ಡಾ. ಗಜಾನನ ಭಟ್ಟ ಅಮಾನತ್ತಿಗೆ ಆಗ್ರಹ

| Published : Oct 10 2024, 02:16 AM IST

ಸಾರಾಂಶ

ಡಾ. ಗಜಾನನ ಭಟ್ ಅವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಗಜಾನನ ಭಟ್ಟ ಅವರನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಗಜಾನನ ಭಟ್ಟ ಅವರು ಕಳೆದ ಜು. ೧೯ರಂದು ಸರ್ಕಾರ ನಡೆಸಿದ ವರ್ಗಾವಣೆಯ ಕೌನ್ಸೆಲಿಂಗ್‌ನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆ. ೨೯ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯು ಡಾ. ಗಜಾನನ ಭಟ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಪ್ರಭಾರವನ್ನು ಡಾ. ನೇತ್ರಾವತಿ ಸಿರ್ಸಿಕರ್‌ಗೆ ನೀಡಿ, ಡಾ. ಗಜಾನನ ಭಟ್ ಅವರಿಗೆ ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿ ಮಾಡಿದ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ಮಾಡಿದ್ದಾರೆ.

ಆದರೆ, ಡಾ. ಗಜಾನನ ಭಟ್ ಅವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ, ಇಲಾಖೆಯು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಪ್ರಮುಖರಾದ ಶ್ರೀನಿವಾಸ್ ನಾಯ್ಕ, ಎನ್.ವಿ. ನಾಯ್ಕ, ಪ್ರಸನ್ನ ಶೆಟ್ಟಿ, ಶ್ರೀಧರ್ ನಾಯ್ಕ, ಶೈಲೇಶ್ ಗಾಂಧಿ, ಗೀತಾ ಭೋವಿ, ಗೀತಾ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಾಜೇಶ್ ಮಡಿವಾಳ, ರಘು ಬ್ಯಾಗದ್ದೆ, ವಾಣಿ ಶಿರಾಲಿ, ಕಾರ್ಮೆಲಿನ್ ಫರ್ನಾಂಡಿಸ್, ನಜಿರ್ ಮೂಡಿ, ಪ್ರದೀಪ್ ಪವಾರ್, ಮುಜಿಬ್, ಪ್ರಸನ್ನ ನಾಯ್ಕ, ಗಂಗಾಧರ ನಾಯ್ಕ ಬ್ಯಾಗದ್ದೆ, ದತ್ತಾತ್ರೇಯ ನಾಯ್ಕ ಬ್ಯಾಗದ್ದೆ ಮತ್ತಿತರರು ಇದ್ದರು.

ಭೋವಿವಡ್ಡರ ಸಮಾಜದ ತಾಲೂಕು ಪದಾಧಿಕಾರಿಗಳ ಆಯ್ಕೆ

ಶಿರಸಿ: ಇಲ್ಲಿನ ಗಣೇಶನಗರದ ಮಾರುತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಭೋವಿವಡ್ಡರ ಸಮಾಜದ ಸಭೆಯಲ್ಲಿ ಶಿರಸಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಭೋವಿವಡ್ಡರ ಸಮಾಜದ ತಾಲೂಕಾಧ್ಯಕ್ಷರಾಗಿ ಮಂಜುನಾಥ ಟಿ. ರಾಮಾಪುರ, ಕಾರ್ಯದರ್ಶಿಯಾಗಿ ಮಾರುತಿ ಭೋವಿವಡ್ಡರ, ಗೌರವಾಧ್ಯಕ್ಷರಾಗಿ ಬಸವರಾಜ್ ರೆಡ್ಡಿ, ಉಪಾಧ್ಯಕ್ಷರಾಗಿ ಲಕ್ಷ್ಮಣ ಭೋವಿ ಖಾನ್‌ನಗರ, ಭೀಮಣ್ಣ ಭೋವಿ ಗಣೇಶ ನಗರ, ಖಜಾಂಜಿಯಾಗಿ ಮಧುಕೇಶ್ವರ ವಡ್ಡರ ಬನವಾಸಿ ಅವರನ್ನು ಸರ್ವಾನುಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮುಖಂಡರಾದ ಗಣೇಶ ದಾವಣಗೆರೆ, ಶಿವಾನಂದ ದೇಶಳ್ಳಿ, ಬಿ.ವಿ. ಹುಲಿಗೇಶ್, ಮಾರುತಿ ಮಟ್ಟೇರ್, ಲಕ್ಕಪ್ಪ, ಶ್ರೀಕಾಂತ್ ದಂಡಗಲ್, ಭೀಮಪ್ಪ, ರಾಮಣ್ಣ, ಬಸವರಾಜ್ ಕಟ್ಟಿಮನಿ, ದೇವೇಂದ್ರ ಬಂಡಿ, ಲಕ್ಷ್ಮಣ ಭೋವಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.