ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

| Published : Mar 04 2025, 12:33 AM IST

ಸಾರಾಂಶ

ಶ್ವದಲ್ಲಿ ಎಲ್ಲೂ ಇಲ್ಲದಷ್ಟು ಗೋ ಸಂತತಿ ನಮ್ಮ ದೇಶದಲ್ಲಿದ್ದು, ದೇಶದಲ್ಲಿ 30 ಸಾವಿರ ಕೋಟಿ ಗೋವುಗಳಿಗೆ ಆಶ್ರಯ ನೀಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಉದ್ದೇಶ ಪೂರ್ಣಗೊಂಡಾಗ ಮಾಡಿದ ಕಾರ್ಯ ಅರ್ಥಪೂರ್ಣವಾಗಿರುತ್ತದೆ. ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ನೀಡಿದ್ದು, ಗೋ ಸಂರಕ್ಷಣೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ತಿಳಿಸಿದರು.ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅರಿವು ಸಂಸ್ಥೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಗೋ ಸಂರಕ್ಷಣಾ ಜಾಗೃತಿ ಕಾರ್ಯಕ್ರಮಕ್ಕೆ ಅವರು ಗೋವುಗಳಿಗೆ ಪೂಜೆ ಸಲ್ಲಿಸಿ, ಹಣ್ಣು ಬೆಲ್ಲ ಹುಲ್ಲು ತಿನ್ನಿಸುವ ಮೂಲಕ ಚಾಲನೆ ನೀಡಿ ಮಾತನಾಡಿರು.ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಗೋ ಸಂತತಿ ನಮ್ಮ ದೇಶದಲ್ಲಿದ್ದು, ದೇಶದಲ್ಲಿ 30 ಸಾವಿರ ಕೋಟಿ ಗೋವುಗಳಿಗೆ ಆಶ್ರಯ ನೀಡುತ್ತಿದ್ದೇವೆ. ಅವುಗಳ ಸಂರಕ್ಷಣೆ ಮೊದಲ ಕರ್ತವ್ಯ ಆಗಬೇಕಾಗಿದೆ. ಗೋ ಸಂರಕ್ಷಣೆ ನಮ್ಮ ಸಂಸ್ಕೃತಿ ಆಗಿರುವುದರಿಂದಲೇ ಭಾರತದ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗೋವು ಉಳಿದರೆ ಭಾರತೀಯ ಸಂಸ್ಕೃತಿ ಉಳಿದಂತೆ ಗೋ ಪೂಜೆ ಮಾಡುವ ಏಕೈಕ ದೇಶ ಭಾರತ, ಇಲ್ಲಿ ಗೋಹತ್ಯೆ ನಿಲ್ಲಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ ಎಂದು ಅವರು ಆಗ್ರಹಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಮಾತನಾಡಿ, ಗೋವಿನ ಹಾಲು ಸೇರಿದಂತೆ ಗೋ ಉತ್ಪನ್ನಗಳು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹೀಗಾಗಿ, ಗೋವುಗಳಿಗೆ ನಾವು ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಮಾತನಾಡಿ, ಭಾರತದ ಸನಾತನ ಮೌಲ್ಯಗಳಿಗೆ ಜಗತ್ತು ತೆರೆದುಕೊಂಡಿದೆ. ಹಿಂದೆ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಎಂದು ಬೋಧಿಸುತ್ತಿದ್ದವರು. ಈಗ ಸಾವಯವ ಗೊಬ್ಬರವನ್ನು ಬಳಸಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಗೋ ಮಾತೆಯ ಮಹತ್ವವೇ ಕಾರಣ ಎಂದರು.ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾದರ್ಶನ್, ಮುಖಂಡರಾದ ಜತ್ತಿ ಪ್ರಸಾದ್, ಶಿವು, ನಂದೀಶ್, ಅರುಣ್ ಕುಮಾರ್, ಕಿರಣ್, ರಾಕೇಶ್, ವಿನಯ್ ಮೊದಲಾದವರು ಇದ್ದರು.