ಅನಿರ್ದಿಷ್ಟಾವಧಿ ಹೋರಾಟಕ್ಕೆ ಎನ್.ಮಹೇಶ್ ಬೆಂಬಲ

| Published : Oct 10 2024, 02:16 AM IST

ಅನಿರ್ದಿಷ್ಟಾವಧಿ ಹೋರಾಟಕ್ಕೆ ಎನ್.ಮಹೇಶ್ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಮಾಜಿ ಸಚಿನ ಎನ್.ಮಹೇಶ್ ಭಾಗವಹಿಸಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಚಾಮರಾಜನಗರ ಜಿಲ್ಲಾ ಸಮಿತಿ ಅವರ ನೇತೃತೃದಲ್ಲಿ ಆರ್‌ಡಿಪಿಆರ್ ಕುಟುಂಬದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಗರದ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಮಾಜಿ ಸಚಿವ ಎನ್.ಮಹೇಶ್ ಭಾಗವಹಿಸಿ ಬೆಂಬಲ ಸೂಚಿಸಿದರು. ಹಳ್ಳಿಗಳ ಅಭಿವೃದ್ಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳ ಮೇಲೆ ಇರುವುದರಿಂದ ಸಿಎಂ, ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಕರೆದು ಪ್ರತಿ ತಿಂಗಳು ಒಂದು ಸಭೆ ಮಾಡಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಡಿಪಿ ಸಭೆಗಳ ಮಾದರಿಯಲ್ಲಿ ಪಂಚಾಯಿತಿ ಮಟ್ಟದಲ್ಲೂ ಮಾಡಬೇಕು. ಪಂಚಾಯಿತಿಯಲ್ಲಿ ಪಿಡಿಒಗಳು ಗ್ರೂಪ್ ಸಿ ಅಧಿಕಾರಿಗಳಾಗಿದ್ದು ಹೆಸರು ಇದೆ ಅಧಿಕಾರ ಇಲ್ಲ. ಗ್ರೂಪ್ ಅಧಿಕಾರಿಗಳ ಸಭೆ ಗ್ರೂಪ್ ಸಿ ಅಧಿಕಾರಿಗಳಾದ ಪಿಡಿಒ ಮಾಡಲು ಸಾಧ್ಯ. ಇದನ್ನು ಮುಖ್ಯಮಂತ್ರಿ, ಸಚಿವರು ಅರ್ಥ ಮಾಡಿಕೊಳ್ಳಬೇಕು, ರಾಮಕೃಷ್ಣ ಹೆಗಡೆ, ಅಬ್ದುಲ್ ನಾಜೀರ್ ಸಾಬ್ ಅವರ ಕಲ್ಪನೆ ಇದ್ದು ಇಡೀ ಆಡಳಿತ ವ್ಯವಸ್ಥೆ ಗ್ರಾಮ ಮಟ್ಟಕ್ಕೆ ತಲುಪಬೇಕು. ಯಾವುದೇ ಇಲಾಖೆಯ ಕೆಲಸ ಗ್ರಾಮದಲ್ಲಿ ಗ್ರಾಮ ಸುಭದ್ರ ಆಗಬೇಕೆಂದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಕಚೇರಿ ಇರಬೇಕು. ಅದರ ಮೂಲಕ ಎಲ್ಲ ಇಲಾಖೆಯ ಯೋಜನೆಗಳು ಜನತೆಗೆ ತಲುಪಬೇಕು ಎಂಬ ಕಲ್ಪನೆಯೊಂದಿಗೆ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ತಳ ಮಟ್ಟಕ್ಕೆ ತಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾತನ್ನು ಯಾವ ಅಧಿಕಾರಿಗಳು ಕೇಳಿಸಿಕೊಳ್ಳಲ್ಲ. ಅವರ ಸಭೆ ಕರೆದರೆ ಯಾರು ಬರಲ್ಲ. ಇವರು ಯಾಕ್ ಬಂದಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಅಧಿಕಾರಿ ಇಲ್ಲ. ಆಡಳಿತ ವಿಕೇಂದ್ರೀಕರಣ ಜೊತೆಗೆ ಆಡಳಿತ ಮತ್ತು ಅಭಿವೃದ್ಧಿ ಸಂಬಂಧಪಟ್ಟವರಿಗೆ ಪ್ರಾಮಾಣಿಕವಾಗಿ ತಲುಪಬೇಕಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಉನ್ನತೀಕರಿಸಿ ಗ್ರೂಪ್ ಬಿ ಅಧಿಕಾರಿ ಎಂದು ಘೋಷಣೆ ಮಾಡಬೇಕು. ಕೇರಳ ಮಾದರಿ ವೇತನ ಕರ್ನಾಟಕದಲ್ಲಿ ಅಳವಡಿಸಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ವೇತನ ಹೆಚ್ಚು ಮಾಡಬೇಕು. ಅಧ್ಯಕ್ಷರಿಗೆ 15 ಸಾವಿರ, ಉಪಾಧ್ಯಕ್ಷರಿಗೆ 12 ಸಾವಿರ, ಸದಸ್ಯರಿಗೆ 10 ಸಾವಿರ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಒತ್ತಾಯಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಹೋರಾಟಕ್ಕೆ ವಿರೋಧ ಪಕ್ಷ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಬಿಜೆಪಿ ಮುಖಂಡ ಸೋಮಣ್ಣ ಉಪ್ಪಾರ್, ಭಾರತೀಯ ವಿದ್ಯಾರ್ಥಿ ಸಂಘದ ಸಂಯೋಜಕ ಪರ್ವತ್‌ರಾಜ್, ಗ್ರಾಮೀಣಾಭಿವೃದ್ಧಿ. ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಇದ್ದರು.