ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಉತ್ತಮ ಪ್ರಗತಿ ಸಾಧಿಸಬೇಕಿದ್ದು, ಖಂಡಿತವಾಗಿ ಆಗಲಿದೆ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರಿನ ವಿಪ್ರ ಪ್ರೊಫೆಷನಲ್ ಫೋರಂ ವತಿಯಿಂದ ವಿಜಯನಗರದ ಜೆಸಿಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪಿಎಫ್ ಬಿಸಿನೆಸ್ ಕಾನ್ ಕ್ಲೇವ್ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವದ ಒಟ್ಟು ಜಿಡಿಪಿ ಅಂದಾಜು 100 ಥ್ರಿಲಿಯನ್ ಗಳಿದ್ದು, ವಿಶ್ವದ ಹಿರಿಯಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಜಿಡಿಪಿ 30 ಥ್ರಿಲಿಯನ್ ಇದೆ. ಆ ಮೂಲಕ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗ ಅಮೆರಿಕಾ ಹೊಂದಿದೆ. ಭಾರತದ ಜನಸಂಖ್ಯೆಯ ಶೇ. 25ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಮೆರಿಕಾದ ಆರ್ಥಿಕತೆ ಭಾರತಕ್ಕಿಂತ ಅತ್ಯಂತ ಉತ್ತಮವಾಗಿದೆ ಎಂದರು.ಆನಂತರದ ಸ್ಥಾನಗಳಲ್ಲಿ ಚೀನಾ, ಜಪಾನ್ಹಾಗೂ ಭಾರತ ಇದೆ. ಭಾರತದ ಆರ್ಥಿಕತೆಯಲ್ಲಿ ವಿಶ್ವದ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿಕೊಂಡರು. ನಮಗಿಂತ ಮುಂದಿರುವ ರಾಷ್ಟ್ರಗಳು ಆರ್ಥಿಕತೆಯಲ್ಲಿ ನಮಗಿಂತ ಸಾಕಷ್ಟು ಮಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕಾ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಿರಬೇಕಿದ್ದು, ಅವರಿಗೆ ನಮ್ಮ ಅಗತ್ಯತೆ ಇದೆ ಹಾಗೂ ನಮಗೂ ಅವರ ಅವಶ್ಯತೆ ಇದೆ ಎಂದು ಹೇಳಿದರು.
ಎಐನಿಂದ ಜಗತ್ತಿಗೆ ಆಪತ್ತು- ರವಿ ಹೆಗಡೆ''''''''''''''''ಕನ್ನಡಪ್ರಭ'''''''''''''''' ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ಕೃತಕ ಬುದ್ದಿಮತ್ತೆ (ಎಐ) ನಿಂದ ದೊಡ್ಡಮಟ್ಟದ ಪರಿಣಾಮ ಬೀರಲಿದ್ದು, ಇಡೀ ವಿಶ್ವವನ್ನೇ ಬದಲಿಸಲಿದೆ. ಪ್ರಮುಖವಾಗಿ ಎಐನಿಂದ ಬ್ರಾಹ್ಮಣ ಸಮುದಾಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಲಿದೆ. ಬ್ರಾಹ್ಮಣರು ಮಾಡುವ ಕೆಲಸವನ್ನು ಎಐ ತಾನೇ ಮಾಡುತ್ತಿದೆ. ಉದಾಹರಣೆಗೆ ಬ್ರಾಹ್ಮಣರು ಹೇಳುವ ಮಂತ್ರವನ್ನು ಇಂದು ಎಐ ಹೇಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಪಿಎಫ್ ಅಧ್ಯಕ್ಷ ಹಾಗೂ ಜಿಎಸ್ಎಸ್ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಡಿ. ಶ್ರೀಹರಿ ಮಾತನಾಡಿ, ಬಡ ಬ್ರಾಹ್ಮಣ, ಬಡ ಪೂಜಾರಿ ಎಂಬ ಪದಗಳನ್ನು ತೆಗೆಯು ವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ವಿಪಿಎಫ್ ಮೈಸೂರಿನಲ್ಲಿ ತನ್ನ ವಿಂಗ್ ಆರಂಭಿಸಿದೆ. ನಾವು ಎರಡು ಕಾರಣಗಳಿಂದ ಒಂದಾಗುತ್ತಿದ್ದು, ಯಾರಿಗಾದರೂ ತೊಂದರೆ ಎದುರಾದರೆ ನೆರವಿಗೆ ಧಾವಿಸುತ್ತೇವೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದ ಚೇರ್ಮೇನ್ ಸಮಾರ್ಥ್ ವಿದ್ಯಾ ಮಾತನಾಡಿದರು.
ಉದ್ಯಮಿಗಳಾದ ಕೇಶವ್, ಜಿ.ಎಸ್.ಎಸ್.ಎಸ್ ಭರತ್, ಜಯಸಿಂಹ, ವೆಂಕಟೇಶ್, ಎಸ್. ಭಾಷ್ಯಂ. ಶ್ರೀನಿವಾಸ್, ವರದರಾಜನ್, ಅನಂತ ನಾಗರಾಜ್, ಎಸ್. ರಾಧಾಕೃಷ್ಣ, ವಿಪಿಎಫ್ ಸಮಿತಿ ಉಪಾಧ್ಯಕ್ಷ ಡಾ. ಎಸ್. ಮುರುಳಿ, ಕೆ.ಆರ್. ಸತ್ಯನಾರಾಯಣ್, ಕಾರ್ಯದರ್ಶಿ ಎ. ಸುಧೀಂದ್ರ, ಜಂಟಿ ಕಾರ್ಯದರ್ಶಿಗಳಾದ ಶ್ರೀವತ್ಸ, ಮಂಜುನಾಥ್, ಸಮರ್ಥ್, ಖಜಾಂಚಿ ಸಿ.ಎಸ್. ಸತ್ಯಪ್ರಕಾಶ್, ನಿರ್ದೇಶಕರಾದ ಎಚ್.ಎನ್. ಚಂದ್ರಶೇಖರ್, ಜಿ.ಎಸ್. ಗಣೇಶ್, ಡಾ. ಕಾರ್ತಿಕ್ ಪಂಡಿತ್, ಪಿ.ಎಸ್. ಶಿವಪ್ರಸಾದ್, ಡಿ. ನಾರಾಯಣ್, ಕೆ. ಪ್ರಭಾಕಾರ್ ರಾವ್. ಡಾ.ಎಲ್. ಸವಿತಾ, ಕೆ.ಎಸ್. ಶಿವಶಂಕರ್, ಸಮುದಾಯ ಮುಖಂಡರು ಮತ್ತು ವಿವಿಧ ಕಂಪನಿಯ ಮುಖ್ಯಸ್ಥರು ಇದ್ದರು.