ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಉದ್ಘಾಟನೆ ಮಾಡಿಸುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದಸರಾ ನಮ್ಮ ನಾಡಿನ ಹಬ್ಬ. ಚಾಮುಂಡೇಶ್ವರಿ ಮುಖಾಂತರ ಮೈಸೂರು ದಸರಾವನ್ನು ನಾವೆಲ್ಲರೂ ಆಚರಣೆ ಮಾಡುತ್ತೇವೆ. ಅವರು ಸಹ ಕನ್ನಡಿಗರೇ, ಅವರಿಗೂ ಅಭಿಮಾನವಿದೆ ಎಂದರು. ನಾವು ಯಾವ ದೇವರನ್ನು ವಿರೋಧ ಮಾಡುವುದಿಲ್ಲ, ಎಲ್ಲಾ ದೇವರನ್ನು ನಮ್ಮ ನಮ್ಮ ದೇವರೆಂದು ಮನಗಂಡು ದಸರಾ ಉದ್ಘಾಟನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.ಅವರು ಪ್ರೀತಿಯಿಂದ ಎಲ್ಲಾ ದೇವರ ಮೇಲೆ ನಂಬಿಕೆ ಇಡಬೇಕಾಗುತ್ತದೆ. ನಾವು ಭಾರತ ದೇಶದಲ್ಲಿರುವುದು. ಒಟ್ಟಿಗೆ ಬದುಕುವ ಮೂಲಕ ಜಾತ್ಯತೀತ ರಾಷ್ಟ್ರವಾಗಿ ನಾವು ಒಟ್ಟಿಗೆ ಹೋಗಬೇಕಾಗುತ್ತದೆ. ಅವರ ಕಾರ್ಯುಕ್ರಮಗಳನ್ನು ನಮ್ಮ ಹಿಂದೂಗಳು ಹೋಗಿ ಉದ್ಘಾಟನೆ ಮಾಡಬಹುದು ಎಂದರು. ಒಂದೇ ದರ್ಗಾದಲ್ಲಿ ಎರಡು ದೇವರಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಇಲ್ಲಿ ಅವರು ಬೇಡ ಇವರು ಬೇಡ ಅನ್ನುವುದು ಬೇಕಾಗಿಲ್ಲ. ಅದರ ಜೊತೆಯಲ್ಲಿ ಅವರಿಗೂ ಸಹ ಎಲ್ಲಾ ದೇವರ ಮೇಲೆ ಅಭಿಮಾನ ಇದ್ದರಾಯಿತು. ಕನ್ನಡೀಕರಣವನ್ನು ಬರೀ ಭುವನೇಶ್ವರಿ ಮೇಲೆ ಮಾತನಾಡಿದ್ದಾರೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಹಿರಿಯರಾದವರು. ಸಾಹಿತಿಗಳು.. ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ತೆಗೆದುಕೊಂಡವರು. ದೇವರ ಬಗ್ಗೆ ಬಣ್ಣದ ಬಗ್ಗೆ ಇದರ ಬಗ್ಗೆ ಮಾತನಾಡಬಾರದು ಎಂದರು.
ಅವರು ಉದ್ಘಾಟನೆ ಮಾಡಬೇಕಾದರೇ ಚಾಮುಂಡಿ ತಾಯಿ ಮೇಲೆ ಅಭಿಮಾನ ಮತ್ತು ಕನ್ನಡಾಂಬೆ ಮೇಲೆ ಅಭಿಮಾನ ಇಟ್ಟುಕೊಂಡು ಮಾಡಲಿ ಅನ್ನುವುದು ನಮ್ಮೆಲ್ಲರ ಮನೋಭಾವ ಎಂದರು.