ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಮೆರವಣಿಗೆ

| Published : Aug 14 2024, 12:52 AM IST

ಸಾರಾಂಶ

೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತದ ಸಹಕಾರದೊಂದಿಗೆ ನಮ್ಮ ಹಾಸನ ಟಿವಿ ಹಾಗೂ ಯೂಥ್ ಹ್ಯಾಂಡ್ಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಗಸ್ಟ್ ೧೫ರಂದು ಬೆಳಿಗ್ಗೆ ೮ ಗಂಟೆಗೆ ಆಂಧ್ರಪ್ರದೇಶದ ಸಮಾಜ ಸೇವಕರಾದ ಡಿ.ಸಿ. ಲಕ್ಷ್ಮೀನಾರಾಯಣ ಗುಪ್ತಾ ಮತ್ತು ತಂಡದಿಂದ ತಯಾರಿಸಲ್ಪಟ್ಟ ೨೫೦೦ ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹಾಸನ

೭೮ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಗಸ್ಟ್ ೧೫ರಂದು ೨೫೦೦ ಅಡಿ ಉದ್ದದ "ನಮ್ಮ ನಡೆ, ಶಾಂತಿ ಸೌಹಾರ್ದದ ಕಡೆ " ರಾಷ್ಟ್ರಧ್ವಜ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತರಾದ ತೌಫಿಕ್ ಅಹಮದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತದ ಸಹಕಾರದೊಂದಿಗೆ ನಮ್ಮ ಹಾಸನ ಟಿವಿ ಹಾಗೂ ಯೂಥ್ ಹ್ಯಾಂಡ್ಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಗಸ್ಟ್ ೧೫ರಂದು ಬೆಳಿಗ್ಗೆ ೮ ಗಂಟೆಗೆ ಆಂಧ್ರಪ್ರದೇಶದ ಸಮಾಜ ಸೇವಕರಾದ ಡಿ.ಸಿ. ಲಕ್ಷ್ಮೀನಾರಾಯಣ ಗುಪ್ತಾ ಮತ್ತು ತಂಡದಿಂದ ತಯಾರಿಸಲ್ಪಟ್ಟ ೨೫೦೦ ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ. ೭೮ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಸನದಲ್ಲಿ ವಿಶೇಷವಾಗಿ ನಡೆಸುವ ಉದ್ದೇಶದಿಂದ ಹಾಗೂ ಈ ಬಾರಿಯ ಸ್ವಾತಂತ್ರ್ಯೋತ್ಸವ ಆಕರ್ಷಕವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರೊದಂ ತಾಲೂಕು ಸಮಾಜ ಸೇವಕರಾದ ಡಿ.ಸಿ ಲಕ್ಷ್ಮೀನಾರಾಯಣ ಗುಪ್ತಾ (ಲೋಕೇಶ್) ಮತ್ತು ತಂಡ ಅವರಿಂದ ತಯಾರಿಸಲ್ಪಟ್ಟ ೨೫೦೦ ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ನಡೆಯಲಿದೆ ಎಂದರು.

ಬೃಹತ್ ಧ್ವಜ ಮೆರವಣಿಗೆ ದೇಶದ ಅನೇಕ ಭಾಗದಲ್ಲಿ ಈಗಾಗಲೇ ನಡೆದಿದೆ. ಇಂತಹ ಒಂದು ಅದ್ಭುತವಾದ ಕಾರ್ಯಕ್ರಮವನ್ನು ಹಾಸನದಲ್ಲಿ ನಡೆಸಬೇಕು ಎಂಬ ಉದ್ದೇಶದಿಂದ ತಿರಂಗ ಮಾರ್ಚ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ "ನಮ್ಮ ನಡೆ, ಶಾಂತಿ ಸೌಹಾರ್ದದ ಕಡೆ " ಎಂದು ಹೆಸರಿಸಲಾಗಿದೆ. ತಿರಂಗ ಮಾರ್ಚ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರಾದ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯತ್ ಮುಖ್ಯ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಹಿರಿಯ ಪತ್ರಕರ್ತರು, ಸಾಹಿತಿಗಳು, ಬರಹಗಾರರು, ವಿವಿಧ ಸಂಘಟನೆಗಳ ಪ್ರಮುಖರು, ಕಲಾವಿದರು, ಗಣ್ಯರು, ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು, ಭಾಗವಹಿಸಲಿದ್ದಾರೆ ಎಂದು ಮೆರವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಯೂಥ್ ಹ್ಯಾಂಡ್ಸ್ ಫೌಂಢೇಶನ್‌ನ ಎಚ್.ಜೆ. ಬಾಲಾಜಿ, ಕಾರ್ಯಕರ್ತರಾದ ಶಬರೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಎಂಸಿಇ ಕಾಲೇಜು ನಿವೃತ್ತ ಪ್ರಾಧ್ಯಾಪಕ ಯೋಗೇಂದ್ರ ಇತರರು ಉಪಸ್ಥಿತರಿದ್ದರು.