ರಾಜಕೀಯ ಚದುರಂಗದಲ್ಲಿ ಗೆದ್ದು ಸೋತ ನರಸಿಂಹಸ್ವಾಮಿ

| Published : Dec 16 2024, 12:47 AM IST

ಸಾರಾಂಶ

ದೊಡ್ಡಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಮತ್ತು ಆಕರ್ಷಣೆ ಹೊಂದಿದ್ದ ಹಿರಿಯ ಮುತ್ಸದ್ದಿ ಆರ್.ಎಲ್.ಜಾಲಪ್ಪನವರ ಪುತ್ರ ಜೆ.ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ರಾಜಕೀಯ ವಲಯದಲ್ಲಿ ಔನ್ನತ್ಯ ಮತ್ತು ನೇಪಥ್ಯಗಳೆರಡನ್ನೂ ತನ್ನದೇ ಆದ ರೀತಿಯಲ್ಲಿ ಕಂಡುಕೊಂಡ ಅಪರೂಪದ ರಾಜಕಾರಣಿ.

ದೊಡ್ಡಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಮತ್ತು ಆಕರ್ಷಣೆ ಹೊಂದಿದ್ದ ಹಿರಿಯ ಮುತ್ಸದ್ದಿ ಆರ್.ಎಲ್.ಜಾಲಪ್ಪನವರ ಪುತ್ರ ಜೆ.ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ರಾಜಕೀಯ ವಲಯದಲ್ಲಿ ಔನ್ನತ್ಯ ಮತ್ತು ನೇಪಥ್ಯಗಳೆರಡನ್ನೂ ತನ್ನದೇ ಆದ ರೀತಿಯಲ್ಲಿ ಕಂಡುಕೊಂಡ ಅಪರೂಪದ ರಾಜಕಾರಣಿ.

ಕೆಲವೊಮ್ಮೆ ಮುಂದಾಲೋಚನೆ ಇಲ್ಲದೆ ತೆಗೆದುಕೊಳ್ಳುವ ಮಹತ್ವದ ರಾಜಕೀಯ ನಿರ್ಧಾರಗಳು ಹೇಗೆ ಭವಿಷ್ಯವನ್ನು ಡೋಲಾಯಮಾನ ಮಾಡಿಬಿಡಬಹುದು ಎಂಬುದಕ್ಕೆ ನರಸಿಂಹಸ್ವಾಮಿ ಅವರ ಬದುಕೇ ಸ್ಪಷ್ಟ ನಿದರ್ಶನ. ದೊಡ್ಡಬಳ್ಳಾಪುರದ ರಾಜಕೀಯ ವಲಯದಲ್ಲಿ 2013ರವರೆಗೆ ಬೆಂಬಲಿಗರ ಪ್ರಭಾವಳಿಯಲ್ಲಿ ಮಿನುಗುತ್ತಿದ್ದ ನಾಯಕ, ಬಳಿಕ ಎದುರಾದ 2 ಸೋಲುಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ!

ಸಹಕಾರ ಕ್ಷೇತ್ರದಿಂದ ಬಂದ ನಾಯಕ:

1946ರಲ್ಲಿ ತೂಬಗೆರೆಯಲ್ಲಿ ಜನಿಸಿದ ನರಸಿಂಹಸ್ವಾಮಿ ಅವರಿಗೆ ತಂದೆಯ ರಾಜಕೀಯ ಪಟ್ಟುಗಳು ಸಹಜವಾಗಿಯೇ ಬಂದಿದ್ದರೂ, ಆರಂಭಿಕ ಹಂತದಲ್ಲಿ ಕುಟುಂಬದಿಂದ ರಾಜಕಾರಣಕ್ಕೆ ಅಷ್ಟೇನೂ ಉತ್ತಮ ಪ್ರೋತ್ಸಾಹ ಸಿಗಲಿಲ್ಲ. ಓದಿದ್ದು ಮೆಟ್ರಿಕ್‌ವರೆಗೆ ಮಾತ್ರ. ಬಳಿಕ ಜನಸೇವೆಯಲ್ಲಿ ಮೊಳೆತ ಆಸಕ್ತಿ ಸಹಕಾರ ರಂಗದಲ್ಲಿ ದೊಡ್ಡ ನಾಯಕನನ್ನಾಗಿ ಬೆಳೆಸಿತ್ತು. ಪಿಎಲ್‌ಡಿ ಬ್ಯಾಂಕ್, ಜಿಲ್ಲಾ ಬ್ಯಾಂಕ್, ಟಿಎಪಿಎಂಸಿಎಸ್‌, ವಿಎಸ್‌ಎಸ್‌ಎನ್‌ಗಳಂತಹ ಸಹಕಾರ ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳುತ್ತಾ ಸಾಗಿದ ಅವರಿಗೆ 90ರ ದಶಕದಲ್ಲಿ ತೂಬಗೆರೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಪ್ರವೇಶಿಸುವ ಅವಕಾಶ ಒದಗಿತ್ತು. ಜಾಲಪ್ಪ ಪ್ರಭಾವದಿಂದ ಅವರು, ಅಕ್ಷರಶಃ ಜಾಲಪ್ಪ ಉತ್ತರಾಧಿಕಾರಿಯಂತೆಯೇ ಬೆಳೆದಿದ್ದರು.

