ತರೀಕೆರೆ: ನೈಸರ್ಗಿಕ ಕೃಷಿಯಿಂದ ನೀರಿನ ಬಳಕೆ ಕಡಿಮೆಯಾಗಿ ಕೃಷಿ ವೆಚ್ಚ ತಗ್ಗಿಸಬಹುದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಶಂಕರ ಹೇಳಿದ್ದಾರೆ.

- ಗೋಪಾಲ ಗ್ರಾಮದಲ್ಲಿ ನೈಸರ್ಗಿಕ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮ

ತರೀಕೆರೆ: ನೈಸರ್ಗಿಕ ಕೃಷಿಯಿಂದ ನೀರಿನ ಬಳಕೆ ಕಡಿಮೆಯಾಗಿ ಕೃಷಿ ವೆಚ್ಚ ತಗ್ಗಿಸಬಹುದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಶಂಕರ ಹೇಳಿದ್ದಾರೆ. ಗೋಪಾಲ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೈತ ಸಂಪರ್ಕ ಕೇಂದ್ರ ಲಕ್ಕವಳ್ಳಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಲಿಂಗದಹಳ್ಳಿ ಸಹಯೋಗದಲ್ಲಿ ರೈತರಿಗೆ ಕೃಷಿ ನೀರಾವರಿ ವಿಧಾನ, ನೈಸರ್ಗಿಕ ಕೃಷಿ ಬಗ್ಗೆ ನಡೆದ ಕೃಷಿ ತರಬೇತಿಯಲ್ಲಿ ಮಾತನಾಡಿದರು. ಹೊರಗಿನಿಂದ ಖರೀದಿಸಿದ ಕೃಷಿ ರಸಗೊಬ್ಬರಗಳ ಮೇಲಿನ ಅವಲಂಬನೆ ತಗ್ಗಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಗುಣಮಟ್ಟ ಪುನರುಜ್ಜೀವನಗೊಳಿಸುತ್ತದೆ ಮತ್ತು ಜಲಾವೃತ, ಪ್ರವಾಹ, ಬರಗಾಲ ಇತ್ಯಾದಿ ಹವಾಮಾನ ಅಪಾಯಗಳಿಗೆ ಒಗ್ಗಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.ಈ ಪದ್ಧತಿಗಳು ರಸಗೊಬ್ಬರ, ಕೀಟನಾಶಕ ಇತ್ಯಾದಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಅಪಾಯ ಕಡಿಮೆ ಮಾಡುತ್ತವೆ. ರೈತರ ಕುಟುಂಬಕ್ಕೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಒದಗಿಸುತ್ತವೆ ಎಂದು ಹೇಳಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಘು ಕುಮಾರ್ ಮಾತನಾಡಿ ಜೀವಾಮೃತ ತಯಾರಿ, ಬಿಜಾಮೃತ ತಯಾರಿ, ಸಾವಯವ ಗೊಬ್ಬರ ತಯಾರಿ ಬಗ್ಗೆ ವಿವರ ಮಾಹಿತಿ ನೀಡಿದರು. ಜಿಲ್ಲಾ ಕೃಷಿ ತರಬೇತಿ ಸಂಸ್ಥೆ ಕೃಷಿ ಅಧಿಕಾರಿ ಕರಿಯಪ್ಪ ಸಂಸ್ಥೆ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ದರ್ಶನ್., ತೋಟಗಾರಿಕೆ ಇಲಾಖೆ ಸುರೇಶ್ ಬಾಬು, ಹನುಮಂತಪ್ಪ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಸಂತೋಷ, ತಮ್ಮಯ್ಯ, ಸೇವಾಪ್ರತಿನಿಧಿ ಗೀತಾ ಉಪಸ್ಥಿತರಿದ್ದರು.-

30ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ಗೋಪಾಲ ಗ್ರಾಮದಲ್ಲಿ ನೈಸರ್ಗಿಕ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.