ಕಾಡಾನೆ ದಾಳಿ, ಅಪಾರ ಪ್ರಮಾಣದ ಬೆಳೆ ನಾಶ

| Published : Oct 10 2024, 02:16 AM IST

ಸಾರಾಂಶ

ಕೊಟ್ಟಿಗೆಹಾರ: ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಬೈನೇಮರ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ. ಬುಧವಾರ ಮುಂಜಾನೆ ದೇವನಗೂಲ್ ಗ್ರಾಮದ ಬೆಳ್ಳಾಚಾರ್ ಅವರ ಮನೆ ಬಳಿ ಬಂದು ಕಾಡಾನೆ ಬಾಳೆಗಿಡಗಳನ್ನು ಎಳೆದು ತುಳಿದು ಹಾನಿ ಮಾಡಿದೆ. ತೆಂಗಿನ ಗಿಡ, ಕಾಡು ಮೆಣಸು ಬಳ್ಳಿಯನ್ನು ಎಳೆದು ನಷ್ಟ ಉಂಟು ಮಾಡಿದೆ ಎಂದು ಬೆಳೆಗಾರ ಬೆಳ್ಳಾಚಾರ್ ಅಳಲನ್ನು ತೋಡಿಕೊಂಡಿದ್ದಾರೆ.

ಕೊಟ್ಟಿಗೆಹಾರ: ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಬೈನೇಮರ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ. ಬುಧವಾರ ಮುಂಜಾನೆ ದೇವನಗೂಲ್ ಗ್ರಾಮದ ಬೆಳ್ಳಾಚಾರ್ ಅವರ ಮನೆ ಬಳಿ ಬಂದು ಕಾಡಾನೆ ಬಾಳೆಗಿಡಗಳನ್ನು ಎಳೆದು ತುಳಿದು ಹಾನಿ ಮಾಡಿದೆ. ತೆಂಗಿನ ಗಿಡ, ಕಾಡು ಮೆಣಸು ಬಳ್ಳಿಯನ್ನು ಎಳೆದು ನಷ್ಟ ಉಂಟು ಮಾಡಿದೆ ಎಂದು ಬೆಳೆಗಾರ ಬೆಳ್ಳಾಚಾರ್ ಅಳಲನ್ನು ತೋಡಿಕೊಂಡಿದ್ದಾರೆ.ಅತಿಯಾದ ಮಳೆಗೆ ಬೆಳೆ ಹಾನಿಯಾಗಿದೆ. ಅದರ ಬೆನ್ನಲ್ಲೇ ಕಾಡಾನೆ ಕಾಟದಿಂದ ಮತ್ತಷ್ಟು ಬೆಳೆ ಕಳೆದುಕೊಂಡಿದ್ದೇವೆ. ಅನೇಕ ಸಮಯದಿಂದ ಒಂಟಿ ಸಲಗ ದೇವನಗೂಲ್ ಗ್ರಾಮಕ್ಕೆ ಲಗ್ಗೆ ಇಡುತ್ತಿದೆ. ಅರಣ್ಯ ಅಧಿಕಾರಿಗಳು ಒಂಟಿ ಸಲಗವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.9 ಕೆಸಿಕೆಎಂ 7ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಬೆಳ್ಳಾಚಾರ್ ಅವರ ಮನೆಯ ಬಳಿ ಕಾಡಾನೆ ಬಾಳೆ ಗಿಡಗಳನ್ನು ತುಳಿದು ಹಾನಿ ಮಾಡಿರುವುದು.