ನಾಡಹಬ್ಬ ದಸರಾ ಮಹೋತ್ಸವ : ಎರಡನೇ ತಂಡದಲ್ಲಿ ಸುಗ್ರೀವನೇ ಬಲಶಾಲಿ

| N/A | Published : Aug 27 2025, 01:00 AM IST / Updated: Aug 27 2025, 05:14 AM IST

ನಾಡಹಬ್ಬ ದಸರಾ ಮಹೋತ್ಸವ : ಎರಡನೇ ತಂಡದಲ್ಲಿ ಸುಗ್ರೀವನೇ ಬಲಶಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದಲ್ಲಿ ನಾಡಿಗೆ ಆಗಮಿಸಿರುವ 5 ಆನೆಗಳ ತೂಕ ಪರೀಕ್ಷೆಯಲ್ಲಿ ಸುಗ್ರೀವ ಆನೆಯು ಬಲಶಾಲಿಯಾಗಿ ಹೊರ ಹೊಮ್ಮಿತು. ಕೇವಲ 5 ಕೆ.ಜಿ. ವ್ಯತ್ಯಾಸದಿಂದ ಅಜಾನುಬಾಹು ಶ್ರೀಕಂಠ ಆನೆಯು 2ನೇ ಸ್ಥಾನ ಪಡೆಯಿತು.

 ಬಿ. ಶೇಖರ್‌ ಗೋಪಿನಾಥಂ

  ಮೈಸೂರು :  ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದಲ್ಲಿ ನಾಡಿಗೆ ಆಗಮಿಸಿರುವ 5 ಆನೆಗಳ ತೂಕ ಪರೀಕ್ಷೆಯಲ್ಲಿ ಸುಗ್ರೀವ ಆನೆಯು ಬಲಶಾಲಿಯಾಗಿ ಹೊರ ಹೊಮ್ಮಿತು. ಕೇವಲ 5 ಕೆ.ಜಿ. ವ್ಯತ್ಯಾಸದಿಂದ ಅಜಾನುಬಾಹು ಶ್ರೀಕಂಠ ಆನೆಯು 2ನೇ ಸ್ಥಾನ ಪಡೆಯಿತು.

ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ- ಎಲೆಕ್ಟ್ರಾನಿಕ್ ತೂಕದ ಯಂತ್ರದ ಎರಡನೇ ತಂಡದಲ್ಲಿ ಆಗಮಿಸಿರುವ ಹೇಮಾವತಿ, ಶ್ರೀಕಂಠ, ಸುಗ್ರೀವ, ರೂಪಾ ಮತ್ತು ಗೋಪಿ ಆನೆಯ ತೂಕವನ್ನು ಮಂಗಳವಾರ ಕ್ರಮವಾಗಿ ಪರೀಕ್ಷೆ ಮಾಡಲಾಯಿತು.

ಇದರಲ್ಲಿ 43 ವರ್ಷದ ಸುಗ್ರೀವ ಆನೆಯು 5545 ಕೆ.ಜಿ. ತೂಕದೊಂದಿಗೆ ಮೊದಲ ಸ್ಥಾನ ಪಡೆಯಿತು. 56 ವರ್ಷದ ಶ್ರೀಕಂಠ ಆನೆಯು 5540 ಕೆ.ಜಿ. ತೂಕದೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಇನ್ನೂ 42 ವರ್ಷದ ಗೋಪಿ ಆನೆಯು 4990 ಕೆ.ಜಿ. ತೂಕದೊಂದಿಗೆ 3ನೇ ಸ್ಥಾನ, 44 ವರ್ಷದ ರೂಪಾ ಆನೆಯು 3320 ಕೆ.ಜಿ. ತೂಕದೊಂದಿಗೆ 4ನೇ ಸ್ಥಾನ ಹಾಗೂ 11 ವರ್ಷದ ಹೇಮಾವತಿ ಆನೆಯು 2440 ಕೆ.ಜಿ. ತೂಕದೊಂದಿಗೆ 5ನೇ ಸ್ಥಾನ ಪಡೆಯಿತು.

ಸಾಮೂಹಿಕ ನಡಿಗೆ

ಇದಕ್ಕೂ ಮುನ್ನ ಅರಮನೆ ಆವರಣದ ಆನೆ ಬಿಡಾರದಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಎಲ್ಲಾ 14 ಆನೆಗಳು ನಡಿಗೆ ತಾಲೀನಿಲ್ಲಿ ಭಾಗವಹಿಸಿದ್ದವು.

ಅರಮನೆ ಆವರಣದಿಂದ ಹೊರಟ ಗಜಪಡೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ- ಎಲೆಕ್ಟ್ರಾನಿಕ್ ತೂಕದ ಯಂತ್ರದ ಬಳಿಗೆ ಬಂದವು. ಈ ವೇಳೆ ಎರಡನೇ ತಂಡದ ಐದಾನೆಗಳ ತೂಕವನ್ನು ಮಾಡಲಾಯಿತು. ಈ ತೂಕ ಪರೀಕ್ಷೆಯ ಬಳಿಕ ಎಲ್ಲಾ 14 ಆನೆಗಳು ಧನ್ವಂತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ ಬಳಸಿಕೊಂಡು ಕೆ.ಆರ್. ವೃತ್ತ, ಚಾಮರಾಜ ವೃತ್ತದ ಮೂಲಕ ಮತ್ತೆ ಅರಮನೆ ಆವರಣದ ಆನೆ ಬಿಡಾರಕ್ಕೆ ತಲುಪಿದವು.

ಆನೆಗಳ ತೂಕ ಪರೀಕ್ಷೆಗೆ 250 ರೂ.

ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ- ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೇಲೆ ನಿಲ್ಲಿಸಿ ಐದಾನೆಗಳ ತೂಕ ಪರೀಕ್ಷಿಸಲಾಯಿತು. ಪ್ರತಿ ಆನೆಯ ತೂಕ ಪರೀಕ್ಷೆಗೆ 50 ರೂ.ಯಂತೆ 5 ಆನೆಗಳಿಗೆ 250 ರೂ. ಅನ್ನು ಅರಣ್ಯ ಇಲಾಖೆ ವತಿಯಿಂದ ಪಾವತಿಸಲಾಯಿತು.

ಭೀಮನನ್ನು ಹಿಂದಿಕ್ಕಿದ ಸುಗ್ರೀವ, ಶ್ರೀಕಂಠ!

ದಸರೆಗೆ ಬಂದಿರುವ ಮೊದಲ ತಂಡದ ಆನೆಗಳ ತೂಕ ಪರೀಕ್ಷೆಯಲ್ಲಿ ಭೀಮ ಆನೆಯು 5465 ಕೆ.ಜಿ.ಯೊಂದಿಗೆ ಮೊದಲ ಸ್ಥಾನ ಪಡೆದಿತ್ತು. ಆದರೆ, 2ನೇ ತಂಡದ ತೂಕ ಪರೀಕ್ಷೆಯಲ್ಲಿ ಸುಗ್ರೀವ ಆನೆ 5545 ಕೆ.ಜಿ.ಯೊಂದಿಗೆ ಮೊದಲ ಸ್ಥಾನ ಮತ್ತು ಶ್ರೀಕಂಠ ಆನೆಯು 5540 ಕೆ.ಜಿ. ತೂಕದೊಂದಿಗೆ 2ನೇ ಸ್ಥಾನ ಪಡೆಯುವ ಮೂಲಕ 5465 ಕೆ.ಜಿ. ತೂಕ ಹೊಂದಿದ್ದ ಭೀಮ ಆನೆಯನ್ನು 3ನೇ ಸ್ಥಾನಕ್ಕೆ ಸರಿಸಿವೆ.

ಹಾಗೆಯೇ, ಅಂಬಾರಿ ಆನೆ ಅಭಿಮನ್ಯು 5360 ಕೆ.ಜಿ. ತೂಕದೊಂದಿಗೆ 4ನೇ ಸ್ಥಾನ, ಧನಂಜಯ ಆನೆಯು 5310 ಕೆ.ಜಿ. ತೂಕದೊಂದಿಗೆ 5ನೇ ಸ್ಥಾನ, ಏಕಲವ್ಯ ಆನೆಯು 5305 ಕೆ.ಜಿ. ತೂಕದೊಂದಿಗೆ 6ನೇ ಸ್ಥಾನ, ಮಹೇಂದ್ರ ಆನೆಯು 5120 ಕೆ.ಜಿ. ತೂಕದೊಂದಿಗೆ 7ನೇ ಸ್ಥಾನ, ಪ್ರಶಾಂತ ಆನೆಯು 5110 ಕೆ.ಜಿ. ತೂಕದೊಂದಿಗೆ 8ನೇ ಸ್ಥಾನ, ಗೋಪಿ ಆನೆಯು 4990 ಕೆ.ಜಿ. ತೂಕದೊಂದಿಗೆ 9ನೇ ಸ್ಥಾನ, ಕಂಜನ್ ಆನೆಯು 4880 ಕೆ.ಜಿ. ತೂಕದೊಂದಿಗೆ 10ನೇ ಸ್ಥಾನ ಪಡೆದಿದೆ.

ಉಳಿದಂತೆ ಹೆಣ್ಣಾನೆಗಳಾದ ಲಕ್ಷ್ಮಿ ಆನೆಯು 3730 ಕೆ.ಜಿ. ತೂಕದೊಂದಿಗೆ 11ನೇ ಸ್ಥಾನ, ರೂಪಾ ಆನೆಯು 3320 ಕೆ.ಜಿ. ತೂಕದೊಂದಿಗೆ 12ನೇ ಸ್ಥಾನ, ಕಾವೇರಿ ಆನೆಯು 3010 ಕೆ.ಜಿ. ತೂಕದಿಂದ 13ನೇ ಸ್ಥಾನ ಹಾಗೂ ಹೇಮಾವತಿ ಆನೆಯು 2440 ಕೆ.ಜಿ. ತೂಕದೊಂದಿಗೆ 14ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

2 ನೇ ತಂಡ ಆನೆಗಳ ತೂಕ (ಕೆ.ಜಿ.ಗಳಲ್ಲಿ)

1. ಸುಗ್ರೀವ- 5545

2. ಶ್ರೀಕಂಠ- 5540

3. ಗೋಪಿ- 4990

4. ರೂಪಾ- 3320

5. ಹೇಮಾವತಿ- 2440

14 ಆನೆಗಳ ಬಲಾಬಲ (ಕೆ.ಜಿ.ಗಳಲ್ಲಿ)

1. ಸುಗ್ರೀವ- 5545

2. ಶ್ರೀಕಂಠ- 5540

3. ಭೀಮ- 5465

4. ಅಭಿಮನ್ಯು- 5360

5. ಧನಂಜಯ- 5310

6. ಏಕಲವ್ಯ- 5305

7. ಮಹೇಂದ್ರ- 5120

8. ಪ್ರಶಾಂತ- 5110

9. ಗೋಪಿ- 4990

10. ಕಂಜನ್- 4880

11. ಲಕ್ಷ್ಮೀ- 3730

12. ರೂಪಾ- 3320

13. ಕಾವೇರಿ- 3010

14. ಹೇಮಾವತಿ- 2440

Read more Articles on