ಸಾರಾಂಶ
- ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಬ್ಬೂರು ಘೋಷಣೆ । ಅಭಿನಂದನೆ
- - - - - -- ನಾಗರಾಜ ಬಡದಾಳ್ 74, ಡಾ. ಸಿ.ವರದರಾಜ 45, ಆರ್.ರವಿಗೆ 36 ಮತ
- 164 ಸದಸ್ಯರ ಪೈಕಿ 156 ಸದಸ್ಯರಿಂದ ಮತ ಚಲಾವಣೆ, 1 ತಿರಸ್ಕೃತ- ಕ್ರಮಬದ್ಧವಾಗಿ ಚಲಾವಣೆಯಾದ 155 ಮತ ಎಣಿಕೆಗೆ ಪರಿಗಣನೆ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕನ್ನಡಪ್ರಭ ಪತ್ರಿಕೆ ಹಿರಿಯ ವರದಿಗಾರ ನಾಗರಾಜ ಎಸ್. ಬಡದಾಳ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನಾಗರಾಜ ಬಡದಾಳ್ 74, ಸುವರ್ಣ ಟಿವಿ ಹಿರಿಯ ವರದಿಗಾರ ಡಾ. ಸಿ.ವರದರಾಜ, 45 ಹಾಗೂ ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕ ಆರ್.ರವಿ 36 ಮತಗಳನ್ನು ಪಡೆದರು. ಅತಿ ಹೆಚ್ಚು ಮತ ಪಡೆದ ನಾಗರಾಜ ಎಸ್. ಬಡದಾಳ್ ಅವರನ್ನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಬ್ಬೂರು ಘೋಷಿಸಿದರು.
11 ನಾಮಪತ್ರ:ಅಧ್ಯಕ್ಷ ಸ್ಥಾನಕ್ಕೆ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆರು ಅಭ್ಯರ್ಥಿಗಳು ಜು.6ರಂದು ನಾಮಪತ್ರ ವಾಪಸ್ ಪಡೆದಿದ್ದರು. ಕಣದಲ್ಲಿ ಉಳಿದ ಐವರಲ್ಲಿ ಮಧು ನಾಗರಾಜ್ ಹಾಗೂ ಎಚ್.ಎಂ.ಪಿ. ಕುಮಾರ್ ಇತರೆ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ, ಕಣದಿಂದ ಹಿಂದೆ ಸರಿದಿದ್ದರು.
ಸಹಾಯಕ ಚುನಾವಣಾಧಿಕಾರಿಯಾಗಿ ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ ಡಿ.ರಂಗನಾಥ್ ರಾವ್ ಕಾರ್ಯನಿರ್ವಹಿಸಿದರು. ಬೆಳಗ್ಗೆ 10ರಿಂದ ಆರಂಭಗೊಂಡ ಚುನಾವಣೆ ಮಧ್ಯಾಹ್ನ 1.30ಕ್ಕೆ ಮುಕ್ತಾಯ ಕಂಡಿತು. 164 ಸದಸ್ಯರ ಪೈಕಿ 156 ಸದಸ್ಯರು ಮತ ಚಲಾಯಿಸಿದ್ದರು. ಒಂದು ಮತಪತ್ರ ತಿರಸ್ಕೃತಗೊಂಡಿತ್ತು. ಕ್ರಮಬದ್ದವಾಗಿ ಚಲಾವಣೆಯಾದ 155 ಮತಗಳನ್ನು ಎಣಿಕೆಗೆ ಪರಿಗಣಿಸಲಾಯಿತು.ಈ ಸಂದರ್ಭ ಜಿಲ್ಲಾ ವರದಿಗಾರರ ಕೂಟದ ನಿಕಟಪೂರ್ವ ಅಧ್ಯಕ್ಷ ಕೆ.ಏಕಾಂತಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಚುನಾವಣಾಧಿಕಾರಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಕಬ್ಬೂರು, ಉಪ ಚುನಾವಣಾಧಿಕಾರಿ ರಂಗನಾಥ, ಬಿ.ಎನ್.ಮಲ್ಲೇಶ ಸೇರಿದಂತೆ ಅನೇಕ ಹಿರಿಯ ಕಿರಿಯ ಪತ್ರಕರ್ತರು, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ, ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ನಾಗರಾಜ್ ಅವರಿಗೆ ಅಭಿನಂದಿಸಿದರು.
- - - -16ಕೆಡಿವಿಜಿ34ಃ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷರಾಗಿ ನಾಗರಾಜ ಎಸ್. ಬಡದಾಳ್ ಆಯ್ಕೆಯಾದರು.-16ಕೆಡಿವಿಜಿ35: ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಎಸ್. ಬಡದಾಳ್ ಅವರ ಹೆಸರನ್ನು ಘೋಷಿಸಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಬ್ಬೂರು ಅಭಿನಂದಿಸಿದರು.
-16ಕೆಡಿವಿಜಿ36: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಎಸ್.ಬಡದಾಳ್ ಅವರಿಗೆ ಜಿಲ್ಲಾ ವರದಿಗಾರರ ಕೂಟ, ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು.