ಅ.5ರಿಂದ ಪುನೀತ್ ಸ್ಮರಣಾರ್ಥ ರಾಷ್ಟ್ರಮಟ್ಟದ ಚೆಸ್‌ ಟೂರ್ನಿ

| Published : Sep 26 2024, 09:50 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ಪುನೀತ ರಾಜಕುಮಾರ ಸವಿನೆನಪಿಗಾಗಿ ದಾವಣಗೆರೆ ಚೆಸ್ ಕ್ಲಬ್‌ನಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್‌ ಸಹಯೋಗದಲ್ಲಿ ಅ.5ರಿಂದ ಎರಡು ದಿನ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಫಿಡೇ ರೇಟಿಂಗ್‌ ಓಪನ್ ರ್ಯಾಪಿಡ್‌- ಪುನೀತ್ ರಾಜಕುಮಾರ ಕಪ್‌ ಸೀಸನ್‌-3 ಚದುರಂಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ದೂಡಾ ಅಧ್ಯಕ್ಷ, ಚೆಸ್ ಕ್ಲಬ್ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- ಫಿಡೇ ರೇಟಿಂಗ್‌ ಓವರ್ ರ್ಯಾಪಿಡ್‌- ಪುನೀತ್ ರಾಜ್‌ಕುಮಾರ್‌ ಕಪ್‌ ಸೀಸನ್‌-3: ದಿನೇಶ ಶೆಟ್ಟಿ ಮಾಹಿತಿ - - - * ವಿಶೇಷಗಳೇನು?- ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ಪುನೀತ ರಾಜಕುಮಾರ ಸವಿನೆನಪಿಗಾಗಿ ಆಯೋಜನೆ

- ಪ್ರಥಮ ಬಹುಮಾನ ಪುನೀತ್ ಪ್ರತಿಮೆ ಟ್ರೋಫಿ ಜೊತೆ ₹25 ಸಾವಿರ ನಗದು

- ದಾವಣಗೆರೆಯ ಉತ್ತಮ ಚದುರಂಗ ಆಟಗಾರರಿಗೆ 20 ವಿಶೇಷ ಟ್ರೋಫಿ

- ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಂದ ಚಾಲನೆ

- ಪುನೀತ ರಾಜಕುಮಾರ ಕಪ್ ಪ್ರಶಸ್ತಿ ಪ್ರದಾನ ಮಾಡಲಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ಪುನೀತ ರಾಜಕುಮಾರ ಸವಿನೆನಪಿಗಾಗಿ ದಾವಣಗೆರೆ ಚೆಸ್ ಕ್ಲಬ್‌ನಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್‌ ಸಹಯೋಗದಲ್ಲಿ ಅ.5ರಿಂದ ಎರಡು ದಿನ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಫಿಡೇ ರೇಟಿಂಗ್‌ ಓಪನ್ ರ್ಯಾಪಿಡ್‌- ಪುನೀತ್ ರಾಜಕುಮಾರ ಕಪ್‌ ಸೀಸನ್‌-3 ಚದುರಂಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ದೂಡಾ ಅಧ್ಯಕ್ಷ, ಚೆಸ್ ಕ್ಲಬ್ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವರು. 9 ಸುತ್ತುಗಳಲ್ಲಿ ಚೆಸ್ ಪಂದ್ಯಾವಳಿ ನಡೆಯಲಿದೆ. ವಿಜೇತರಿಗೆ ಒಟ್ಟು ₹2 ಲಕ್ಷ ಮೊತ್ತದ ಬಹುಮಾನವಿದೆ. 200 ಟ್ರೋಫಿ ನೀಡಲಾಗುವುದು. ಪ್ರಥಮ ಬಹುಮಾನ ಪುನೀತ್ ಪ್ರತಿಮೆ ಟ್ರೋಫಿ ಜೊತೆ ₹25 ಸಾವಿರ ನಗದು ಬಹುಮಾನ ನೀಡಲಾಗುವುದು. ದಾವಣಗೆರೆಯ ಉತ್ತಮ ಚದುರಂಗ ಆಟಗಾರರಿಗೆ 20 ವಿಶೇಷ ಟ್ರೋಫಿಗಳನ್ನು ನೀಡಲಾಗುವುದು ಎಂದರು.