ರಾಜಕೀಯ ಕೊನೆಗಾಣಿಸಿದ 2 ಸತತ ಸೋಲು:

2013ರಲ್ಲಿ ಬಿಜೆಪಿಯಿಂದಲೇ ಮತ್ತೆ ಸ್ಪರ್ಧಿಸಿ ಸೋಲುಂಡರು. ಅಂದಿನ ಚುನಾವಣೆಯಲ್ಲಿ ಅವರು 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಬಳಿಕ 2018ರ ಚುನಾವಣೆಯಲ್ಲೂ ಕೊನೆಯ ಹಂತದಲ್ಲಿ ಉಂಟಾದ ಹಿಂಜರಿಕೆ ಅವರ ರಾಜಕೀಯ ಬದುಕನ್ನು ಸಂಪೂರ್ಣ ಮಸುಕಾಗಿಸಿತು. ಚುನಾವಣೆಯ ದಿನ ಅವರು ಸ್ಪರ್ಧೆಯಿಂದ ಭಾಗಶಃ ಹಿಂದೆ ಸರಿದೇ ಬಿಟ್ಟಿದ್ದರು. ಆದರೂ 30 ಸಾವಿರದಷ್ಟು ಮತ ಪಡೆದಿದ್ದ ಅವರು ಅಪಾರ ಸಂಖ್ಯೆಯ ಜನ ಬೆಂಬಲ ಹೊಂದಿದ್ದ ರಾಜಕಾರಣಿ ಎಂಬುದನ್ನು ಸಾಬೀತು ಮಾಡಿದ್ದರು.

ಬಾಕ್ಸ್‌.............

10 ವರ್ಷದಲ್ಲಿ 3 ಬಾರಿ ಶಾಸಕ:1996ರಲ್ಲಿ ಜಾಲಪ್ಪ ಲೋಕಸಭೆ ಪ್ರವೇಶಿಸಿದಾಗ ಎದುರಾದ ಉಪಚುನಾವಣೆಯಲ್ಲಿ ಜಾಲಪ್ಪ ಶಿಷ್ಯ ಆರ್.ಜಿ.ವೆಂಕಟಾಚಲಯ್ಯ ಪರವಾಗಿ ಸಕ್ರಿಯ ಪ್ರಚಾರದಲ್ಲಿ ತೊಡಗಿ ರಾಜಕೀಯ ಪಟ್ಟುಗಳನ್ನು ಸದೃಢವಾಗಿ ಕಲಿತರು. 2003ರ ವಿಧಾನಸಭಾ ಚುನಾವಣೆಯಲ್ಲಿ ಜಾಲಪ್ಪ ಅವರ ಬದ್ಧ ಎದುರಾಳಿ ಅಂದಿನ ಶಾಸಕ ವಿ.ಕೃಷ್ಣಪ್ಪ ವಿರುದ್ಧ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ಆ ನಂತರದ 10 ವರ್ಷ ದೊಡ್ಡಬಳ್ಳಾಪುರದಲ್ಲಿ ನರಸಿಂಹಸ್ವಾಮಿ ಯುಗ!2008ರಲ್ಲಿ 2ನೇ ಬಾರಿಯೂ ಕಾಂಗ್ರೆಸ್‌ ಪಕ್ಷದಿಂದ ಪುನರಾಯ್ಕೆಯಾದ ಅವರು, ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಸೆಯೊಂದಿಗೆ ಆಪರೇಷನ್‌ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನ ಮತ್ತು ಕಾಂಗ್ರೆಸ್‌ ಪಕ್ಷ ಎರಡನ್ನೂ ತ್ಯಜಿಸಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ತನ್ನ ರಾಜಕೀಯ ಗುರು ಆರ್.ಜಿ.ವೆಂಕಟಾಚಲಯ್ಯ ವಿರುದ್ದವೇ ಸ್ಪರ್ಧಿಸಿ ಗೆದ್ದರು. ಅದೇ ಅವರ ಕೊನೆಯ ಗೆಲುವು. ಮತ್ತೆಂದೂ ಅವರು ಗೆಲ್ಲಲೇ ಇಲ್ಲ.

ಫೋಟೋ-

15ಕೆಡಿಬಿಪಿ5- ಜೆ.ನರಸಿಂಹಸ್ವಾಮಿ.