ಜಿಲ್ಲಾ ಮಟ್ಟದ ನೆರೆಹೊರೆಯುವ ಸಂಸತ್ತು ಅಣಕು ಅಧಿವೇಶನ

| Published : Mar 30 2024, 12:54 AM IST

ಜಿಲ್ಲಾ ಮಟ್ಟದ ನೆರೆಹೊರೆಯುವ ಸಂಸತ್ತು ಅಣಕು ಅಧಿವೇಶನ
Share this Article
  • FB
  • TW
  • Linkdin
  • Email

ಸಾರಾಂಶ

. ಯುವಕರು ಸ್ವಚ್ಛತಾ ಅಭಿಯಾನಗಳು ಮತ್ತು ಆರೋಗ್ಯ ಕುರಿತಾದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮೇಕೆಯು ಸ್ಪರ್ಶಿಸದ ಹಸಿರು ತುಂಡು ಇಲ್ಲ ಎಂಬ ಮಾತಿನಂತೆ ಯುವಕರು ಮಾಡಲು ಸಾಧ್ಯವಾಗದ ಕೆಲಸಗಳಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಹೆಬ್ಬಾಳ್‌ ಹೊರ ವರ್ತುಲ ರಸ್ತೆಯಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವು ನೆಹರು ಯುವ ಕೇಂದ್ರ, ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಜಿಲ್ಲಾ ಮಟ್ಟದ ನೆರೆ ಹೊರೆಯುವ ಸಂಸತ್ತು ಎಂಬ ಸಂಸತ್ತಿನ ಅಧಿವೇಶನದ ಅಣುಕು ಕಾರ್ಯಕ್ರಮ ನಡೆಯಿತು.

ಕೇಂದ್ರ ಸರ್ಕಾರದ ಯುವ ವ್ಯವಹಾರಗಳ ಸಚಿವಾಲಯವನ್ನು ಪ್ರತಿನಿಧಿಸುವ ದಕ್ಷಿಣ ರಾಜ್ಯಗಳ ಎನ್.ವೈ.ಕೆ.ಎಸ್. ನ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ವೈಯಕ್ತಿಕ ಕ್ರಿಯೆಗಳ ಸಾರ್ವತ್ರಿಕ ಪರಿಣಾಮಗಳನ್ನು ಹೇಳುವುದರೊಂದಿಗೆ ನೆಹರು ಯುವ ಕೇಂದ್ರವು ದೇಶಾದ್ಯಂತ 766 ಶಾಖೆಗಳನ್ನು ಹೊಂದಿದ್ದು, ಯುವಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಯುವಕರು ಸ್ವಚ್ಛತಾ ಅಭಿಯಾನಗಳು ಮತ್ತು ಆರೋಗ್ಯ ಕುರಿತಾದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮೇಕೆಯು ಸ್ಪರ್ಶಿಸದ ಹಸಿರು ತುಂಡು ಇಲ್ಲ ಎಂಬ ಮಾತಿನಂತೆ ಯುವಕರು ಮಾಡಲು ಸಾಧ್ಯವಾಗದ ಕೆಲಸಗಳಿಲ್ಲ ಎಂದರು.

ಮಹಾನಗರ ಪಾಲಿಕೆಯ ವಲಯ 5 ರ ಆಯುಕ್ತ ರೇಖಾ ಜೆ. ಶೆಟ್ಟಿ ಮಾತನಾಡಿ, ಯುವಕರು 18 ವರ್ಷ ತುಂಬಿದ ಮೇಲೆ ಮತದಾನವನ್ನು ಮಾಡಬೇಕು. ಇದು ಕೇವಲ ಒಂದು ಸವಲತ್ತು ಮಾತ್ರವಲ್ಲ, ಇದು ನಾಗರಿಕ ಕರ್ತವ್ಯವಾಗಿದೆ. ವಿದ್ಯಾರ್ಥಿಗಳೆಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಎಲ್ಲರೂ ಆ ಮೂಲಕ ಪ್ರತಿಜ್ಞೆ ಸ್ವೀಕರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ.ಕೆ. ಸೌಮ್ಯಈರಪ್ಪ ಮಾತನಾಡಿದರು.

ವಿದ್ಯಾರ್ಥಿಗಳಿಗಾಗಿ ಭಾರತದಲ್ಲಿ ಉಚಿತ ಶಿಕ್ಷಣದ ಅನುಷ್ಟಾನ ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದ ಅಣುಕು ಸಂಸತ್ತು ಅಧಿವೇಶನ ನಡೆಯಿತು. ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಬಿಸಿಎ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಧಿವೇಶನದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ನೆಹರು ಯುವ ಕೇಂದ್ರದಿಂದ ನಗದು ಬಹುಮಾನ ನೀಡಲಾಯಿತು.

ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಎನ್‌. ದೀಕ್ಷಾ [ಪ್ರಥಮ], ದ್ವಿತೀಯ ಬಿಸಿಎ ವಿದ್ಯಾರ್ಥಿ ಕೆ.ಎಸ್‌. ಯಶವಂತ್‌ [ದ್ವಿತೀಯ], ಪ್ರಥಮ ಬಿಸಿಎ ವಿದ್ಯಾರ್ಥಿ ಎಸ್‌.ಎನ್‌. ಹೇಮಂತ್‌ [ತತೀಯ] ಬಹುಮಾನ ಪಡೆದುಕೊಂಡರು.

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಆರ್‌. ರಾಘವೇಂದ್ರ, ಎನ್.ವೈ,ಕೆ,ಎಸ್, ನ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್‌ ಚವಾರೆ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಬೋಧಕರು ಇದ್ದರು.