ಚೆಸ್ ಪಂದ್ಯಾವಳಿಗೆ ಅ.5ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡುವರು. ಚೆಸ್ ಸಂಸ್ಥೆ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸ್ಟೇಟ್‌ ಚೆಸ್ ಅಸೋಸಿಯೇಷನ್‌ ಸಿಇಒ ಅರವಿಂದ ಶಾಸ್ತ್ರಿ, ಆನಂದಪ್ಪ, ಕೆ.ಜಿ. ಶಿವಕುಮಾರ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್‌, ಪಾಲಿಕೆ ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಕೆ. ಚಮನ್ ಸಾಬ್‌, ಎ.ಬಿ. ರಹೀಂ, ಸುರಭಿ ಎಸ್.ಶಿವಮೂರ್ತಿ, ನಲ್ಲೂರು ರಾಘವೇಂದ್ರ, ಎಸ್.ಮಲ್ಲಿಕಾರ್ಜುನ, ವೆಂಕಟೇಶ ನಾಯ್ಕ ಭಾಗವಹಿಸುವರು ಎಂದು ಹೇಳಿದರು.

ಅ.6ರಂದು ಪ್ರಶಸ್ತಿ ಪ್ರದಾನ:

ಅ.6ರಂದು ಸಂಜೆ 5 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪುನೀತ ರಾಜಕುಮಾರ ಕಪ್ ಪ್ರಶಸ್ತಿ ಪ್ರದಾನ ಮಾಡುವರು. ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಜಿ.ಎಸ್. ಮಂಜುನಾಥ ಗಡಿಗುಡಾಳ, ಮಂಜುನಾಥ, ಎ.ನಾಗರಾಜ, ಹುಲ್ಮನೆ ಗಣೇಶ, ನಲ್ಲೂರು ರಾಘವೇಂದ್ರ, ಕಣ್ಣಾಳ್ ಅಂಜಿನಪ್ಪ, ಎಲ್.ಎಂ.ಎಚ್. ಸಾಗರ್‌, ಶಿವರತನ್‌, ಪ್ರವೀಣ ಭೋವಿ, ಮಧು ಪವಾರ್‌, ರಾಜು ಭಂಡಾರಿ, ಶ್ರೀಕಾಂತ ಬಗರೆ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪಂದ್ಯಾವಳಿ ಪ್ರಾಯೋಜಕರಾದ ಜೈನ್ ಟ್ರಿನಿಟಿ ಕಾಲೇಜಿನ ಮುಖ್ಯಸ್ಥರಾದ ವಿಜಯ ಜೈನ್‌, ಮಂಗಳ ಜ್ಯೋತಿ ವಿದ್ಯಾಸಂಸ್ಥೆಯ ಜೆ.ಎಚ್.ಪಟೇಲ್‌ ಕಾಲೇಜಿನ ಮುಖ್ಯಸ್ಥರಾದ ಮುಸ್ತಫಾ, ಮಕಾಯ್‌, ಮಕಾಯ್‌ ಎಪಿಎಸ್‌ ದಾವಣಗೆರೆ ವಿತರಕರಾದ ಶಿವಕುಮಾರ ಪಾಲ್ಗೊಳ್ಳುವರು. ಬಿ.ಎಚ್.ವಸಂತ, ಪ್ರಮೋದರಾಜ ಮೋರೆ, ಫಿಡೇ ತೀರ್ಪುಗಾರರಾದ ಎಂ.ಬಸವರಾಜ ಭಾಗವಹಿಸುವರು ಎಂದರು.

ಆಸಕ್ತ ಕ್ರೀಡಾಪಟುಗಳು ಅ.3ರ ಸಂಜೆ 5ರ ಒಳಗಾಗಿ ** Chessfee.com ** ಅಥವಾ ** Circlechess.com ಈ ವಿಳಾಸದಲ್ಲಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಚೆಸ್ ಕ್ಲಬ್ ಕಾರ್ಯದರ್ಶಿ ಯುವರಾಜ (ಮೊ: 99456-13469), ಮಂಜುಳಾ (72593-10197) ಇಲ್ಲಿಗೆ ಸಂಪರ್ಕಿಸಬೇಕು ಎಂದು ದಿನೇಶ ಶೆಟ್ಟಿ ಮಾಹಿತಿ ನೀಡಿದರು.

ಸಂಸ್ಥೆ ಕಾರ್ಯದರ್ಶಿ ಯುವರಾಜ, ಕರಿಬಸಪ್ಪ, ಪವನಕುಮಾರ, ವೈ.ತರುಣ್, ಪ್ರತಾಪ ಕುಮಾರ, ಶ್ರೀಕಾಂತ ಬಗರೆ ಇತರರು ಇದ್ದರು.

- - - -25ಕೆಡಿವಿಜಿ1:

ದಾವಣಗೆರೆಯಲ್ಲಿ ಬುಧವಾರ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.