ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ, ಅವುಗಳನ್ನು ನವೀಕರಿಸಿ, ಅಗತ್ಯವುಳ್ಳ ಮಕ್ಕಳಿಗೆ ತಲುಪಿಸುವ ಉದ್ದೇಶದ ನಡಿಗೆ ಎಂಬ 3 ದಿನಗಳ ಅಭಿಯಾನಕ್ಕೆ ಶುಕ್ರವಾರ ನಗರದ ಎಂಜಿಎಂ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು.

ಉಡುಪಿ: ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ, ಅವುಗಳನ್ನು ನವೀಕರಿಸಿ, ಅಗತ್ಯವುಳ್ಳ ಮಕ್ಕಳಿಗೆ ತಲುಪಿಸುವ ಉದ್ದೇಶದ ನಡಿಗೆ ಎಂಬ 3 ದಿನಗಳ ಅಭಿಯಾನಕ್ಕೆ ಶುಕ್ರವಾರ ನಗರದ ಎಂಜಿಎಂ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು.ಉಡುಪಿಯ ಶೋಕ ಮಾತಾ ಇಗರ್ಜಿಯ ಧರ್ಮಗುರು ರೆ.ಫಾ. ಡೆನಿಸ್ ಡೆ’ಸಾ ಮತ್ತು ಸಾಂಸ್ಕೃತಿಕ ಸಂಘಟರ ಉಡುಪಿ ವಿಶ್ವನಾಥ ಶೆಣೈ ಗಿಡವೊಂದನ್ನು ನೆಟ್ಟು ಅಭಿಯಾನ ಉದ್ಘಾಟಿಸಿದರು. ಹಳ್ಳಿಮಕ್ಕಳ ಉಚಿತ ಕೊಡುಗೆ: ಈ ಸಂದರ್ಭದಲ್ಲಿ ಮಾತನಾಡಿದ, ಈ ಬಳಸಿದ ಪಾದರಕ್ಷೆಗಳನ್ನು ಮರುಬಳಕೆಗೆ ಸಿದ್ದ ಮಾಡುವ ಮುಂಬೈ ಮೂಲದ ಗ್ರೀನ್‌ಸೋಲ್ ಸಂಸ್ಥೆಯ ಸಹಸ್ಥಾಪಕ ಶ್ರೇಯಾನ್ಸ್ ಭಂಡಾರಿ, ಕಳೆದ 10 ವರ್ಷಗಳಿಂದ ಈ ಉಪಕ್ರಮವನ್ನು ನಡೆಸುತ್ತಾ ಪರಿಸರದ ರಕ್ಷಣೆಗೆ ಕೊಡುಗೆ ನೀಡಲಾಗುತ್ತಿದೆ. ಇದು ಕೇವಲ ಪಾದರಕ್ಷೆಗಳ ಸಂಗ್ರಹ ಮಾತ್ರವಲ್ಲ. ನವೀಕರಿಸಿದ ಪಾದರಕ್ಷೆಗಳನ್ನು ನಮ್ಮ ಸ್ವಯಂಸೇವಕರು ಹಳ್ಳಿಗಳಿಗೆ ತೆರಳಿ, ಅಲ್ಲಿ ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ನೀಡಲಿದ್ದಾರೆ ಎಂದರು

ಜನತಾ ಗ್ರೂಪ್‌ನ ನಿರ್ದೇಶಕ ರಕ್ಷಿತ್ ಕುಂದರ್, ಮಣಿಪಾಲದ ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಅಧ್ಯಕ್ಷ ಹರಿಪ್ರಸಾದ್ ರೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಮತ್ತು ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ ಅಭಿಯಾನಕ್ಕೆ ಶುಭ ಹಾರೈಸಿದರು. ಅಭಿಯಾನದ ಸಂಘಟಕ ಅವಿನಾಶ್ ಕಾಮತ್ ಉಪಸ್ಥಿತರಿದ್ದರು. ಕಾಲೇಜು ಪತ್ರಿಕೋದ್ಯಮ ಉಪನ್ಯಾಸಕ ಸುಜಿತ್ ಕೋಟ್ಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಉಡುಪಿಯಲ್ಲಿ ವಿಶ್ವ ದಾಖಲೆ ?: ಶ್ರೇಯಾನ್ಸ್ ಭಂಡಾರಿ ಅವರು, ಅಮೆರಿಕದಲ್ಲಿ ಈ ಹಿಂದೆ ಮರುಬಳಕೆಗಾಗಿ ಸಾರ್ವಜನಿಕ ಅಭಿಯಾನದಲ್ಲಿ 16,000 ಜೊತೆ ಪಾದರಕ್ಷೆಗಳನ್ನು ಸಂಗ್ರಹಿಸಿದ್ದ ವಿಶ್ವದಾಖಲೆಯಾಗಿದೆ. ಮೂಲಕ ದಾಖಲೆ ನಿರ್ಮಿಸಲಾಗಿತ್ತು. ಒಟ್ಟು 3 ದಿನಗಳಲ್ಲಿ 20,000 ಜೊತೆಗೂ ಹೆಚ್ಚು ಪಾದರಕ್ಷೆಗಳು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.