ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಶೀಘ್ರದಲ್ಲಿ ಆರಂಭ:ಸಚಿವ ಎಚ್ಕೆಪಾ

| Published : Aug 26 2024, 01:38 AM IST

ಸಾರಾಂಶ

2-3 ದಿನಗಳಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡುತ್ತೇವೆ

ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ರೈತರು ಬೆಳೆದ ಹೆಸರು ಬೆಳೆಗೆ ಬೆಂಬಲ ಬೆಲೆ ಅಡಿಯಲ್ಲಿ ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೆಸರು ಬೆಳೆಗೆ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ಆರಂಭಿಸಿ ರೈತರು ಹಿತ ಕಾಯುವ ಕಾರ್ಯವನ್ನು 2-3 ದಿನಗಳಲ್ಲಿ ಮಾಡಲಾಗುವುದು. ಈ ವರ್ಷ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ರೈತರು ಹೆಸರು ಒಕ್ಕಲು ಮಾಡಿ ಮಾರಾಟ ಮಾಡುವ ಹಂತದಲ್ಲಿದ್ದಾರೆ. ಅದಕ್ಕಾಗಿ 2-3 ದಿನಗಳಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡುತ್ತೇವೆ ಎಂದರು.

ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಉತ್ತರ ಬಾಗಿಲು ಹಾಗೂ ಕಲ್ಲಿನ ವರಾಂಡ ಬೀಳುವ ಹಂತದಲ್ಲಿ ಇದೆ. ಅದರ ದುರಸ್ತಿಗೆ ಸರ್ಕಾರದಿಂದ ಅನುದಾನ ಕೊಡಲಾಗುವುದು ಎಂದು ಹೇಳಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳ ದುರಸ್ತಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಕ್ರೀಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದಲ್ಲಿ ಅದಕ್ಕೂ ಅನುದಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆ ತೀರಾ ಹಳೆಯದಾಗಿದ್ದು, ಅದಕ್ಕೆ ಹೊಸದಾದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಪುರಸಭೆಯ ನೂತನ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪಿರ್ಧೋಶ್ ಅಡೂರು ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವಮಠ, ರಾಯಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಜಯಕ್ಕ ಕಳ್ಳಿ, ವಿ.ಜಿ. ಪಡಗೇರಿ, ಚನ್ನಪ್ಪ ಜಗಲಿ, ಮಹೇಶ ಹೊಗೆಸೊಪ್ಪಿನ, ನೀಲಪ್ಪ ಶೆರಸೂರಿ, ಅಂಬರೀಷ್ ತೆಂಬದಮನಿ, ತಿಪ್ಪಣ್ಣ ಸಂಶಿ, ಬಾಬು ಅಳವಂಡಿ, ಪದ್ಮರಾಜ ಪಾಟೀಲ, ಬಸವರಾಜ ಹೊಳಲಾಪೂರ, ಡಿ.ಕೆ. ಹೊನ್ನಪ್ಪನವರ, ನಾಗರಾಜ ಮಡಿವಾಳರ, ರಾಮು ಗಡದವರ, ರಾಜು ಕುಂಬಿ, ಜಯಕ್ಕ ಅಂದಲಗಿ, ಮಂಜವ್ವ ನಂದೆಣ್ಙವರ, ಬಸವರಾಜ ಓದುನವರ, ಸುಶೀಲವ್ವ ಲಮಾಣಿ, ಶಿವನಗೌಡ ಪಾಟೀಲ, ನೀಲಪ್ಪ ಪೂಜಾರ, ಕಿರಣ್ ನವಿಲೆ, ಪರಮೇಶ ಲಮಾಣಿ, ಫಕ್ಕೀರೇಶ ಮ್ಯಾಟಣ್ಣವರ, ಯಲ್ಲಪ್ಪ ಸೂರಣಗಿ, ಶಿವಾನಂದ ಲಿಂಗಶೆಟ್ಟಿ, ರಫೀಕ್ ಕಲಬುರ್ಗಿ, ಮುದಕಣ್ಣ ಗದ್ದಿ, ದೀಪಕ್ ಲಮಾಣಿ, ಸುಭಾಷ ಓದುನವರ ಇದ್ದರು.

25ಜಿಡಿಜಿ8

ಸುದ್ದಿಗಾರರೊಂದಿಗೆ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು.