಾರಾಂಶ
ಫಲವತ್ತಾದ ಬಾಳೆ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರೈತನೊಬ್ಬ ತನ್ನ ಜಮೀನಿನ ಸುತ್ತಲೂ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು : ಫಲವತ್ತಾದ ಬಾಳೆ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರೈತನೊಬ್ಬ ತನ್ನ ಜಮೀನಿನ ಸುತ್ತಲೂ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಕ್ಕರಹಟ್ಟಿ ನಿವಾಸಿ ಸೋಮೇಶ್ ಎನ್ನುವವರೇ ಮಾಡೆಲ್‌ಗಳ ಭಾವಚಿತ್ರ ಅಳವಡಿಸಿರುವ ರೈತ. ಸೋಮೇಶ್ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಬೆಳೆ ಫಲವತ್ತಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ತನ್ನ ಬೆಳೆಗಳಿಗೆ ಜನರ ದೃಷ್ಟಿ ಬೀಳಬಾರದೆಂಬ ಉದ್ದೇಶದಿಂದ ಜಮೀನಿನ ಸುತ್ತಲೂ ಸುಮಾರು 10 ಸ್ಥಳಗಳಲ್ಲಿ ಮಾಡೆಲ್‌ಗಳ ಅರೆ ಬೆತ್ತಲೆ ಭಾವಚಿತ್ರ ಅಳವಡಿಸಿದ್ದಾರೆ.
ರಸ್ತೆ ಮಾರ್ಗದಲ್ಲಿ ಸಾಗುವ ಜನರು ಬಾಳೆ ಗಿಡದತ್ತ ಕಣ್ಣು ಹಾಯಿಸದೆ ಸುತ್ತಲೂ ಅಳವಡಿಸಿರುವ ಮಾಡೆಲ್ ಫೋಟೋಗಳನ್ನು ಕಣ್ತುಂಬಿಕೊಂಡು ಸಾಗುತ್ತಿದ್ದು, ಕೆಲ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದರಿಂದ ಕೆಲವರಿಗೆ ಇರಿಸು ಮುರಿಸು ಉಂಟಾಗಿ ಗ್ರಾಮಸ್ಥರನ್ನೂ ಕೆರಳಿಸಿದೆ.